Saturday, July 2, 2022

Latest Posts

ಮೈಸೂರಿನಲ್ಲಿ ಹೆಚ್ಚುತ್ತಿರುವ ಕೊರೋನಾ ಸೋಂಕು; 50ಕ್ಕೂ ಹೆಚ್ಚು ಕಂಟೈನ್ ಮೆಂಟ್ ಜೋನ್: ಜಿಲ್ಲಾಧಿಕಾರಿ

ಮೈಸೂರು: ಮೈಸೂರಿನಲ್ಲಿ ಕೊರೋನಾ ವೈರಾಣು ಸೋಂಕು ಹರಡುವಿಕೆ ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಈಗಾಗಲೇ ೫೦ಕ್ಕೂ ಹೆಚ್ಚು ಕಂಟೈನ್ಮೆoಟ್ ಜೋನ್ ಗಳನ್ನು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ತಿಳಿಸಿದರು.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೋನಾ ಸೋಂಕಿತರು ವಾಸಿಸುತ್ತಿರುವ ಪ್ರದೇಶಗಳನ್ನು ಕಂಟೈನ್ಮೆoಟ್ ಜೋನ್ ಗಳೆಂದು ಘೋಷಿಸಲಾಗಿದ್ದು, ಇದನ್ನು ಆಯಾ ಬೀದಿಗೆ ಮಾತ್ರ ಸೀಮಿತ ಮಾಡಲಾಗುತ್ತಿದೆ. ಅಪಾರ್ಟ್ ಮೆಂಟ್ ಹಾಗೂ ಸ್ಲಂ ಏರಿಯಾಗಳಲ್ಲಿ ಭಿನ್ನವಾಗಿ ಕಂಟೈನ್ಮೆoಟ್ ಜೋನ್ ಮಾಡಲಾಗುತ್ತಿದೆ ಎಂದು ಹೇಳಿದರು.
ಲೌಕ್‌ಡೌನ್ ಸಡಿಲಗೊಳಿಸಿದ ಬಳಿಕ ಮೈಸೂರಿನಲ್ಲಿ ಸೋಂಕಿನ ಸಂಖ್ಯೆ ಹೆಚ್ಚಾಗ್ತಿದೆ. ಸಮುದಾಯವಾಗಿ ಕೊರೋನಾ ಹರಡದ ರೀತಿ ಎಲ್ಲರೂ ಎಚ್ಚರಿಕೆ ವಹಿಸಬೇಕು. ಇದು ನಮಗೂ ಕೂಡಾ ಚಾಲೆಂಜಿ0ಗ್ ಟೈಂ ಆಗಿದೆ. ಇನ್ನಾದರೂ ಜನರು ಎಚ್ಚೆತ್ತುಕೊಳ್ಳಬೇಕು. ಕಡ್ಡಾಯವಾಗಿ ಮಾಸ್ಕ್ ಬಳಸಬೇಕು, ಸ್ವಯಂ ಲಾಕ್‌ಡೌನ್ ಮಾಡಿಕೊಳ್ಳಬೇಕು. ಮದುವೆ, ಧಾರ್ಮಿಕ ಸಮಾರಂಭಗಳಿAದ ದೂರ ಉಳಿಯಬೇಕು ಎಂದು ಸಲಹೆ ನೀಡಿದರಲ್ಲದೆ, ಜನರು ನಮಗೆ ಸಹಕರಿಸಿದರೆ, ಕೊರೋನಾ ಸೋಂಕಿನ ಬಿಕ್ಕಟ್ಟಿನ ಪರಿಸ್ಥಿತಿ ಯಶಸ್ವಿಯಾಗಿ ನಿಭಾಯಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮೈಸೂರಿನಲ್ಲಿ ಉತ್ತಮವಾಗಿ ಕೋವಿಡ್ ಆಸ್ಪತ್ರೆಯನ್ನ ನಿರ್ವಹಣೆ ಮಾಡುತ್ತಿದ್ದೇವೆ. ಇದೇ ರೀತಿ ಸೋಂಕಿತರ ಸಂಖ್ಯೆ ಹೆಚ್ಚಾದರೆ ಈಗಿರುವ ಕೋವಿಡ್ ಆಸ್ಪತ್ರೆಯ ೨೫೦ಬೆಡ್ ಗಳು ಭರ್ತಿಯಾಗಲಿವೆ. ಹಾಗಾಗಿ ಹೆಚ್ಚುವರಿ ಇಎಸ್‌ಐ ಆಸ್ಪತ್ರೆಯಲ್ಲಿ ೧೦೦ಹಾಸಿಗೆ ವಾರ್ಡ್ ರೆಡಿ ಮಾಡಲಾಗಿದೆ. ಅಲ್ಲದೇ ಮಂಡಕಳ್ಳಿ ಬಳಿಯ ಕೆಎಸ್‌ಒಯು ಕಟ್ಟಡಲ್ಲೂ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಸಿದ್ದ ಗೊಳಿಸಲಾಗುತ್ತಿದೆ. ೫೦೦ ಹಾಸಿಗೆಯುಳ್ಳ ಕೋವಿಡ್ ಕೇರ್ ಸೆಂಟರ್ ಇನ್ನೊಂದು ವಾರದಲ್ಲಿ ಸಿದ್ದವಾಗಲಿದೆ. ನಮಗೆ ಆಸ್ಪತ್ರೆ ವಿಚಾರದಲ್ಲಿ ಯಾವುದೇ ತೊಂದರೆಯಾಗಲ್ಲ, ಕೇವಲ ಸಿಬ್ಬಂದಿ ಕೊರತೆಯಾಗಬಹುದು ಅಷ್ಟೇ. ಅದರ ಬಗ್ಗೆಯೂ ಗಮನಹರಿಸಲಾಗುವುದು ಎಂದು ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss