Wednesday, July 6, 2022

Latest Posts

ಮೈಸೂರಿನಲ್ಲಿ 3000 ಮಂದಿಗೆ ಆಹಾರ ಪೂರೈಕೆ: ಮೈಸೂರಿನ ರಾಜೀವ್ ಮಿತ್ರರ ಕಾರ್ಯಕ್ಕೆ ಮೆಚ್ಚುಗೆ

ಮೈಸೂರು: ಕೊರೋನಾ ವೈರಸ್ ಹಾವಳಿಯಿಂದ ಅನಿವಾರ್ಯವಾಗಿರುವ ಲಾಕ್‌ಡೌನ್ ನಡುವೆ ಸಮಾಜದಲ್ಲಿ ಮಾನವೀಯ ಮಿಡಿತವೂ ವಿಸ್ತರಿಸುತ್ತಿದ್ದು, ಸಂಕಷ್ಟಕ್ಕೀಡಾಗುವ ಜನರ ಸೇವೆಗೆ ತೊಡಗುವವರ ಸಂಖ್ಯೆಯೂ ಹೆಚ್ಚುತ್ತಿದೆ. ಮೈಸೂರಿನ ಮಾಜಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಪ್ರಮತಿ ವಿದ್ಯಾಸಂಸ್ಥೆಯ ಪ್ರಮುಖರಾದ ರಾಜೀವ್ ಎಚ್.ವಿ.ಮತ್ತು ಸ್ನೇಹ ಬಳಗದವರು ವಿಶೇಷ ಪೂರ್ವತಯಾರಿಯೊಂದಿಗೆ ಜಿಲ್ಲಾಡಳಿತ, ರಾಷ್ಟ್ರೀಯ ಸ್ವಯಂಸೇವಕ ಸಂಘ , ಬಿಜೆಪಿ ಮತ್ತು ಇತರ ಸಂಘಸಂಸ್ಥೆಗಳ ಆಹಾರ ಪೂರೈಕೆ ವ್ಯವಸ್ಥೆಗೆ ನೆರವಾಗುತ್ತಿದ್ದು ಮೆಚ್ಚುಗೆಗೆ ಪಾತ್ರವಾಗಿದೆ.
ಲಾಕ್‌ಡೌನ್ ಘೋಷಣೆಯಾಗಲಿದೆ ಎಂಬ ಮಾಹಿತಿ ಲಭಿಸುತ್ತಿದ್ದಂತೆಯೇ ಅಸಹಾಯಕರು, ಬಡವರು, ದೀನದಲಿತರು, ಹಣವಿದ್ದರೂ ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳಲಾಗದೆ ಇರುವವರಿಗೆ ಆಹಾರ ಪೂರೈಕೆಗೆ ಯೋಜನೆಯೊಂದನ್ನು ರೂಪಿಸಲು ಅಡುಗೆಯವರನ್ನು ಸಂಪರ್ಕಿಸಿ ಅವರನ್ನು ಮೊದಲು ಸಿದ್ಧಗೊಳಿಸಿದೆವು. ಇದಕ್ಕಾಗಿ ಮಿತ್ರರಾದ ಸತ್ಯನಾರಾಯಣ, ರಾಹುಲ್ ಮೂರ್ತಿ, ನಾಗೇಂದ್ರ ಶರ್ಮ, ನಿತ್ಯಾನಂದ ಚಂದ್ರನ್, ಡಿಎವಿ ಸ್ಕೂಲ್ ಆನಂದ್‌ರೊಡಗೂಡಿ ಮೂವರು ಅಡುಗೆಯವಾದ ಕಣ್ಣನ್ , ಶ್ರೀನಿವಾಸ ರಾವ್, ಯದು ಎಂಬವರನ್ನು ಗೊತ್ತು ಪಡಿಸಿದೆವು.ಈ ಕಾರ್ಯದಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಸಹಕಾರವನ್ನೂ ಪಡೆದುಕೊಂಡಿದ್ದೇವೆ.
ಅವರಿಗೆ ೩೦ಕ್ವಿಂಟಾಲ್ ಅಕ್ಕಿ, ೪೦ಟಿನ್ ಖಾದ್ಯತೈಲ ಸೇರಿದಂತೆ ಅಗತ್ಯ ವಸ್ತುಗಳನ್ನು ಸಂಗ್ರಹಿಸಿ ಪೂರೈಸಿದೆವು.ಇದೀಗ ನಾವು ಜಿಲ್ಲಾಡಳಿತದ ಮೂಲಕ ೧೮ಸಾಂತ್ವನ ಕೇಂದ್ರಗಳಿಗೆ ೧೫೦೦ಪ್ಯಾಕೆಟ್ ಒದಗಿಸುತ್ತಿದ್ದೇವೆ.ಜಿಲ್ಲಾಡಳಿತ ಬೆಳಿಗ್ಗೆ ಮತ್ತು ಸಂಜೆ ನಾವು ಬಿಸಿ ಊಟ ಒದಗಿಸುತ್ತೇವೆ.ಇದೇ ರೀತಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೂಲಕ ೪೦೦ರಿಂದ ೮೦೦ಮಂದಿಗೆ , ಬಿಜೆಪಿ ಮೂಲಕ ೫೦೦-೬೦೦ಮಂದಿಗೆ ಒದಗಿಸುತ್ತಿದ್ದೇವೆ. ಇದೀಗ ಮೂಡಾದ ಮಾಜಿ ಅಧ್ಯಕ್ಷ ವಿಜಯ ಕುಮಾರ್ ಅವರು ಕೂಡಾ ೫೦೦ಮಂದಿಗೆ ಆಹಾರ ನೆರವು ಒದಗಿಸುವ ನಿಟ್ಟಿನಲ್ಲಿ ಸಹಕಾರ ಕೇಳಿದ್ದಾರೆ. ಅವರಿಗೂ ಒದಗಿಸಲು ಸಿದ್ಧತೆ ನಡೆಸಿದ್ದೇವೆ. ಸ್ವಂತ ವಾಹನದಲ್ಲೂ ಬಡವರಿಗೆ ಉಚಿತ ಊಟ ವಿತರಣೆ ನಡೆಸುತ್ತಿದ್ದೇವೆ ಎನ್ನುತ್ತಾರೆ
ಇದರಂತೆ ಈಗ ಬಂದವರಿಗೆ ಇಲ್ಲ ಎನ್ನದೆ ಆಹಾರ ನೆರವು ಒದಗಿಸಲು ನಾವು ಯತ್ನ ನಡೆಸಿದ್ದು, ದಿನವಹಿ ಸುಮಾರು ೩೦೦೦ದಷ್ಟು ಮಂದಿಗೆ ಆಹಾರ ಒದಗಿಸಲು ಸಿದ್ಧರಾಗಿದ್ದೇವೆ.ಈ ವೇಳೆ ನಾವು ಮೊದಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು , ಹೆಚ್ಚು ಜನ ಸೇರದಂತೆ ನೋಡಿಕೊಳ್ಳುವುದು ಇತ್ಯಾದಿ ಯೋಚನೆಯೊಂದಿಗೇ ಕಾರ್ಯಪ್ರವೃತ್ತರಾಗಿದ್ದೇವೆ ಎನ್ನುತ್ತಾರೆ ಸಹಕಾರ ಒಕ್ಕೂಟದ ಅಧ್ಯಕ್ಷರೂ ಆಗಿರುವ ರಾಜೀವ್ ಅವರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss