Tuesday, August 16, 2022

Latest Posts

‘ಮೇಜರ್’, ‘ಚಾಂಪ್’ ಜೊತೆಗೆ ಠಾಕುಠೀಕಾಗಿ ಶ್ವೇತಭವನ ಪ್ರವೇಶಿಸಲಿದ್ದಾರೆ ಪ್ರೆಸಿಡೆಂಟ್ ಬೈಡನ್!

ಹೊಸ ದಿಗಂತ ಆನ್ ಲೈನ್ ಡೆಸ್ಕ್ :

ಅಮೆರಿಕ ಚುನಾವಣಿಯಲ್ಲಿ ಪ್ರಚಂಡ ಗೆಲುವು ಪಡೆಡಿರುವ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಬೈಡನ್, ‘ಮೇಜರ್’ ಹಾಗೂ ‘ಚಾಂಪ್’ ಜೊತೆಗೆ ಶ್ವೇತಭವನ ಪ್ರವೇಶಿಸಲಿದ್ದಾರೆ! ಇದರೊಂದಿಗೆ ಬೈಡನ್ ಮತ್ತೊಂದು ದಾಖಲೆ ಬರೆಯಲಿದ್ದಾರೆ.
ಇವರ್ಯಾರು ಮಾರ್ರೆ ಹೆಸರೇ ಕೇಳದ ಹೊಸಬ್ಬರು ಅಂತ ಹುಬ್ಬೇರಿಸಬೇಡಿ, ಇವು ಮಿ. ಪ್ರೆಸಿಡೆಂಟ್ ನ ಮುದ್ದಿನ ಜರ್ಮನ್ ಶೆಫರ್ಡ್ ತಳಿಯ ಶ್ವಾನಗಳು. ಈ ಎರಡು ಶ್ವಾನಗಳು ಇನ್ನುಮುಂದೆ ಅಮೆರಿಕಾದ ಪ್ರಥಮ ಶ್ವಾನಗಳು ಎನಿಸಲಿವೆ. ಅಲ್ಲದೆ ಶ್ವೇತಭವನವನ್ನು ತಮ್ಮ ಮುದ್ದಿನ ಶ್ವಾನಗಳ ಜೊತೆಗೆ ಪ್ರವೇಶಿಸಿದ ಮೊದಲ ಅಮೆರಿಕಾ ಅಧ್ಯಕ್ಷರು ಎಂದು ಜೋ ಬೈಡನ್ ಎನಿಸಲಿದ್ದಾರೆ.
ಕಳೆದ ನಾಲ್ಕು ವರ್ಷಗಳಿಂದ ಶ್ವೇತಭವನದಲ್ಲಿ ಶ್ವಾನ ನೆರಳೂ ಕಂಡಿಲ್ಲ. ಇದಕ್ಕೆ ಕಾರಣ ಈ ಹಿಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ವಾನಗಳನ್ನು ಸಾಕಿರಲಿಲ್ಲ. ಅಲ್ಲದೆ ಚುನಾವಣಾ ಪ್ರಚಾರದ ಸಂದರ್ಭ ಟ್ರಂಪ್, ಜೋ ಬೈಡನ್ ನಡೆಯುವುದನ್ನು ನೋಡುತ್ತಿದ್ದರೆ ಶ್ವಾನವು ನಡೆದಂತೆ ಭಾಸವಾಗುತ್ತದೆ. ಅಮೆರಿಕಾ ಶ್ವೇತಭವನದ ಹಸಿರು ಹುಲ್ಲುಹಾಸಿನ ಮೇಲೆ ಶ್ವಾನ ನಡೆಯುವುದನ್ನು ನೋಡಿಕೊಂಡು ಹೇಗೆ ಸಹಿಸಲು ಆಗುತ್ತದೆ ಎಂದು ಟೀಕಿಸಿದ್ದರು. ಇದೇ ಸಂದರ್ಭ ವಿಡಿಯೋ ಒಂದನ್ನು ಮಾಡಿದ್ದ ಬೈಡನ್, ಅಮೆರಿಕಾದ ಶ್ವೇತಭವನದಲ್ಲಿ ಶ್ವಾನವನ್ನು ಮರಳಿ ಕರೆ ತರುತ್ತೇವೆ ಎಂದು ತಿರುಗೇಟು ನೀಡಿದ್ದರು. ಇದೀಗ ಹೇಳಿದ್ದನ್ನು ಮಾಡಿ ತೋರಿಸಿದ್ದಾರೆ ಬೈಡನ್!

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss