Tuesday, July 5, 2022

Latest Posts

ಮೈಸೂರಿನಲ್ಲಿ ಹೊಸದಾಗಿ 151 ಜನರಿಗೆ ಸೋಂಕು, 6 ಜನರು ಬಲಿ

ಮೈಸೂರು: ಅರಮನೆ ನಗರಿ ಮೈಸೂರಿನಲ್ಲಿ ಮಹಾಮಾರಿ ಕೊರೋನಾ ಇದೀಗ ಜ್ವಾಲಾಮುಖಿ ದೀಪದಂತೆ ಸಿಡಿಯಲಾರಂಭಿಸಿದ್ದು, ಸೋಮವಾರು ಹೊಸದಾಗಿ ೧೫೧ ಜನರಿಗೆ ಸೋಂಕು ಅಂಟಿದ್ದು, ೬ ಜನರು ಬಲಿಯಾಗಿದ್ದಾರೆ. ಇಲ್ಲಿಯವರೆಗೆ ಜಿಲ್ಲೆಯಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ ಇದೀಗ ೩೭ಕ್ಕೆ ಏರಿಕೆಯಾಗಿದೆ. ಇಲ್ಲಿಯ ತನಕ ನೂರರ ಗಡಿಯೊಳಗೆ ಸೋಂಕಿತರ ಸಂಖ್ಯೆ ಇರುತ್ತಿತ್ತು. ಇದೀಗ ಇದು ಡಬಲ್ ಆಗಿದ್ದು, ಒಂದುವರೆ ಶತಕ ದಾಟಿ ಹೋಗಿದೆ. ಇದರಿಂದಾಗಿ ಸೋಂಕಿಗೀಡಾದವರ ಸಂಖ್ಯೆ ೯೬೬ಕ್ಕೆ ತಲುಪಿದೆ. ಸಕ್ರೀಯ ಸೋಂಕಿತರು ೪೪೭ ಜನರಿದ್ದು, ಕೊವೀಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸೋಂಕಿನಿoದ ಗುಣವಾದ ೫೪ ಜನರನ್ನು ಇಂದು ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದ್ದು, ಇಲ್ಲಿಯ ತನಕ ಬಿಡುಗಡೆಯಾದವರ ಸಂಖ್ಯೆ ೪೮೨ಕ್ಕೆ ಏರಿಕೆಯಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss