Tuesday, July 5, 2022

Latest Posts

ಮೈಸೂರಿನ ಉದ್ಯಮಿ ಪ್ರಭುಶಂಕರ್‌ಗೆ ಗೌರವ ಡಾಕ್ಟರೇಟ್ ಆಫ್ ಬಿಸಿನೆಸ್ ಪ್ರಶಸ್ತಿ ಪ್ರದಾನ

ಹೊಸ ದಿಗಂತ ವರದಿ, ಮೈಸೂರು:

ಮೈಸೂರಿನ ಮೆಡಿಕಲ್ ಸಿಸ್ಟಂ ವೈದ್ಯಕೀಯ ಉಪಕರಣದ ಉದ್ಯಮಿ ಪ್ರಭುಶಂಕರ್‌ಗೆ ತಮಿಳುನಾಡಿನ ಚೆನ್ನೈನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಗ್ಲೋಬಲ್ ಹ್ಯೂಮನ್ ಪೀಸ್ ಯೂನಿವರ್ಸಿಟಿಯ ಗೌರವ ಡಾಕ್ಟರೇಟ್ ಪ್ರಶಸ್ತಿ ಲಭಿಸಿದೆ.
ಶನಿವಾರ ಚೆನ್ನೆನ ಭಾರತೀಯ ವಿದ್ಯಾಭವನದ ಕೇಂದ್ರದಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಪ್ರಭುಶಂಕರ ಅವರು ಚೆನ್ನೈನ ಲೋಕ್ ಅದಾಲತ್ ಹೈಕೋರ್ಟ್ನ ನ್ಯಾಯಮೂರ್ತಿ ಎಸ್.ಕೆ ಕೃಷ್ಣನ್ ಅವರಿಂದ ಗೌರವ ಡಾಕ್ಟರೇಟ್ ಆಫ್ ಬಿಜಿನೆಸ್ ಪ್ರಶಸ್ತಿಯನ್ನು ಪಡೆದರು.
ಪ್ರಭುಶಂಕರ ಅವರು ಕಳೆದ 12 ವರ್ಷಗಳಿಂದ ಮೈಸೂರಿನಲ್ಲಿ ಮೈಸೂರು ಮೆಡಿಕಲ್ ಸಿಸ್ಟಂ ಮೂಲಕ ಶ್ವಾಸಕೋಶದ ಸಮಸ್ಯೆ ಇರುವ ರೋಗಿಗಳಿಗೆ ಬಳಸುವ ಯಂತ್ರಗಳಾದ ನೆಬಲೈಸರ್, ಪಲ್ಸ್ ಆಕ್ಸಿಮೀಟರ್, ಸಿಪಿಎಪಿ, ಬಿಐಪಿಎಪಿ, ಆಕ್ಸಿಜನ್ ಕಾನ್ಸನ್‌ಟ್ರೇಟರ್ ಹೀಗೆ ಅನೇಕ ವೈದ್ಯಕೀಯ ಉಪಕರಣಗಳನ್ನು ಆಸ್ಪತ್ರೆಗಳಿಗೆ ಇಲ್ಲವೆ, ರೋಗಿಗಳಿಗೆ ಒದಗಿಸುವ ಕಾರ್ಯದಲ್ಲಿ ತೊಡಗಿಸಿಕೊಂಡು, ಆ ರೋಗಿಗಳ ಪಾಲಿನ ಬಂಧುವಿನAತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ವಾಣಿಜ್ಯ ಮನೋಭಾವಕ್ಕಿಂತ ಸೇವಾ ಮನೋಭಾವನೆಯಿರಿಸಿಕೊಂಡಿದ್ದಾರೆ.
ಇವರ ಈ ಔದ್ಯಮಿಕ ಸೇವೆಯನ್ನು ಪರಿಗಣಿಸಿ ಈಗಾಗಲೆ ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸಿ, ಗೌರವಿಸಿವೆ. ಹಿಮಾಲಯ ಫೌಂಡೇಷನ್‌ನಿAದ ಆಚಾರ್ಯ ಶ್ರೀ ವಿದ್ಯಾರಣ್ಯ ರಾಜ್ಯೋತ್ಸವ ಪ್ರಶಸ್ತಿ, ಯೋಗ ದಸರಾ ಕೇಸರಿ ಪ್ರಶಸ್ತಿ, ವಾಸುದೇವ ಮಹಾರಾಜ್ ಫೌಂಡೇಷನ್‌ನ ಶ್ರೀ ವಾಸುದೇವ ಮಹಾರಾಜ್ ಪ್ರಶಸ್ತಿ, ಭಾವೈಕ್ಯ ಪೀಠದಿಂದ ಶ್ರೀಬಸವ ಭಾವೈಕ್ಯ ಪ್ರಶಸ್ತಿ, ಜಗಜ್ಯೋತಿ ಶ್ರೀ ಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನದ ಬಸವ ಭೂಷಣ ಪ್ರಶಸ್ತಿ ಪ್ರಭುಶಂಕರ್‌ಗೆ ದೊರಕಿವೆ.
ಇದೀಗ ಚೆನ್ನೆöÊನಲ್ಲಿ ಉದ್ಯಮ ಕ್ಷೇತ್ರದ ಸಾಧನೆಗಾಗಿ ಗೌರವ ಡಾಕ್ಟರೇಟ್ ಆಫ್ ಬಿಸಿನೆಸ್‌ಗೆ ಭಾಜನರಾಗಿರುವುದು ವಿಶೇಷವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss