ಮಂಡ್ಯ: ಮೈಸೂರು ಸಕ್ಕರೆ ಕಾರ್ಖಾನೆಯನ್ನು ನಿರಾಣಿ ಷುಗರ್ ಕಂಪೆನಿ ಜೊತೆಗೆ ತಳುಕು ಹಾಕುವುದು ಸರಿಯಲ್ಲ ಎಂದು ನಿರಾಣಿ ಷುಗರ್ ಲಿ.ನ ಅಧ್ಯಕ್ಷ ಮುರುಗೇಶ್ ಆರ್. ನಿರಾಣಿ ಸ್ಪಷ್ಟಪಡಿಸಿದ್ದಾರೆ.
ಈ ಸಂಬoಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಖಾಸಗೀಕರಣ ಅಥವಾ ಒ ಅಂಡ್ ಎಂ (ಕಾರ್ಯ ಮತ್ತು ನಿರ್ವಹಣೆ)ಗೆ ನೀಡುವುದಕ್ಕೆ ರಾಜ್ಯ ಸರ್ಕಾರ ಈ ಕ್ಷಣದವರೆಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಕೆಲವರು ಗೊಂದಲ ಉಂಟುಮಾಡುತ್ತಿದ್ದು, ಈವರೆವಿಗೂ ನಿರಾಣಿ ಷುರ್ಸ್ನವರು ಗುತ್ತಿಗೆ ಪಡೆದಿರುವುದಿಲ್ಲ ಎಂದು ತಿಳಿಸಿದ್ದಾರೆ.
ಕಿರಾಣಿ ಅಂಗಡಿಯಲ್ಲ
ಯಾವುದೇ ಕಾರ್ಖಾನೆಗಳನ್ನು ಖಾಸಗಿಯವರಿಗೆ ಗುತ್ತಿಗೆಗೆ ನೀಡಬೇಕಾದರೆ ಪಾರದರ್ಶಕ ನಿಯಮಗಳಡಿ ಸರ್ಕಾರ ಟೆಂಡರ್ ಕರೆಯಬೇಕು. ಟೆಂಡರ್ ನಿಯಮಾನುಸಾರ ತಾಂತ್ರಿಕ ಹಾಗೂ ಆರ್ಥಿಕ ಅರ್ಹತೆಯನ್ನಾಧರಿಸಿ ಕಾರ್ಖಾನೆಯನ್ನು ಗುತ್ತಿಗೆಗೆ ನೀಡಲಾಗುತ್ತದೆ. ಈ ಸಾಮಾನ್ಯ ಮಾಹಿತಿಯನ್ನು ನನ್ನ ಮೇಲೆ ನಿರಾಧಾರ ಆರೋಪ ಮಾಡುವವರು ತಿಳಿದುಕೊಳ್ಳಬೇಕು.