Wednesday, August 17, 2022

Latest Posts

ಮೈಸೂರಿನಿಂದ ಬೆಳಗಾಂ, ಚೆನ್ನೈಗೆ ವಿಮಾನಯಾನಕ್ಕೆ ವಿಶೇಷ ರಿಯಾಯಿತಿ, ಬೆಲೆ ಎಷ್ಟು ಗೊತ್ತಾ?

ಹೊಸ ದಿಗಂತ ವರದಿ, ಮೈಸೂರು:

ಅರಮನೆ ನಗರಿ ಮೈಸೂರಿನಿಂದ ಬೆಳಗಾಂ, ತಮಿಳುನಾಡಿನ ಚೆನ್ನೈಗೆ ಕೇವಲ 921 ರೂನಲ್ಲಿ ವಿಮಾನಯಾನದ ಮೂಲಕ ಪ್ರಯಾಣಿಸಬಹುದು.
ಇಂತಹದೊoದು ವಿಶೇಷ ರಿಯಾಯಿತಿಯನ್ನು ಟ್ರೂಜೆಟ್ ಸಂಸ್ಥೆಯು ಪ್ರಕಟಿಸಿದೆ.
ಜನವರಿ 9ರಿಂದ ಅಕ್ಟೋಬರ್ 30ರವರೆಗೆ ಮೈಸೂರಿನಿಂದ ಬೆಳಗಾಂ ಮತ್ತು ಚೆನ್ನೈಗೆ ವಿಮಾನ ಪ್ರಯಾಣ ಮಾಡಲು ಬಯಸುವವರು ಶುಕ್ರವಾರದಿಂದ ಜ.15ರೊಳಗೆ ಟಿಕೆಟ್ ಬುಕ್ ಮಾಡಲು 921 ರೂ. ಟಿಕೆಟ್ ದರ ನಿಗದಿಪಡಿಸಲಾಗಿದೆ.
ಜ.15ರೊಳಗೆ ಟಿಕೆಟ್ ಬುಕ್ ಮಾಡುವವರಿಗೆ ಮಾತ್ರ ಈ ಸೌಲಭ್ಯ ಲಭ್ಯವಾಗಲಿದೆ.
ಪ್ರಸ್ತುತ ಈ ಪ್ರಯಾಣ ದರ ಬೆಳಗಾಂಗೆ-1,900 ರಿಂದ 2,000 ರೂ. ಹಾಗೂ ಚೆನ್ನೈಗೆ-2,800 ರಿಂದ 3,000 ರೂ.ವರೆಗೆ ಇದೆ. ವಿಶೇಷ ರಿಯಾಯಿತಿಯಲ್ಲಿ ಕಡಿಮೆ ದರದಲ್ಲಿ ವಿಮಾನ ಪ್ರಯಾಣ ಮಾಡಬಹುದಾಗಿ ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!