Sunday, June 26, 2022

Latest Posts

ಮೈಸೂರಿನ ಪೌರಕಾರ್ಮಿಕರೊಂದಿಗೆ ಸಂವಾದ ನಡೆಸಿದ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ

ಮೈಸೂರು: ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಖಾತೆ ರಾಜ್ಯ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಮೈಸೂರಿನ ಇಬ್ಬರು ಪೌರ ಕಾರ್ಮಿಕರೊಂದಿಗೆ ಸಂವಾದ ನಡೆಸಿದರು.
ಸಂವಾದಕ್ಕೆ ಆಯ್ಕೆಯಾಗಿದ್ದ ಮೈಸೂರಿನ ಪೌರಕಾರ್ಮಿಕರಾದ ಮಂಜುಳಾ ಹಾಗೂ ನಂಜು೦ಡಸ್ವಾಮಿ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಂವಾದ ನಡೆಸಬೇಕಾಗಿತ್ತು. ಆದರೆ ಮೋದಿ ಅವರ ಬದಲಿಗೆ ಕೇಂದ್ರ ಸಚಿವರು ಸಂವಾದ ನಡೆಸಿದರು.
ಇಂದು ಸ್ವಚ್ಚ ಸರ್ವೇಕ್ಷಣೆ ಪ್ರಶಸ್ತಿ ಪ್ರಧಾನ ವರ್ಚು್ಯಯಲ್ ಕಾರ್ಯಕ್ರಮವನ್ನ ಮೈಸೂರಿನ ಅರಮನೆಯಂಗಳದಲ್ಲಿ ಆಯೋಜಿಸಲಾಗಿತ್ತು. ವರ್ಚುವಲ್ ಲೈವ್ ಮೂಲಕ ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಖಾತೆ ರಾಜ್ಯ ಸಚಿವ ಹರ್ದೀಪ್ ಅವರು ಮೈಸೂರು ಮಹಾನಗರ ಪಾಲಿಕೆ ಪ್ರತಿನಿಧಿಗಳಾಗಿ ಪೌರ ಕಾರ್ಮಿಕರಾದ ಮಂಜುಳ, ನಂಜು೦ಡಸ್ವಾಮಿ ಮಾತನಾಡಿದರು. ಈ ವೇಳೆ ತಾನು ಕೊರೋನಾದಿಂದ ಗುಣಮುಖರಾಗಿ ಮತ್ತೆ ಬಂದು ಕೆಲಸ ಮಾಡುತ್ತಿರುವುದಾಗಿ. ಇದಕ್ಕೆ ಕಾರಣ ಪ್ರಧಾನಿ ಮೋದಿಯವರ ವಿಮೆ ಯೋಜನೆ. ಕೊರೋನಾ ವಾರಿಯರ್ಸ್ಗೆಂದು ವಿಮೆ ಯೋಜನೆ ಜಾರಿಗೊಳಿಸಿರುವುದರಿಂದಾಗಿ ತಾವು ಧೈರ್ಯವಾಗಿ ಕೆಲಸ ಮಾಡುತ್ತಿದ್ದೇವೆ ಎಂದು ನಂಜುAಡಸ್ವಾಮಿ ಕೇಂದ್ರ ಸಚಿವರಿಗೆ ಹೇಳಿದರು.
ಈ ಮಾಹಿತಿಯಿಂದ ಪುಲ್ ಖುಷಿಯಾದ ಕೇಂದ್ರ ಸಚಿವರು, ಚಪ್ಪಾಳೆ ತಟ್ಟಿ ನಂಜು೦ಡಸ್ವಾಮಿ ಅವರಿಗೆ ಅಭಿನಂದನೆ ಸಲ್ಲಿಸಿದರು. ನಂತರ ಮಂಜುಳಾರನ್ನು ಕೇಂದ್ರ ಸಚಿವರು ಮಾತನಾಡಿಸಿದರು.
ನೀವು ಎಷ್ಟು ವರ್ಷದಿಂದ ಇದ್ದೀರಾ ಎಂದು ಪ್ರಶ್ನಿಸಿದ ಸಚಿವರಿಗೆ ಉತ್ತರಿಸಿದ ಮಂಜುಳಾ, ನಾನು ೨೨ ವರ್ಷದಿಂದ ಕೆಲಸ ಮಾಡುತ್ತಿದ್ದೇನೆ. ನಮ್ಮ ಸಮುದಾಯಕ್ಕೆ ಟಾಯ್ಲೇಟ್ ಅಗತ್ಯವಿದೆ. ಸಮುದಾಯದ ಜನರು ಶೌಚಾಲಯವಿಲ್ಲದೆ ಬಹಳ ತೊಂದರೆ ಪಡುತ್ತಿದ್ದಾರೆ. ಹಾಗಾಗಿ ನಮ್ಮ ಸಮುದಾಯಕ್ಕೆ ಟಾಯ್ಲೆಟ್ ಮಾಡಿ ಕೊಡಬೇಕು ಎಂದು ಸಚಿವರಿಗೆ ಮನವಿ ಮಾಡಿದರು.
ಮೈಸೂರು ಮಹಾನಗರ ಪಾಲಿಕೆ ಯೋಜನೆಗಳ ಬಗ್ಗೆಯೂ ನಂಜು೦ಡಸ್ವಾಮಿ ಹಾಗೂ ಮಂಜುಳಾ ಅವರು ಸಂತಸ ವ್ಯಕ್ತ ಪಡಿಸಿದರು. ಕಾರ್ಯಕ್ರಮದಲ್ಲಿ ಮೈಸೂರು ಮಹಾನಗರಪಾಲಿಕೆ ಮೇಯರ್ ತಸ್ನೀಂ, ನಗರ ಪಾಲಿಕೆ ಆಯುಕ್ತ ಗುರುದತ್ ಹೆಗ್ಡೆ ಇನ್ನಿತರರು ಭಾಗಿಯಾಗಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss