Wednesday, August 17, 2022

Latest Posts

ಮೈಸೂರು| ಕಬಿನಿ ಹಿನ್ನೀರಿನಲ್ಲಿ ಮೊಸಳೆಗೆ ಬಲಿಯಾದ ವ್ಯಕ್ತಿ

ಮೈಸೂರು: ಬಹಿರ್ದೆಸೆಗೆ ತೆರೆಳಿದ್ದ ವ್ಯಕ್ತಿಯೊಬ್ಬ ಮೊಸಳೆ ದಾಳಿಗೆ ಬಲಿಯಾಗಿರುವ ಘಟನೆ ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನ ಕೆ.ಬೆಳತ್ತೂರು ಗ್ರಾಮದ ಕಬಿನಿ ಜಲಾಶಯದ ಹಿನ್ನೀರಿನ ಪ್ರದೇಶದಲ್ಲಿ ನಡೆದಿದೆ.
ಕೆ.ಬೆಳತ್ತೂರು ಗ್ರಾಮದ ನಿವಾಸಿ ಶಂಕರನಾಯ್ಕ(೪೩) ಮೊಸಳೆಗೆ ಬಲಿಯಾದವವೀತ ಮನೆಯ ಸಮೀಪ ಹಿನ್ನೀರಿನ ಪ್ರದೇಶ ಇರುವುದರಿಂದ ಬಹಿರ್ದೆಸೆಗೆ ಶಂಕರನಾಯ್ಕ ತೆರಳಿದ್ದ ವೇಳೆ, ನೀರಿನ ಬಳಿ ಬಂದ ಮೊಸಳೆ ಎಳೆದೊಯ್ದಿದೆ.ಪ್ರತ್ಯಕ್ಷದರ್ಶಿ ನೀಡಿದ ಮಾಹಿತಿಯಿಂದ ಸ್ಥಳಕ್ಕೆ ಎಚ್.ಡಿ.ಕೋಟೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಶಂಕರನಾಯ್ಕನಿಗಾಗಿ ಗ್ರಾಮಸ್ಥರು ಮತ್ತು ಈಜುಗಾರರಿಂದ ಶೋಧಕಾರ್ಯ ನಡೆಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!