Saturday, August 13, 2022

Latest Posts

ಮೈಸೂರಿನಲ್ಲಿ ಶುಕ್ರವಾರ ಮತ್ತೆ ಆರು ಜನರಿಗೆ ಕೊರೋನಾ ಸೋಂಕು ದೃಢ

ಮೈಸೂರು: ಅರಮನೆ ನಗರಿ ಮೈಸೂರಿನಲ್ಲಿ ಇದೀಗ ದಿನೇ ದಿನೇ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗತೊಡಗಿದೆ. ಶುಕ್ರವಾರ ಮತ್ತೆ ಆರು ಜನರಿಗೆ ಕೊರೋನಾ ಸೋಂಕಿರುವುದು ಪರೀಕ್ಷಾ ವರದಿಯಿಂದ ದೃಢಪಟ್ಟಿದೆ. ತಮಿಳುನಾಡಿನಿಂದ ಮೈಸೂರಿನ ಇಟ್ಟಿಗೆ ಗೂಡಿಗೆ ಬಂದಿದ್ದ ವ್ಯಕ್ತಿಗೆ ಕೊರೋನಾ ಸೋಂಕಿತ್ತು. ಆತನ ಸಂಪರ್ಕಕ್ಕೆ ಬಂದಿದ್ದ, ಆತನ ಕುಟುಂಬದ ನಾಲ್ವರಿಗೂ ಕೊರೋನಾ ತಗುಲಿಕೊಂಡಿದೆ. ಬೆಂಗಳೂರಿನಿoದ ನಂಜನಗೂಡಿಗೆ ಆಗಮಿಸಿದ್ದ ಸೋಂಕಿತ ವ್ಯಕ್ತಿಯ ಸಂಪರ್ಕ ಹೊಂದಿದ್ದ ಮತ್ತೊಬ್ಬನಿಗೂ ಸೋಂಕು ಇದೀಗ ಅಂಟಿದೆ. ಕೋಲಾರದಿಂದ ಮೈಸೂರಿನ ತಮ್ಮ ಸಂಬoಧಿಕರ ಮನೆಗೆ ಭೇಟಿ ನೀಡಿದ್ದ ವ್ಯಕ್ತಿಗೂ ಸೋಂಕು ಅಂಟಿದೆ. ಇದರಿಂದಾಗಿ ಮೈಸೂರಿನಲ್ಲಿ ಸೋಂಕಿತರ ಸಂಖ್ಯೆ 129ಕ್ಕೆ ಏರಿಕೆಯಾದರೆ, ಸಕ್ರೀಯ ಸೋಂಕಿತರ ಸಂಖ್ಯೆ ೧೭ಕ್ಕೆ ಹೆಚ್ಚಳವಾಗಿದೆ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss