ಮೈಸೂರು: ಮಹಾಮಾರಿ ಕೊರೋನಾ ಸೋಂಕಿನಿAದ ಮುಕ್ತವಾಗುತ್ತಿರುವ ಮೈಸೂರು ಜಿಲ್ಲೆಗೆ, ಕೇರಳ ರಾಜ್ಯದಿಂದ ಸಾರ್ವಜನಿಕರು, ಅವರ ವಾಹನಗಳು ನೇರವಾಗಿ ಪ್ರವೇಶಿಸುವುದಕ್ಕೆ ನಿರ್ಬಂಧ ಹೇರಲಾಗಿದೆ. ಸಾರ್ವಜನಿಕರು ದ್ವಿಚಕ್ರ ವಾಹನಗಳು ಸೇರಿದಂತೆ ಎಲ್ಲಾ ರೀತಿಯ ಮೈಸೂರಿಗೆ ಬರಬೇಕಾದರೆ, ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ, ತೆರಕಣಾಂಬಿ, ಚಾಮರಾಜನಗರ, ಸಂತೇಮರಹಳ್ಳಿ, ಟಿ.ನರಸೀಪುರ ಮೂಲಕ ಮೈಸೂರು ನಗರಕ್ಕೆ ಪ್ರವೇಶಿಸಬೇಕು. ಇನ್ನು ಮೈಸೂರಿನಿಂದ ಕೇರಳ ರಾಜ್ಯಕ್ಕೆ ತೆರಳಬೇಕಾದರೆ ಇದೇ ಮಾರ್ಗದ ಮೂಲಕವೇ ಹೋಗಬೇಕು. ಕೇರಳ ರಾಜ್ಯದಿಂದ ಮೈಸೂರಿಗೆ ಬರುವ ಸರಕು ಸಾಗಾಣಿಕೆಯ ವಾಹನಗಳು ಮಾತ್ರ ಬಾವಲಿ ಮೂಲಕ ಬರಬೇಕು, ಅದೇ ರೀತಿ ಮೈಸೂರಿನಿಂದ ಹೋಗುವ ಸರಕು ಸಾಗಾಣಿಕೆ ವಾಹನಗಳು ಬಾವಲಿ ಮೂಲಕವೇ ಕೇರಳಕ್ಕೆ ತೆರಳಬೇಕೆಂದು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ತಿಳಿಸಿದ್ದಾರೆ.