Wednesday, July 6, 2022

Latest Posts

ಮೇದಾರ ಸಮಾಜದ ಪ್ರತಿಯೊಬ್ಬರು ಸಂಘಟಿತರಾಗುವ ಮೂಲಕ ಸಮಾಜದ ಏಳಿಗೆಗೆ ಶ್ರಮಿಸಿ: ಇಮ್ಮಡಿ ಸ್ವಾಮೀಜಿ

ಹೊಸದಿಗಂತ ವರದಿ, ಶಿವಮೊಗ್ಗ:

ಮೇದಾರ ಸಮಾಜದ ಪ್ರತಿಯೊಬ್ಬರು ಸಂಘಟಿತರಾಗುವ ಮೂಲಕ ಸಮಾಜದ ಏಳಿಗೆಗೆ ಶ್ರಮಿಸಬೇಕು ಎಂದು ಚಿತ್ರದುರ್ಗದ ಇಮ್ಮಡಿ ಬಸವ ಕೇತೇಶ್ವರ ಸ್ವಾಮೀಜಿ ಹೇಳಿದರು.
ಶಿಕಾರಿಪುರ ಪಟ್ಟಣದ ಹಳೇ ಮೇದಾರ ಕೇರಿಯಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಮೇದಾರ ಸಮಾಜ ಇಂದಿಗೂ ಅಭಿವೃದ್ಧಿ ಹೊಂದಿಲ್ಲ. ಇದಕ್ಕೆ ಮುಖ್ಯ ಕಾರಣ ಬಡತನ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವುದು. ಈ ಹಿನ್ನೆಲೆಯಲ್ಲಿ ಮೇದಾರ ಸಮಾಜದ ಬಾಂಧವರು ಸಂಘ ಸಂಸ್ಥೆ ಕಟ್ಟಿಕೊಂಡು ಸಂಘಟಿತರಾಗುವ ಮೂಲಕ ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದು ಸಲಹೆ ನೀಡಿದರು.
ಸಮಾರಂಭ ಉದ್ಘಾಟಿಸಿ ಮಾತನಾಡಿದ ಸಂಸದ ಬಿ.ವೈ. ರಾಘವೇಂದ್ರ, ಮೇದಾರ ಸಮಾಜ ನಂಬಿಕೆ ಹಾಗೂ ವಿಶ್ವಾಸಕ್ಕೆ ಅರ್ಹವಾಗಿದೆ. ಯಾರ ಹತ್ತಿರವೂ ಕೈ ಚಾಚದೇ ಸ್ವಾಭಿಮಾನದ ಬದುಕು ಸಾಗಿಸುತ್ತಿದ್ದಾರೆ. ಜೊತೆಗೆ ಕಾಡಲ್ಲಿ ಸಿಗುವಂತಹ ಬಿದಿರು ತಂದು ಅದನ್ನು ಎಳೆ ಎಳೆಯಾಗಿ ಬಿಡಿಸಿಕೊಂಡು ಅದರಿಂದ ಬುಟ್ಟಿ, ಚಾಪೆ ಮಾಡುವ ಮೂಲಕ ತಮ್ಮ ಕುಲ ಕಸುಬು ನಡೆಸಿಕೊಂಡು ಬರುತ್ತಿರುವುದು ವಿಶೇಷ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಮೇದಾರ ಸಮಾಜಕ್ಕೆ ಶಕ್ತಿ ತುಂಬಲು ಹಾಗೂ ಸಮಾಜವನ್ನು ಕಟ್ಟಲು ಇಂದು ಚಿತ್ರದುರ್ಗ ಸ್ವಾಮೀಜಿ ಆಗಮಿಸಿದ್ದಾರೆ. ಜನಾಂಗದ ಏಳಿಗೆ ನಿಟ್ಟಿನಲ್ಲಿ ಸರ್ಕಾರದಿಂದ ದೊರೆಯುವ ಸಹಕಾರ, ಸವಲತ್ತುಗಳನ್ನು ಒದಗಿಸುವ ಭರವಸೆ ನೀಡಿದರು.
ಈ ವೇಳೆ ಪುರಸಭೆ ಅಧ್ಯಕ್ಷೆ ಲಕ್ಷ್ಮೀ, ಸದಸ್ಯರಾದ ಭದ್ರಾಪುರ ಪಾಲಾಕ್ಷಪ್ಪ, ಮೇದಾರ ಸಮಾಜದ ಮುಖಂಡರಾದ ವಿಜಯೇಂದ್ರ ಎಂ.ಟಿ, ಚಂದ್ರಪ್ಪ, ಕರಿಬಸಪ್ಪ, ರಾಘವೇಂದ್ರ ಎಂ.ವಿ, ಜಗದೀಶ್, ಸುರೇಶ್, ಪ್ರಕಾಶ್, ಪ್ರಸನ್ನ, ಜ್ಞಾನೇಶ್ವರ, ವಿದ್ಯಾಧರ ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss