Sunday, June 26, 2022

Latest Posts

ಮೇಘನಾ ರಾಜ್ ಭೇಟಿ ಮಾಡಿದ ಸ್ನೇಹಿತರು, ಯಾಕೆ ಗೊತ್ತಾ?

ಚಿರಂಜೀವಿ ಸರ್ಜಾ ನಿಧನ ಹೊಂದಿ ಮೂರು  ತಿಂಗಳು  ಕಳೆದುಹೋಯ್ತು. ಪ್ರೀತಿಸಿ ಮದುವೆಯಾಗಿದ್ದ ಮೇಘನಾಗೆ ಚಿರು ಸಾವು ಬರಸಿಡಿಲು ಆಗಿತ್ತು.   ಚಿರು ಸಾವಿನಿಂದ ಮೇಘನಾ ಅನು ಭವಿಸಿದ ನೋವನ್ನು ಇಡೀಯ ಕರ್ನಾಟಕವೇ ಕಂಡು ಮರುಗಿತ್ತು. ಮೇಘನಾ ಸಹ ನಿ ಧಾನಕ್ಕೆ ಮರಳಿ ಸಹಜ ಜೀವನದತ್ತ ಮರಳುತ್ತಿದ್ದಾರೆ. ನೋವಿನಲ್ಲಿ ಮುಳುಗಿದ್ದ ಮೇಘನಾ ರಾಜ್ ಕುಟುಂಬಕ್ಕೆ ಚಿತ್ರೋದ್ಯಮದ ಸ್ನೇಹಿತರು ‘ಭರವಸೆ ತುಂಬುವ ಯತ್ನ ಮಾಡುತ್ತಲೇ ಇದ್ದಾರೆ. ತೀವ್ರ ಆಘಾತದಲ್ಲಿದ್ದ ಮೇಘನಾ ರಾಜ್ ಅವರನ್ನು ಆಗಾಗ್ಗೆ ಚಿತ್ರೋದ್ಯಮದ ಗೆಳೆಯರು ಭೇಟಿಯಾಗುತ್ತಲೇ ಇದ್ದಾರೆ. ಆರಂಭದಲ್ಲಿ ಸಾಂತ್ವನ ಹೇಳಿ ಧೈರ್ಯ ತುಂಬಿದ್ದ ಚಿತ್ರೋದ್ಯಮ ಸ್ನೇಹಿತರು ಈಗ ಮೇಘನಾರನ್ನು ನೋವಿನಿಂದ ಹೊರತರುವ ಯತ್ನ ಮಾಡುತ್ತಿದ್ದಾರೆ.ಮೇಘನಾ ರಾಜ್ ಮನೆಗೆ ಇಂದು ಹಿರಿಯ ನಟಿಯರಾದ ಶ್ರುತಿ, ಸು ಧಾರಾಣಿ, ಮಾಳವಿಕಾ ಅವಿನಾಶ್ ಅವರುಗಳು ಭೇಟಿ ನೀಡಿದ್ದರು. ಹಲವು ಸಮಯವನ್ನು ಒಟ್ಟಿಗೆ ಕಳೆದ ಇವರು ಮೇಘನಾಗೆ ಹೊಸ ಹುರುಪು ತುಂಬುವ ಯತ್ನ ಮಾಡಿದ್ದಾರೆ.ಶ್ರುತಿ, ಸು ಧಾರಾಣಿ ಅವರುಗಳು ಸುಂದರ್ ರಾಜ್, ಪ್ರಮಿಳಾ ಜೋಷಾಯ್ ಅವರಿಗೂ ಆಪ್ತರು, ಮೇಘನಾ ರಾಜ್ಗಿಂತಲೂ ಹಿರಿಯರಾದರೂ ಉತ್ತಮ ಬಾಂಧವ್ಯವನ್ನೇ ಹೊಂದಿದ್ದವರು. ಹಾಗಾಗಿ ಮನೆಗೆ ಭೇಟಿ ನೀಡಿ ಒಟ್ಟಿಗೆ ಸಮಯ ಕಳೆದಿದ್ದಾರೆ. ಗರ್ಭಿಣಿ ಆಗಿರುವ ಮೇಘನಾ ರಾಜ್ ಗೆ ಈ ಸಮಯದಲ್ಲಿ ಇಂಥಹಾ ಸಾಂಗತ್ಯದ ಅಗತ್ಯವೂ ಇದೆ. ಅದನ್ನು ಚಿತ್ರೋದ್ಯಮದ ಗೆಳೆಯರು ಅರ್ಥ ಮಾಡಿಕೊಂಡಿದ್ದಾರೆ. ಎಲ್ಲ ಸ್ನೇಹಿತೆಯರು ಒಟ್ಟಿಗೆ  ಫೋಟೋ ತೆಗೆಸಿಕೊಂಡಿರುವ ಚಿತ್ರದಲ್ಲಿ ಮೇಘನಾ ಮುಖದಲ್ಲಿ ಕಿರುನಗೆ ಕಾಣುತ್ತಿದೆ.

ಚಿರು ಅಗಲಿಕೆ ನಂತರ ಮೇಘನಾ ರಾಜ್ ಅವರನ್ನು ಹಲವಾರು ಸಿನಿಮಾ ಬಂಧುಗಳು ಭೇಟಿ ಮಾಡಿ ಮಾತನಾಡಿದ್ದಾರೆ. ರಾಘವೇಂದ್ರ ರಾಜ್‌ಕುಮಾರ್ ಕುಟುಂಬ, ಮಲಯಾಳಂ ಸಿನಿಮಾದ ಮೇಘನಾ ಸ್ನೇಹಿತರು ಇನ್ನೂ ಅನೇಕರು ಭೇಟಿ ಮಾಡಿದ್ದರು. ಸಿದ್ದರಾಮಯ್ಯ ಸೊಸೆ ಸ್ಮಿತಾ ರಾಕೇಶ್ ಸಿದ್ದರಾಮಯ್ಯ ಸಹ ಭೇಟಿ ಮಾಡಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss