ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………………………………………
ಹೊಸದಿಗಂತ ಆನ್ ಲೈನ್ ಡೆಸ್ಕ್:
ಭಾರತದಿಂದ ಬರುವ ಆಸ್ಟ್ರೇಲಿಯನ್ನಿರಿಗೆ ವಿಧಿಸಿದ ನಿರ್ಬಂಧವನ್ನು ಮೇ 15ಕ್ಕೆ ಹಿಂತೆಗೆಯಲಾಗುವುದು ಎಂದು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ತಿಳಿಸಿದ್ದಾರೆ.
ಆಸ್ಟ್ರೇಲಿಯಾ ಸರ್ಕಾರವು ತನ್ನ ನಾಗರಿಕರಿಗೆ ಸ್ವದೇಶಕ್ಕೆ ಹಿಂದಿರುಗಲು ತಾತ್ಕಾಲಿಕ ನಿರ್ಬಂಧ ವಿಧಿಸಿತ್ತು, ಆಸ್ಟ್ರೇಲಿಯಾಗೆ ಬರುವ ಮುನ್ನ ನಾಗರಿಕರು 14 ದಿನ ಭಾರತದಲ್ಲಿದ್ದರೆ ಅಂಥವರು ಸ್ವದೇಶಕ್ಕೆ ಹಿಂದಿರುಗುವಂತಿಲ್ಲ. ಒಂದು ವೇಳೆ ಈ ನಿಷೇಧವನ್ನು ಮೀರಿದರೆ ಅವರಿಗೆ 5 ವರ್ಷಗಳ ಜೈಲು ಶಿಕ್ಷೆ ಹಾಗೂ ಭಾರಿ ಮೊತ್ತದ ತಂಡ ವಿಧಿಸಲಾಗುವುದು ಎಂದೂ ತಿಳಿಸಿತ್ತು.
ಇದೀಗ ಪ್ರಧಾನಿ ನರೇಂದ್ರ ಮೋದಿ ಮಾರಿಸನ್ ಜತೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದು, ಕೋವಿಡ್ ಸಮಯದಲ್ಲಿ ಸಹಕಾರ, ಇಂಡೊ-ಫೆಸಿಫಿಕ್ ವಲಯದಲ್ಲಿನ ಶಾಂತಿ ಮೊದಲಾದ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.
ಇದರ ಬೆನ್ನಲೇ ಮೇ 15 ರಂದು ಭಾರತದಿಂದ ಬರುವ ಮೊದಲ ವಿಮಾನ ಡಾರ್ವಿನ್ ನಗರ ವಿಮಾನ ನಿಲ್ದಾಣದಲ್ಲಿ ಇಳಿಯಲಿದೆ. ವಿಮಾನ ಪ್ರಯಾಣಿಕರಿಗೆ ಕೋವಿಡ್ ಪರೀಕ್ಷೆ ಕಡ್ಡಾಯ ಎಂದೂ ಅವರು ಹೇಳಿದ್ದಾರೆ.