ಹೊಸದಿಲ್ಲಿ: ಮೇಕ್ ಇನ್ ಇಂಡಿಯಾ ಹಾಗೂ ಆತ್ಮನಿರ್ಭರ ಭಾರತ ತತ್ತ್ವಕ್ಕೆ ಉತ್ತೇಜನ ನೀಡುವ ದಿಸೆಯಲ್ಲಿ ಕೇಂದ್ರ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದ್ದು, ಭಾರತೀಯ ಕಂಪನಿಗಳ ಸ್ವದೇಶಿ ವಸ್ತುಗಳ ಸಾಗಣೆ, ಮಾರಾಟಕ್ಕೆ ಅನುಕೂಲವಾಗುವ ದಿಸೆಯಲ್ಲಿ ಸಾರ್ವಜನಿಕ ಸಂಗ್ರಹಣೆ ಆದೇಶ (2017)ದ ನಿಯಮ ಸಡಿಲಗೊಳಿಸಿದೆ.
ಅದರಲ್ಲೂ, ಸರಕು ಸಾಗಣೆ ಕಂಪನಿಗಳು ದೇಶಿ ಉತ್ಪನ್ನಗಳ ಸಾಗಣೆ ಹಾಗೂ ಮಾರಾಟ ಪ್ರಮಾಣದ ಅನ್ವಯ ಶ್ರೇಣಿ 1, ಶ್ರೇಣಿ 2 ಹಾಗೂ ಶ್ರೇಣಿ 3 ಎಂದು ವಿಂಗಡಿಸಿದ್ದು, ಇದರ ಅನ್ವಯ ಸ್ವದೇಶಿ ವಸ್ತುಗಳ ಉತ್ಪಾದನೆ, ಸಾಗಣೆ ಹಾಗೂ ಮಾರಾಟಕ್ಕೆ ಉತ್ತೇಜನ ನೀಡುವುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ.
ನೂತನ ನಿಯಮದ ಅನ್ವಯ ಯಾವುದೇ ಕಂಪನಿಯು ಶೇ.50 ಅಥವಾ ಅದಕ್ಕಿಂತ ಹೆಚ್ಚಿನ ವಸ್ತುಗಳನ್ನು ಉತ್ಪಾದನೆ, ಸಾಗಣೆ ಅಥವಾ ಮಾರಾಟ ಮಾಡುತ್ತಿದ್ದರೆ, ಆ ಕಂಪನಿಯನ್ನು ಶ್ರೇಣಿ-1 ಎಂದು ಗುರುತಿಸಿ, ಅದಕ್ಕೆ ಕೇಂದ್ರ ಸರ್ಕಾರದ ಖರೀದಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.