Tuesday, June 28, 2022

Latest Posts

ಮೈಸೂರಿನ ಕೃಷ್ಣರಾಜ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎಸ್.ಎ.ರಾಮದಾಸ್ ಚಾಲನೆ

ಹೊಸ ದಿಗಂತ ವರದಿ, ಮೈಸೂರು:

ಮೈಸೂರಿನ ಕೃಷ್ಣರಾಜ ಕ್ಷೇತ್ರದ ವ್ಯಾಪ್ತಿಗೆ ಬರುವ ನಗರಪಾಲಿಕೆಯ ವಾರ್ಡ್ 51,54 ಮತ್ತು61 ರಲ್ಲಿ ಒಟ್ಟು 2.75 ಕೋ.ರೂ ವೆಚ್ಚ ವಿವಿಧ ಕಾಮಗಾರಿಗಳಿಗೆ ಶಾಸಕ ಎಸ್.ಎ.ರಾಮದಾಸ್ ಅವರು ಭಾನುವಾರ ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.
ಹಲವಾರು ವರ್ಷಗಳಿಂದ ಬೇಡಿಕೆಯಿದ್ದ ಕಾರಣ ಶಾಸಕ ಎಸ್.ಎ. ರಾಮದಾಸ್ ಅವರು ಚುನಾವಣಾ ಸಂದರ್ಭ ಕೊಟ್ಟ ಮಾತಿನಂತೆ ವಾರ್ಡ್ ನಂ.54 ರ ವಿದ್ಯಾರಣ್ಯಪುರಂ ನಿಂದ ನಂಜನಗೂಡು ಮುಖ್ಯರಸ್ತೆಗೆ ಸಂಪರ್ಕ ಹೊಂದುವ 2 ಕಿ.ಮಿ ರಸ್ತೆಯ ಡಾಂಬರೀಕರಣ,ರಸ್ತೆ ಅಗಲೀಕರಣ,ಪುಟ್ ಪಾತ್,ಮಳೆನೀರು ಚರಂಡಿ ಕಾಮಗಾರಿಗೆ 2 ಕೋಟಿ ರೂ ವೆಚ್ಚದ ಕಾಮಗಾರಿಗೆ
ಶಾಸಕರ ಅನುದಾನದಲ್ಲಿ ಲೋಕೋಪಯೋಗಿ ಇಲಾಖೆಯ ವತಿಯಿಂದ ರಸ್ತೆ ಅಭಿವೃದ್ಧಿ ಹಾಗೂ ವಾರ್ಡ್ ನಂ. 51ರ ಸೈಔಟ್ ಮೆರೀಸ್ ವೃತ್ತದಿಂದ ಎಲೆ ತೋಟ ಮುಖ್ಯ ರಸ್ತೆ ಮಾರ್ಗವಾಗಿ ಮಳೆ ನೀರು ಚರಂಡಿಯಲ್ಲಿ ಒಳ ಚರಂಡಿ ನೀರು ಹರಿಯುತ್ತಿತ್ತು. ನಗರಪಾಲಿಕೆ ವತಿಯಿಂದ ಒಳ ಚರಂಡಿ ನೀರು ಪೈಪ್ ಲೈನ್ ಮೂಲಕ ಹಾದು ಹೋಗುವ ಕಾಮಗಾರಿಗೆ ಗುದ್ದಲಿ ಪೂಜೆ ಕಾರ್ಯಕ್ರಮವನ್ನ ಶಾಸಕರಾದ ಎಸ್.ಎ. ರಾಮದಾಸ್ ಅವರು ನೆರವೇರಿಸಿದರು ಈ ಸಂದರ್ಭ ಪಾಲಿಕೆ ಸದಸ್ಯರಾದ ಶೋಭಾ ಸುನಿಲ್ ಉಪಸ್ಥಿತರಿದ್ದರು
ಬಳಿಕ ವಿದ್ಯಾರಣ್ಯಪುರಂ ನಿಂದ ನಂಜನಗೂಡು ಮುಖ್ಯರಸ್ತೆಗೆ ಸಂಪರ್ಕ ಹೊಂದುವ ರಸ್ತೆಯ ಡಾಂಬರೀಕರಣ,ರಸ್ತೆ ಅಗಲೀಕರಣ,ಪುಟ್ ಪಾತ್,ಮಳೆನೀರು ಚರಂಡಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು ಈ ಸಂದರ್ಭದಲ್ಲಿ ಸ್ಥಳೀಯ ನಗರ ಪಾಲಿಕೆ ಸದಸ್ಯರು, ಕೆ.ಆರ್. ಕ್ಷೇತ್ರದ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಮನು ಶೈವ ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss