Tuesday, August 16, 2022

Latest Posts

ಮೇ 31ವರೆಗೆ ಮಹಾರಾಷ್ಟ್ರ, ಕೇರಳ, ತ.ನಾ.ನಿಂದ ರಾಜ್ಯಕ್ಕೆ ಪ್ರವೇಶವಿಲ್ಲ: ಆದಿತ್ಯವಾರ ಲಾಕ್‌ಡೌನ್

ಬೆಂಗಳೂರು: ಕರ್ನಾಟಕದಲ್ಲಿ ನೊವಲ್ ಕೊರೋನಾ ವೈರಸ್ ಸೋಂಕು ವ್ಯಾಪಕಗೊಳ್ಳುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ಲಾಕ್‌ಡೌನ್ 4.0 ಬಗ್ಗೆ ಹಿರಿಯ ಸಚಿವರು ಮತ್ತು ಅಕಾರಿಗಳ ಜೊತೆ ಸುದೀರ್ಘ ಚರ್ಚೆ ನಡೆಸಿ ಅನೇಕ ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದ್ದು, ಇದು ಕೋವಿಡ್- 19 ರ ನಿಯಂತ್ರಣದಲ್ಲಿ ಮಹತ್ವದ ಪರಿಣಾಮ ಬೀರುವ ನಿರೀಕ್ಷೆಯಿದೆ.ವಿಶೇಷವಾಗಿ ಮಹಾರಾಷ್ಟ್ರ ಸೇರಿದಂತೆ ನಾಲ್ಕು ಹೊರರಾಜ್ಯಗಳಿಂದ ಬರುವವರಿಗೆ ಪ್ರವೇಶ ನಿಷೇಧ ಮತ್ತು ಆದಿತ್ಯವಾರ ದಿನವಿಡೀ ಲಾಕ್‌ಡೌನ್ ಕ್ರಮಗಳನ್ನು ಘೋಷಿಸಲಾಗಿದೆ.
ಇದರಂತೆ ಕಂಟೈನ್‌ಮೆಂಟ್ ಝೋನ್‌ಗಳಲ್ಲಿ ಇನ್ನಷ್ಟು ಬಿಗಿ ಕ್ರಮ ಕೈಗೊಳ್ಳಲಾಗುತ್ತಿದೆ. ಇಲ್ಲಿ ನಿಯಮಗಳನ್ನು ಉಲ್ಲಂಘಿಸಿದರೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ನಿರ್ಧರಿಸಲಾಗಿದೆ.ಹಾಗೆಯೇ ಮಂಗಳವಾರದಿಂದ ಬಿಎಂಟಿಸಿ , ಕೆಎಸ್ಸಾರ್ಟಿಸಿ ಸೇರಿದಂತೆ ಎಲ್ಲ ಬಸ್ ಸಂಚಾರಕ್ಕೆ ಷರತ್ತಿನೊಂದಿಗೆ ಅನುಮತಿ ನೀಡಲಾಗಿದೆ.ಬಸ್‌ನಲ್ಲಿ ಕೇವಲ 30 ಜನರಿಗೆ ಪ್ರಯಾಣ ಮಾಡುವ ಅವಕಾಶ ನೀಡಲಾಗಿದೆ. ಬಸ್‌ನಲ್ಲಿ ಪ್ರಯಾಣಿಸುವವರು ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಮಾಸ್ಕ್ ಧರಿಸದೆ ಇದ್ದರೆ ದಂಡ ವಿಸಲಾಗುವುದು.ಆದರೆ ಬಸ್ಸು ಪ್ರಯಾಣದರವನ್ನು ಹೆಚ್ಚಿಸುವುದಿಲ್ಲ. ಆಗುವ ನಷ್ಟವನ್ನು ಸರಕಾರವೇ ತುಂಬಲಿದೆ ಎಂದು ಯಡಿಯೂರಪ್ಪ ಘೋಷಿಸಿದರು.
ಮಹಾರಾಷ್ಟ್ರ ಸೇರಿ 4 ರಾಜ್ಯಗಳಿಂದ ರಾಜ್ಯಕ್ಕೆ ಪ್ರವೇಶದ ಮೇಲೆ ನಿರ್ಬಂಧ
ಈಗಾಗಲೇ ಮಹಾರಾಷ್ಟ್ರ ಸೇರಿದಂತೆ ಹೊರರಾಜ್ಯದ ಕೆಲವರು ರಾಜ್ಯಕ್ಕೆ ಆಗಮಿಸಿ ಕ್ವಾರಂಟೈನ್ ನಿಯಮಗಳನ್ನು ಉಲ್ಲಂಘಿಸಿ ಸೋಂಕು ಹರಡಿದ್ದರಿಂದ ಉಂಟಾಗಿರುವ ಆತಂಕದ ನಡುವೆಯೇ, ಮಹಾರಾಷ್ಟ್ರ, ಗುಜರಾತ್, ತಮಿಳ್ನಾಡು ಮತ್ತು ಕೇರಳದಿಂದ ಮೇ೩೧ರವರೆಗೆ ರಾಜ್ಯಕ್ಕೆ ಜನರು ಪ್ರವೇಶಿಸುವುದನ್ನು ನಿರ್ಬಂಸಲಾಗಿದೆ.ಈ ಕ್ರಮ ರಾಜ್ಯದಲ್ಲಿ ಸೋಂಕು ಹರಡುವುದನ್ನು ತಡೆಗಟ್ಟುವಲ್ಲಿ ಅತ್ಯಂತ ಪರಿಣಾಮಕಾರಿ ಕ್ರಮವಾಗಬಹುದೆಂದು ನಂಬಲಾಗಿದೆ.
ಹಾಗೆಯೇ ಅನಿವಾರ್ಯವಾಗಿ ಹೊರ ರಾಜ್ಯದಿಂದ ಬರುವವರಿಗೆ ಕ್ವಾರಂಟೈನ್ ಮಾಡುವ ನಿರ್ಧಾರ ಮುಂದುವರಿಸಲು ನಿರ್ಧರಿಸಲಾಗಿದೆ. ಬೇರೆ ರಾಜ್ಯದಿಂದ ಅನವಶ್ಯಕವಾಗಿ ಬರಲು ಅವಕಾಶವಿಲ್ಲ .ಟ್ಯಾಕ್ಸಿಯಲ್ಲಿ ಚಾಲಕ ಸೇರಿ ಮೂವರಿಗೆ ಮಾತ್ರ ಬರಲು ಅವಕಾಶವಿದೆ.
ಉಳಿದಂತೆ ,ಆಟೋ, ಟ್ಯಾಕ್ಸಿ ಓಡಾಟಕ್ಕೂ ಅನುಮತಿ ನೀಡಲಾಗಿದೆ. ಅವರಿಗೆ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ. ಮಂಗಳವಾರದಿಂದ ಮಾಲ್, ಸಿನಿಮಾ ಥಿಯೇಟರ್, ಹೊಟೇಲ್ ಬಿಟ್ಟು ಉಳಿದ ಎಲ್ಲ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಕಟ್ಟುನಿಟ್ಟಿನ ನಿಯಮಗಳ ಪಾಲನೆಯೊಂದಿಗೆ ಸೆಲೂನ್‌ಗಳನ್ನು ತೆರೆಯಲೂ ಅವಕಾಶ ಕಲ್ಪಿಸಲಾಗಿದೆ.ರಾಜ್ಯದೊಳಗೆ ಮಾತ್ರ ಸಂಚರಿಸಲು ರೈಲುಗಳಿಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ಹೊರಗಡೆಯಿಂದ ಬರುವ ರೈಲುಗಳಿಗೆ ಅವಕಾಶ ನೀಡುವುದಿಲ್ಲ ಎಂದು ಯಡಿಯೂರಪ್ಪ ಹೇಳಿದರು.
ವಾಯು ವಿಹಾರಕ್ಕೆ ಅನುಮತಿ
ಜನರಿಗೆ ಉದ್ಯಾನಗಳಲ್ಲಿ ವಾಯುವಿಹಾರ ನಡೆಸಲು ಬೆಳಗ್ಗೆ ೭ ರಿಂದ ೯ ಹಾಗೂ ಸಂಜೆ ೫ ರಿಂದ ೭ಗಂಟೆ ವರೆಗೆ ಅವಕಾಶ ನೀಡಲಾಗಿದೆ.
ಆದಿತ್ಯವಾರ ಪೂರ್ಣ ಲಾಕ್‌ಡೌನ್!
ಇನ್ನೊಂದು ಅತ್ಯಂತ ಮಹತ್ವದ ಕ್ರಮವೆಂದರೆ ಪ್ರತೀ ಆದಿತ್ಯವಾರ ರಾಜ್ಯದಲ್ಲಿ ಸಂಪೂರ್ಣ ಲಾಕ್‌ಡೌನ್ ಜಾರಿಯಲ್ಲಿರುತ್ತದೆ. ಇದು ಕೂಡಾ ಕೋವಿಡ್-೧೯ನಿಯಂತ್ರಣದಲ್ಲಿ ಒಂದು ಪ್ರಮುಖ ಹೆಜ್ಜೆಯಾಗಬಹುದೆಂದು ಹೇಳಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss