ಮೇಲಾಧಿಕಾರಿಗಳ ಕಿರುಕುಳ ಆರೋಪ: ಸೆಸ್ಕಾಂ ಸಿಬ್ಬಂದಿ ಆತ್ಮಹತ್ಯೆಗೆ ಯತ್ನ 

ಹೊಸದಿಗಂತ ವರದಿ,  ಪಿರಿಯಾಪಟ್ಟಣ :

ಮೇಲಾಧಿಕಾರಿಗಳು ನನಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಹಾಗೂ ನನಗೆ ಮೂರು ವರ್ಷದಿಂದ ಸಂಬಳ ನೀಡಿಲ್ಲ ಎಂದು ಬೇಸೆತ್ತು ಸೆಸ್ಕಾಂ ಸಿಬ್ಬಂದಿ ನಟೇಶ್ (50) ಕಚೇರಿಯಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತಾಲೂಕಿನ ಬೆಟ್ಟದಪುರದಲ್ಲಿ ನಡೆದಿದೆ.

ಆತ್ಮಹತ್ಯೆಗೆ ಯತ್ನಿಸಿರುವ ತಾಲೂಕಿನ ವಿಜಿ ಕೊಪ್ಪಲು ಗ್ರಾಮದ ನಟೇಶ್(50) ಆತ್ಮಹತ್ಯೆಗೂ ಮುನ್ನ ವಾಯ್ಸ್ ರೆಕಾರ್ಡ್ ಮಾಡಿ ಆರೋಪಿಸಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಅವರು ವಾಯ್ಸ್ ರೆಕಾರ್ಡ್ ನಲ್ಲಿ ಸುಮಾರು 20 ವರ್ಷದಿಂದ ಸೆಸ್ಕಾಂನಲ್ಲಿ ಗುತ್ತಿಗೆ ಆಧಾರದ ಮೇಲೆ ಬಿಲ್ ಕಲೆಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದು ಕಳೆದ ಮೂರು ನಾಲ್ಕು ವರ್ಷದಿಂದ ಬೆಟ್ಟದಪುರ ಉಪ ವಿಭಾಗಕ್ಕೆ ನನ್ನನ್ನು ವರ್ಗಾವಣೆ ಮಾಡಲಾಗಿದ್ದು  ನಾನು ನಿಷ್ಠೆಯಿಂದ ಪ್ರಾಮಾಣಿಕವಾಗಿ ಕೆಲಸ ಮಾಡಿಕೊಂಡು ಬಂದಿರುತ್ತೇನೆ ಆದರೆ ಬೆಟ್ಟದಪುರ ಉಪ ವಿಭಾಗದ ಎಇಇ ಲಕ್ಷ್ಮೀಶ್,  ಸೀಗೂರು ಶಾಖೆಯ ಜೆಇ ಯಾದ ರವಿ, ಹಾಗೂ ಹಿರಿಯ ಸಹಾಯಕ ನವೀನ್ ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡಿ ನಾನು ಗ್ರಾಹಕರ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದೇನೆ ಎಂದು ಮಾನಸಿಕವಾಗಿ ನನಗೆ ತೊಂದರೆ ನೀಡಿದ್ದಾರೆ ಹಾಗೂ ನನಗೆ ಸುಮಾರು 34 ತಿಂಗಳುಗಳಿಂದ ಸಂಬಳವನ್ನು ನೀಡದೆ ನನ್ನನ್ನು ಕೆಲಸ ಮಾಡಲು ಬಿಡದೆ ನನಗೆ ಕಿರುಕುಳ ನೀಡಿದ್ದಾರೆ ಇದರಿಂದ ನನ್ನ ಕುಟುಂಬ ನಿರ್ವಹಣೆ ಮಾಡುವುದು ಕಷ್ಟವಾಗಿದೆ ಇದರಿಂದ ಬೆಸೆತ್ತು ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ನನ್ನ ಸಾವಿಗೆ ಎಇಇ ಲಕ್ಷ್ಮೀಶ್, ಜೆಇ  ರವಿ  ಹಾಗೂ ನವೀನ್ ಈ  ಮೂರು ಜನರೇ ಕಾರಣ ಎಂದು ಆರೋಪಿಸಿ  ವಿಷ ಸೇವಿಸಿ ಆತ್ಮಹತ್ಯೆ ಯತ್ನಿಸಿದ್ದಾರೆ.

ಆತ್ಮಹತ್ಯೆಗೆ ಯತ್ನಿಸಿದ ನಟೇಶ್ ರವರು  ಮೈಸೂರಿನ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!