Thursday, June 30, 2022

Latest Posts

ಮೇಲುಕೋಟೆಗೆ ಆಗಮಿಸಿ ಚೆಲುವನಾರಾಯಣಸ್ವಾಮಿ ದರ್ಶನ ಪಡೆದ ಸಚಿವ ಸುರೇಶ್‌ಕುಮಾರ್ ದಂಪತಿ

ಹೊಸ ದಿಗಂತ ವರದಿ, ಮೇಲುಕೋಟೆ:

ಅತ್ಯಂತ ರಮಣೀಯವಾಗಿರುವ ಮೇಲುಕೋಟೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರ್ಕಾರ ಸುಸಜ್ಜಿತ ಧಾರ್ಮಿಕ ಪ್ರವಾಸಿಕೇಂದ್ರವನ್ನಾಗಿ ಅಭಿವೃದ್ಧಿಪಡಿಸುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದರು. ಅವರು ಶನಿವಾರ ದಂಪತಿ ಸಮೇತ ಮೇಲುಕೋಟೆಗೆ ಆಗಮಿಸಿ ಚೆಲುವನಾರಾಯಣಸ್ವಾಮಿ ದರ್ಶನಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ನಮ್ಮ ಸರ್ಕಾರ ಕ್ಷೇತ್ರದ ಅಭಿವೃದ್ಧಿಗೆ ಪ್ರವಾಸೋಧ್ಯಮ ಇಲಾಖೆಯ ಮೂಲಕ ೭ ಕೋಟಿರೂ ಬಿಡುಗಡೆ ಮಾಡಿದೆ ಮುಖ್ಯಮಂತ್ರಿಗಳೂ ಅನ್ನದಾನಭವನ ನಿರ್ಮಾಣಕ್ಕೆ ೨ ಕೋಟಿರೂ ಅನುದಾನ ನೀಡಿದ್ದಾರೆ. ನಾನೂ ಕೂಡ ವಿವಿಧ ಇಲಾಖೆ ಸಚಿವರನ್ನು ಸಮನ್ವಯಗೊಳಿಸಿ ಮೇಲುಕೋಟೆಯ ಅಭಿವೃದ್ಧಿಗೆ ಅಗತ್ಯಸಹಕಾರ ನೀಡುತ್ತೇನೆ ಎಂದರು.
ಹೊಸ ರಥಕ್ಕೆ ಮನವಿ : ಶಿಕ್ಷಣ ಸಚಿವರಿಗೆ ರಾಮಾನುಜರ ಸನ್ನಿಧಿ ಅರ್ಚಕರಾದ ವಿದ್ವಾನ್ ರಾಮಪ್ರಿಯ ಮನವಿ ಮಾಡಿ ಮಧ್ಯಪ್ರದೇಶದ ಮುಖ್ಯಮಂತ್ರಿ ಚೆಲುವನಿಗೆ ಬೆಳ್ಳಿಯ ರಥನಿರ್ಮಾಣ ಮಾಡಿಕೊಡಲು ಸಂಕಲ್ಪಮಾಡಿದ್ದಾರೆ. ತಾವೂ ಸಹ ನಮ್ಮ ಮುಖ್ಯಮಂತ್ರಿ ಯಡಿಯೂರಪ್ಪ ಗಮನಸೆಳೆದು ಕರ್ನಾಟಕ ಸರ್ಕಾರದವತಿಯಿಂದ ಜಾತ್ರಾಮಹೋತ್ಸವಗಳಲ್ಲಿ ಮಹಾರಥ ಮಾಡಿಸಿಕೊಡಲು ಸಹಕಾರ ನೀಡಿ ಎಂದು ಕೋರಿದರು ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು ಜಿಲ್ಲಾಧಿಕಾರಿಗಳ ಶಿಪಾರಸ್ಸಿನೊಂದಿಗೆ ಸೂಕ್ತಪ್ರಸ್ತಾವನೆ ಜೊತೆ ಬಂದರೆ ಅಗತ್ಯಸಹಕಾರ ನೀಡುತ್ತೇನೆ ಎಂದು ಭರವಸೆ ನೀಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss