ಮೈಸೂರಿನಲ್ಲಿ ಮೊದಲ ಕೊರೋನಾ ಸೋಂಕಿತ ರೋಗಿ ಗುಣಮುಖ, ಆಸ್ಪತ್ರೆಯಿಂದ ಬಿಡುಗಡೆ

0
58

ಮೈಸೂರು: ಕೊರೋನಾ ವೈರಸ್ ಹಾವಳಿಯಿಂದ ಕಂಗಲಾಗಿದ್ದ ಅರಮನೆ ನಗರಿ ಮೈಸೂರಿನ ಜನರಿಗೆ ಇದೀಗ ಸಿಹಿ, ಕೊರೋನಾ ವೈರಸ್ ಸೋಂಕಿತರಲ್ಲಿ ಮೊದಲನೇ ವ್ಯಕ್ತಿಯೊಬ್ಬರು ಸಂಪೂರ್ಣವಾಗಿ ಗುಣಮುಖರಾಗಿದ್ದು, ಮಂಗಳವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಈತ ಮೈಸೂರಿನ ಮೊದಲನೇ ಕೊರೋನಾ ವೈರಸ್ ಸೋಂಕಿತ ರೋಗಿಯಾಗಿದ್ದು, ಚಿಕಿತ್ಸೆಯಿಂದ ಗುಣಮುಖನಾಗಿ ಬಿಡುಗಡೆ ಹೊಂದಿದ್ದ ಮೊದಲಗಿನೂ ಆಗಿದ್ದಾನೆ. ರೋಗಿ ಮೈಸೂರಿಗೆ ದುಬೈನಿಂದ ಆಗಮಿಸಿದ್ದ, ಆತನಿಗೆ ಕೆಮ್ಮು, ಜ್ವರ, ಉಸಿರಾಟದ ತೊಂದರೆ ಕಾಣಿಸಿಕೊಂಡ ಕಾರಣ ಮೈಸೂರಿನ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. 14 ದಿನಗಳ ಹೋಂ ಕ್ವಾರಂಟೈನ್ ಅವಧಿಯನ್ನು ಪೂರ್ಣಗೊಳಿಸಿದ್ದ. ಆದರೆ ಒಮ್ಮೆ ಕೊರೋನಾ ವೈರಸ್ ಬಂದವರಿಗೆ, ಚಿಕಿತ್ಸೆ ನೀಡಿದರೂ ಸಹ ಮತ್ತೊಮ್ಮೆ ಕಾಣಿಸಿಕೊಳ್ಳುವ ಪ್ರಕರಣ ಕಂಡು ಬಂದಿದ್ದ ಕಾರಣ, ಈತನಿಗೆ ಮತ್ತೊಮ್ಮೆ ರಕ್ತ, ಗಂಟಲಿನ ಮಾದರಿಯನ್ನು ಹೋಂ ಕ್ವಾರಂಟೈನ್ ಅವಧಿ ಮುಗಿದ ಬಳಿಕ ಪರೀಕ್ಷೆ ಮಾಡಲಾಗಿತ್ತು. ವರದಿಯಲ್ಲಿ ನೆಗಟಿವ್ ಎಂದು ಬಂದಿರುವ ಕಾರಣ, ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಮೊದಲಬಾರಿಗೆ ಇಳಿಕೆಯಾಗಿದೆ. ಸೋಮವಾರ ಸೋಂಕಿತರ ಸಂಖ್ಯೆ ೩೫ಕ್ಕೆ ಏರಿಕೆಯಾಗಿತ್ತು. ಇದೀಗ ಒಬ್ಬ ಗುಣಮುಖನಾಗಿರುವ ಕಾರಣ, ಸೋಂಕಿತರ ಸಂಖ್ಯೆ ೩೪ಕ್ಕೆ ಇಳಿದಿದೆ.
ಮತ್ತೊಂದು ಗುಡ್ ನ್ಯೂಸ್  
ಜಿಲ್ಲೆಯಲ್ಲಿ ಕೊರೋನಾ ವೈರಸ್ ಸೋಂಕಿತರು ಸಂಪರ್ಕ ಹೊಂದಿದ್ದು, ಹೋಂ ಕ್ವಾರಂಟೈನ್ನಲ್ಲಿದ್ದ 3057 ಮಂದಿಯ ಪೈಕಿ 1533 ಮಂದಿ 14 ದಿನಗಳ ಹೋಂ ಕ್ವಾರಂಟೈನ್ ಅವಧಿಯನ್ನು ಪೂರ್ಣಗೊಳಿಸಿದ್ದಾರೆ. ಇವರೆಲ್ಲಾ ಆರೋಗ್ಯವಾಗಿದ್ದಾರೆ. ಯಾವುದೇ ಕೊರೋನಾ ವೈರಸ್ ಸೋಂಕು ಕಾಣಿಸಿಕೊಂಡಿಲ್ಲ, ಆದರೂ ಕೂಡ, ಇವರುಗಳನ್ನು ಮುನ್ನೇಚ್ಚರಿಕೆಯ ಕ್ರಮವಾಗಿ ತಕ್ಷಣಕ್ಕೆ ಜಿಲ್ಲಾಡಳಿತ ಹೋಂ ಕ್ವಾರಂಟೈನ್ನಿ0ದ ಬಿಡುಗಡೆ ಮಾಡುವುದಿಲ್ಲ, ಕಾರಣ ಬೇರೆ ಪ್ರದೇಶಗಳಲ್ಲಿ ಮಹಾಮಾರಿ ಕೊರೋನಾ ವೈರಸ್ 14 ದಿನಗಳ ಹೋಂ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿದವರಲ್ಲಿ ಕಂಡು ಬಂದಿದೆ. ಈ ಮಾಹಿತಿಯ ಹಿನ್ನಲೆಯಲ್ಲಿ ಹೋಂ ಕ್ವಾರಂಟೈನ್ ಅವಧಿಯನ್ನು ಪೂರ್ಣಗೊಳಿಸಿದ ೧೫೩೩ ಮಂದಿಯನ್ನು ಮತ್ತಷ್ಟು ದಿನಗಳ ಕಾಲ ನಿಗಾದಲ್ಲಿಟ್ಟು, ಆ ಅವಧಿಯಲ್ಲಿ ಅವರನ್ನು ಪರೀಕ್ಷಿಸಿ, ಕೊರೋನಾ ವೈರಸ್ ಲಕ್ಷಣಗಳು ಕಂಡು ಬಾರದಿದ್ದರೆ ಮಾತ್ರ, ಅವರನ್ನು ಹೋಂ ಕ್ವಾರಂಟೈನ್ನಿ0ದ ಮುಕ್ತಗೊಳಿಸಲು ಜಿಲ್ಲಾಡಳಿತ ಚಿಂತಿಸಿದೆ.
70 ಮಂದಿಯ ವರದಿ ಬರಬೇಕಾಗಿದೆ
ಜಿಲ್ಲೆಯಲ್ಲಿ ಇಲ್ಲಿಯ ತನಕ ೨೮೭ ಜನರ ಮಾದರಿಯಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದೆ. ಇವರಲ್ಲಿ 174 ಮಂದಿಗೆ ನೆಗಟೀವ್ ವರದಿ ಬಂದಿದೆ. ಒಬ್ಬರ ಮಾದರಿಯನ್ನು ತಿರಸ್ಕರಿಸಲಾಗಿದೆ. 3 ಜನರ ಮಾದರಿ ಪೆಂಡಿ0ಗ್ ಇದೆ. 4 ಮಂದಿಯ ಮಾದರಿಯನ್ನು ಮತ್ತೆ ಸಂಗ್ರಹಿಸಿ, ಪರೀಕ್ಷೆಗೆ ಕಳುಹಿಸಲಾಗಿದೆ. ಇವರಲ್ಲದೆ ಇನ್ನೂ 70 ಜನರ ಪರೀಕ್ಷಾ ವರದಿಯು ಬರಬೇಕಾಗಿದ್ದು, ಅದನ್ನು ನಿರೀಕ್ಷೆ ಮಾಡಲಾಗುತ್ತಿದೆ.

LEAVE A REPLY

Please enter your comment!
Please enter your name here