Sunday, July 3, 2022

Latest Posts

ಮೇಯರ್ ಆಗಿ ಸಾಧನೆಯ ಕೆಲಸ ಏನು ಮಾಡಲಾಗಲಿಲ್ಲ: ಮೇಯರ್ ತಸ್ನಿಂ ಬೇಸರ

ಹೊಸದಿಗಂತ ವರದಿ,ಮೈಸೂರು:

ಕೊರೋನಾ ಕಾರಣ ಹಾಗೂ ಲಾಕ್ ಡೌನ್ ಹಿನ್ನೆಲೆಯಲ್ಲಿ ಮೇಯರ್ ಆಗಿ ದೊಡ್ಡ ಸಾಧನೆಯ ಕೆಲಸ ಏನು ಮಾಡಲಾಗಲಿಲ್ಲ ಎಂದು ಮೈಸೂರು ಮಹಾನಗರ ಪಾಲಿಕೆಯ ಮೇಯರ್ ತಸ್ನಿಂ ಬೇಸರ ವ್ಯಕ್ತಪಡಿಸಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಮೈಸೂರು ಪಾಲಿಕೆ ಇತಿಹಾಸದಲ್ಲೇ ಮೊದಲ ಬಾರಿಗೆ ಒಬ್ಬ ಮುಸ್ಲಿಂ ಮಹಿಳೆ ಮೇಯರ್ ಆಗಿದ್ದರೂ, ಹೇಳಿಕೊಳ್ಳುವಂತಹ ಅಭಿವೃದ್ಧಿ ಕೆಲಸ ಮಾಡಲು ಆಗಲಿಲ್ಲ, ಪಾಲಿಕೆಗೆ ಕೊರೋನಾದಿಂದಾಗಿ ಸರ್ಕಾರದಿಂದ ಸೂಕ್ತ ಅನುದಾನ ಸಿಗಲಿಲ್ಲ, ಕೇವಲ ಮೂರ್ನಾಲ್ಕು ತಿಂಗಳುಗಳಷ್ಟೇ ಅಧಿಕಾರ ನಡೆಸಿದೆ. ನನಗೆ ಸಿಕ್ಕ ಕೇವಲ 4ತಿಂಗಳ ಅವಧಿಯಲ್ಲಿ ತೃಪ್ತಿದಾಯಕ ಆಡಳಿತ ಮಾಡಿದ್ದೇನೆ ಎಂದರು.

ನಗರಪಾಲಿಕೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮುಂದುವರಿಯುವ ಕುರಿತು ಉಪಮೇಯರ್ ಶ್ರೀಧರ್ ಮಾತನಾಡಿ, ಜೆಡಿಎಸ್ ಗೆ ಉತ್ತಮ ಬೆಂಬಲ ನೀಡಿದ್ದೇವೆ. ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಮುರಿಯೋದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನಮ್ಮ ಅವಧಿಯಲ್ಲಿ ಅಭಿವೃದ್ಧಿ ಕೆಲಸಗಳು ನಡೆಯಲಿಲ್ಲ. ಬದಲಾಗಿ ಮೇಯರ್ ಹಾಗೂ ನನ್ನಿಂದ ಜನರ ಸೇವೆ ಚೆನ್ನಾಗಿ ಆಗಿದೆ. ಕೊರೊನ ಸಂದರ್ಭದಲ್ಲಿ ಜನ ಸೇವೆ ಅಗತ್ಯವಾಗಿತ್ತು. ಅದನ್ನು ಮಾಡಿದ್ದೇವೆ ಎಂದಿದ್ದಾರೆ.

ಈ ಅವಧಿಯಲ್ಲಿ ಜೆಡಿಎಸ್ ಗೆ ಉತ್ತಮವಾಗಿ ಬೆಂಬಲ ನೀಡಿದ್ದೇವೆ. ಈ ಬಾರಿಯೂ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಇರಲಿದೆ. ಜೆಡಿಎಸ್ ನಲ್ಲಿ 5 ಮಂದಿ ಮುಸ್ಲಿಂ ಸದಸ್ಯರಿದ್ದಾರೆ ಅವರು ಬಿಜೆಪಿ ಜೊತೆ ಕೈಜೋಡಿಸಲು ಒಪ್ಪುವುದಿಲ್ಲ. ಹೀಗಾಗಿ, ಜೆಡಿಎಸ್ ಮುಂದಿನ ಅವಧಿಗೂ ನಮಗೆ ಬೆಂಬಲ ನೀಡಲಿದೆ ಎಂದು ವಿಶ್ವಾಸವ್ಯಕ್ತಪಡಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss