ಮೈಸೂರು: ಜಿಲ್ಲೆಯಲ್ಲಿ ಕೊರೋನಾ ವೈರಸ್ ಹರಡುವಿಕೆ ತಡೆಗಟ್ಟಲು ಮೈಸೂರಿಗೆ ಆಗಮಿಸುವ ಎಲ್ಲಾ ಅಂತರ್ ರಾಜ್ಯ ಪ್ರಯಾಣಿಕರನ್ನು ೧೪ ದಿನಗಳವರೆಗೆ ಫೆಸಿಲಿಟಿ ಕ್ವಾರಂಟೈನ್ಗೆ ಒಳಪಡಿಸಲಾಗುತ್ತದೆ, ಹೋಂಕ್ವಾರAಟೈನ್ ಮಾಡಲು ಅನುಮತಿ ನೀಡಲಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದ್ದಾರೆ.
ಇತರ ರಾಜ್ಯಗಳಿಂದ ಮೈಸೂರು ಜಿಲ್ಲೆಗೆ ಪ್ರವೇಶಿಸುವ ಎಲ್ಲಾ ಪ್ರಯಾಣಿಕರು, ಉಚಿತ ಕ್ವಾರಂಟೈನ್ ಬಯಸಿದರೆ ಹಾಸ್ಟೆಲ್ನ್ನು , ಪಾವತಿ ಆಧಾರದ ಮೇಲೆ ಕ್ವಾರಂಟೈನ್ ಬಯಸಿದರೆ ಹೋಟೆಲ್ನ್ನು ಆಯ್ಕೆ ಮಾಡಿಕೊಳ್ಳಬಹುದು. ಆಗಮನದ ೧೪ ನೇ ದಿನದಂದು ಎಲ್ಲಾ ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಹೊರ ರಾಜ್ಯದಿಂದ ಬಂದವರು ಕ್ವಾರೆಂಟೈನ್ ಗೆ ಸಹಕರಿಸಬೇಕು ಎಂದು ಆದರೆ ಅಂತರ್ ಜಿಲ್ಲೆಯ ಪ್ರಯಾಣಿಕರನ್ನು ಕ್ವಾರೆಂಟೈನ್ಗೆ ಒಳಪಡಿಸಲಾಗಲ್ಲ ಎಂದು ಹೇಳಿದ್ದಾರೆ.