Sunday, August 14, 2022

Latest Posts

ಮೈಸೂರಿನಲ್ಲಿ ಸಂಭ್ರಮಾಚರಣೆಗೆ ಬ್ರೇಕ್ ಹಾಕಿದ ಪೊಲೀಸರು

ಮೈಸೂರು: ಅಯೋಧ್ಯೆಯಲ್ಲಿ ರಾಮಂದಿರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ನೆರವೇರಿದ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ನಡೆಸಲು ಉದ್ದೇಶಿಸಲಾಗಿದ್ದ ಸಂಭ್ರಮಾಚರಣೆಗೆ ಪೊಲೀಸರು ಬ್ರೇಕ್ ಹಾಕಿದರು.

ಬಿಜೆಪಿ ಕಚೇರಿ ಮುಂಭಾಗ ಫ್ಲೆಕ್ಸ್ ಹಾಕಲಾಗಿತ್ತು.ಅದನ್ನು ಫ್ಲೆಕ್ಸ್ ತೆರವು ಮಾಡುವಂತೆ ಲಕ್ಷಿಪುರಂ ಪೋಲಿಸರು ಸೂಚನೆ ನೀಡಿದರು.
ನಗರದಲ್ಲಿ ನಿಷೇದಾಜ್ಞೆ ಇದೆ ಎಂದು ಬಿಜೆಪಿ ಕಾರ್ಯಕರ್ತರಿಗೆ ಮನವರಿಕೆ ಮಾಡಿಕೊಟ್ಟು ಫ್ಲೆಕ್ಸ್ ತೆರವುಗೊಳಿಸಿದರು. ಕೊರೋನಾ ಹಾಗೂ ನಿಷೇಧಾಜ್ಞೆ ಹಿನ್ನೆಲೆ ಅಯೋಧ್ಯಯಲ್ಲಿ ಶ್ರೀರಾಮಮಂದಿರದ ಶಿಲಾನ್ಯಾಸ ಕಾರ್ಯಕ್ರಮದ ಪ್ರಸಾರವನ್ನು ವೀಕ್ಷಿಸುವುದಕ್ಕಾಗಿ ಹಾಕಲು ಉದ್ದೇಶಿಸಿದ್ದ ಬೃಹತ್ ಎಲ್‌ಇಡಿ ಪರದೆ, ಶ್ರೀರಾಮನ ಭಾವಚಿತ್ರಕ್ಕೆ ಪೂಜೆ, ರಾಮಭಜನೆ ಸೇರಿದಂತೆ ಹಲವು ಕಾರ್ಯಕ್ರಮಗಳಿಗೆ ಸಂಬAಧಿಸಿದ ಅಧಿಕಾರಿಗಳು ಅನುಮತಿ ನೀಡಲಿಲ್ಲ, ಹಾಗಾಗಿ ಉದ್ದೇಶಿತ ಕಾರ್ಯಕ್ರಮಗಳನ್ನು ಕೈಬಿಡಲಾಯಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss