Friday, July 1, 2022

Latest Posts

ಮೈಸೂರು|ಅಕ್ರಮವಾಗಿ ಗಾಂಜಾ ಬೆಳೆಸಿದ್ದ ವ್ಯಕ್ತಿ ಬಂಧನ, 14 ಕೆ.ಜಿ. ಗಾಂಜಾ ಗಿಡಗಳ ವಶ

ಮೈಸೂರು: ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಚಿಕ್ಕ ವಡ್ಡರಕೇರಿ ಗ್ರಾಮದಲ್ಲಿ ಅಕ್ರಮವಾಗಿ ಗಾಂಜಾ ಗಿಡ ಬೆಳೆದಿದ್ದ ವ್ಯಕ್ತಿಯನ್ನು ಮಾಲು ಸಮೇತ ಪೊಲೀಸರು ಬಂಧಿಸಿದ್ದಾರೆ. ಚಿಕ್ಕ ವಡ್ಡರಕೇರಿ ನಿವಾಸಿ ಹರೀಶ್(40) ಬಂಧಿತ ಆರೋಪಿ. ಈತನಿಂದ ಸುಮಾರು 14 ಕೆ.ಜಿ ತೂಕದ 12 ಗಿಡಗಳನ್ನು ವಶಪಡಿಸಿಕೊಂಡಿದ್ದಾರೆ. ಹರೀಶ್ ಎಂಬಾತ ತನ್ನ ತಂದೆಯಿ0ದ ಬಳುವಳಿಯಾಗಿ ಬಂದ ಜಮೀನಿನ ಬದುವಿನಲ್ಲಿ ಕನಕಾಂಬರ ಹೂವಿನ ಗಿಡಗಳ ಮಧ್ಯದಲ್ಲಿ ಗಾಂಜಾ ಗಿಡಗಳನ್ನು ನೆಟ್ಟು ನೀರು ಗೊಬ್ಬರ ಎರೆದು ಸುಮಾರು 12 ಗಿಡಗಳನ್ನು ಅಕ್ರಮವಾಗಿ ಬೆಳೆದಿದ್ದ.
ಈ ಬಗ್ಗೆ ಖಚಿತ ಮಾಹಿತಿ ದೊರೆತ ಡಿವೈಎಸ್‌ಪಿ ಸುಂದರ್ ರಾಜ್, ಸಿಪಿಐ ಬಿ.ಆರ್.ಪ್ರದೀಪ್, ಎಸ್‌ಐ ಗಣೇಶ್ ನೇತೃತ್ವದ ತಂಡ ದಾಳಿ ನಡೆಸಿದಾಗ ಸುಮಾರು 14 ಕೆ.ಜಿ.ಯ 12 ಗಾಂಜಾ ಗಿಡಗಳು ಪತ್ತೆಯಾಗಿದೆ. ಪಿರಿಯಾ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss