ಮೈಸೂರು: ಬಹುಜನ ಸಮಾಜ ಪಕ್ಷದ ನಂಜನಗೂಡು ತಾಲೂಕು ಘಟಕದ ಅಧ್ಯಕ್ಷ ಎಂ.ರಾಮಚoದ್ರ (೪೫) ಕಾಲು ಜಾರಿ ನಾಲೆಗೆ ಬಿದ್ದು, ನೀರುಪಾಲಾಗಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಮಾಡ್ರಹಳ್ಳಿ ಸಮೀಪ ಕಬಿನಿ ಬಲದಂಡೆ ನಾಲೆಯಲ್ಲಿ ನಡೆದಿದೆ. ನಂಜನಗೂಡು ತಾಲೂಕಿನ ಸಿಂಗಾರಿಪುರ ಗ್ರಾಮದ ನಿವಾಸಿಯಾದ ರಾಮಚಂದ್ರ ಭಾನುವಾರ ಬೆಳಗ್ಗೆ ವಾಯು ವಿಹಾರಕ್ಕೆಂದು ತೆರಳಿದ್ದು ವಾಪಸ್ ಹಿಂತಿರುಗುವ ವೇಳೆ ಮಾಡ್ರಹಳ್ಳಿ ಸಮೀಪ ಕಬಿನಿ ಬಲದಂಡೆ ನಾಲೆಗೆ ಕಾಲು ತೊಳೆಯಲೆಂದು ಇಳಿದ ವೇಳೆ ಆಯತಪ್ಪಿ ನೀರುಪಾಲಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಭಾನುವಾರ ಸಂಜೆವರೆಗೂ ಕಬಿನಿ ನಾಲೆಯಲ್ಲಿ ನುರಿತ ಈಜುಗಾರರ ಸಹಕಾರದೊಂದಿಗೆ ಹುಡುಕಾಟ ನಡೆಸಲಾಯಿತಾದರೂ ನೀರು ಪಾಲಾಗಿದ್ದ ಎಂ.ರಾಮಚoದ್ರರ ಬಗ್ಗೆ ಯಾವುದೇ ಸುಳಿವು ಪತ್ತೆಯಾಗಲಿಲ್ಲ. ಸೋಮವಾರ ಬೆಳಗ್ಗೆ ಹುಡುಕಾಟ ಮುಂದುವರಿಸಿದಾಗ, ತಿ.ನರಸೀಪುರ ತಾಲೂಕಿನ ಗುಜಗನೂರು ಬಳಿ ಶವ ಪತ್ತೆಯಾಗಿದೆ. ಮೃತರ ಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು