ಬೆಂಗಳೂರು: ಕೊರೋನಾದಿಂದ ವಿಶ್ವದ ಆರ್ಥಿಕ ವ್ಯವಸ್ಥೆಯೇ ಬುಡಮೇಲಾಗಿದ್ದು, ಕರ್ನಾಟಕದಲ್ಲಿಯೂ ಅರ್ಥ ವ್ಯವಸ್ಥೆ ಕುಸಿದಿದೆ. ಅದರಲ್ಲೂ ಸಾರಿಗೆ ವ್ಯವಸ್ಥೆಗಳಲ್ಲಿ ಸಾಕಷ್ಟು ಆದಾಯ ನಷ್ಟ ಅನುಭವಿಸಿದೆ.
ಹೀಗಾಗಿ ನೀಮಿತ ಬಸ್ ಗಳನ್ನು ಹಂತ ಹಂತವಾಗಿ ಸಾರ್ವಜನಿಕ ಸೇವೆಗೆ ಮುಕ್ತಿಗೊಳಿಸಲು ಚಿಂತನೆ ನಡೆದಿದ್ದು, ಈಗಾಗಲೇ ಬಿಎಂಟಿಸಿ ಬಸ್ ಗಳಲ್ಲಿ ಕೊರೋನಾ ಜಾಗೃತಿ ಮೂಡಿಸುವ ಜಾಹಿರಾತು ಪ್ರದರ್ಶಿಸುತ್ತಿದೆ.
ಬಸ್ ಸಂಚಾರ ಪ್ರಾರಂಭದ ಬಳಿಕ ಸಿಬ್ಬಂದಿಗೆ ಮಾಸ್ಕ್, ಸ್ಯಾನಿಟೈಸರ್, ಕೈಗವಸು, ಉಶ್ಣಾಂಶ ಪರೀಕ್ಷೆಗೆ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಆದರೆ ಸೀಮಿತ ಬಸ್ ಗಳಲ್ಲೂ ಶೇ.20ರಿಂದ 30ರಷ್ಟು ಪ್ರಯಾಣಿಕರು ಮಾತ್ರ ಪ್ರಯಾಣ ಮಾಡಲು ಅವಕಾಶ ನೀಡಬೇಕಿದ್ದು, ಟಿಕೆಟ್ ವ್ಯವಸ್ಥೆ ಬಗ್ಗೆ ಗಂಭೀರ ಚಿಂತನೆ ನಡೆದಿದೆ.
ಕೊರೋನಾ ಸೋಂಕಿನ ಹಿನ್ನಲೆ ದೇಶಾದ್ಯಂತ ಮೇ.17ರವರೆಗೆ ಲಾಕ್ ಎಔನ್ ಜಾರಿಯಲ್ಲಿದ್ದು, ಮೇ.18ರ ಬಳಿಕ ವಿಭಿನ್ನ ಸ್ವರೂಪದ ಲಾಕ್ ಡೌನ್ ಜಾರಿಯಾಗಲಿದೆ.