Thursday, July 7, 2022

Latest Posts

ಮೈಸೂರಿನಲ್ಲಿ ರತ್ನಗಳು, ಆಭರಣಗಳ ಜೆಮ್ಸ್ ಸೆಲೆಕ್ಷನ್ಸ್ ನೂತನ ಮಳಿಗೆ ಆರಂಭ

ಮೈಸೂರು : ಲೌಕ್‌ಡೌನ್‌ನಲ್ಲಿ ಬಾಡಿಗೆ ಕಟ್ಟಲಾಗದೆ ಅರಮನೆ ನಗರಿ ಮೈಸೂರಿನಲ್ಲಿ ಅದೇಷ್ಟೋ ಅಂಗಡಿಗಳನ್ನು ವ್ಯಾಪಾರಿಗಳು ಮುಚ್ಚಿದ್ದಾರೆ. ಕೆಲವರಂತೂ ಅಂಗಡಿಗಳನ್ನೇ ಖಾಲಿ ಮಾಡಿಕೊಂಡು ಹೋಗಿದ್ದಾರೆ. ಲಾಕ್ ಡೌನ್ ಸಡಲಿಕೆ ಮಾಡಿದ ಮೊದಲ ದಿನವೇ ಮೈಸೂರಿನಲ್ಲಿ ಹೊಸದಾಗಿ ಅಂಗಡಿ ಮಳಿಗೆಯೊಂದು ಪ್ರಾರಂಭಗೊoಡಿದೆ. ಆ ಮೂಲಕ ಮಹಾಮಾರಿ ಕೊರೋನಾ ಸೋಂಕಿನ ಬೆದರಿಕೆಗೆ ಸೆಡ್ಡು ಹೊಡೆದಿದೆ.
ಕೊರೋನಾ, ಲಾಕ್‌ಡೌನ್ ಅವ್ಯವಸ್ಥೆಯ ನಡುವೆಯೂ ಭಾರತದ ಅತಿ ದೊಡ್ಡ ಜೆಮ್ಸ್ಸ್ಟೋನ್ ಬ್ರಾö್ಯಂಡ್ ಆದ ಜೆಮ್ಸ್ ಸೆಲೆಕ್ಷನ್ ಮೈಸೂರಿನಲ್ಲಿ ನೂತನ ಮಳಿಗೆಯನ್ನು ಸೋಮವಾರ ಆರಂಭಿಸಿದೆ. ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿದ ಜೆಮ್ಸ್ ಪ್ರೆವೇಟ್ ಲಿಮಿಟೆಡ್‌ನ ಸಂಸ್ಥಾಪಕ ಮತ್ತು ಎಚಿಡಿ ಪಂಕಜ್ ಖನ್ನಾ, `ನಾವು ಮೈಸೂರಿನಲ್ಲಿ ಹೊಸ ಮಳಿಗೆ ಆರಂಭಿಸಿರುವುದಕ್ಕೆ ಉತ್ಸುಕರಾಗಿವೆ. ಲಾಕ್‌ಡೌನ್ ಹಾಗೂ ಅದರ ನಿರ್ಬಂಧಗಳ ಹೊರತಾಗಿಯೂ ಮುಂದಿನ ದಿನಗಳಲ್ಲಿ ಉದ್ದಿಮೆ ವೇಗಪಡೆದುಕೊಳ್ಳಲಿದೆ ಎಂಬ ವಿಶ್ವಾಸ ನಮಗಿದೆ ಎಂದರು.
ದೇಶದ ಕೆಲ ಭಾಗಗಳಲ್ಲಿ ಲಾಕ್‌ಡೌನ್ ಸಡಿಲಿಕೆ ಮಾಡಲಾಗಿದೆ. ದೇಶದ ಆರ್ಥಿಕತೆ ಸುಧಾರಣೆಯ ಕಡೆಗೆ ಸಾಗುತ್ತಿದ್ದು, ಬಹುತೇಕ ಕೈಗಾರಿಕೆಗಳು ತಮ್ಮ ಉದ್ದಿಮೆಗಳ ಕಡೆಗೆ ಮರಳುತ್ತಿವೆ. ಇತರ ಎಲ್ಲಾ ವ್ಯವಹಾರಗಳಂತೆ ಜೆಮ್ ಸೆಲೆಕ್ಷನ್ಸ್ ಈ ಹೊಸ ಮಳಿಗೆಯ ಮೂಲಕ ತನ್ನ ಗ್ರಾಹಕರನ್ನು ತನ್ನತ್ತ ಸೆಳೆಯಲು ಸಜ್ಜಾಗಿದೆ ಎಂದು ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss