Tuesday, August 9, 2022

Latest Posts

ಮೈಸೂರು| ಕೊರೋನಾ ನಂಜಿನಗೂಡಾಗಿದ್ದ ದಕ್ಷಿಣ ಕಾಶಿ ನಂಜನಗೂಡಿಗೆ ಬಿಗ್ ರಿಲೀಫ್ *ಅಂಗಡಿಗಳ ಓಪನ್, ಜನರ ಸಂಚಾರ, ಕೈಗಾರಿಕೆಗಳ ಆರಂಭಕ್ಕೆ ಅವಕಾಶ

ಮೈಸೂರು: ಕೊರೋನಾ ಸೋಂಕಿನ ತೀವ್ರ ಹರಡುವಿಕೆಯಿಂದಾಗಿ ನಂಜಿನಗೂಡಾಗಿದ್ದ ದಕ್ಷಿಣ ಕಾಶಿ ಎಂದು ಹೆಸರಾಗಿರುವ ನಂಜನಗೂಡಿಗೆ ಇದೀಗ ಬಿಗಿ ರಿಲೀಫ್ ಸಿಕ್ಕಿದೆ. ಕಳೆದ ೧೪ ದಿನಗಳಿಂದ ನಂಜನಗೂಡು ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಕೊರೋನಾ ವೈರಸ್‌ನ ಯಾವುದೇ ಪ್ರಕರಣಗಳು ಕಂಡು ಬಾರದ ಹಿನ್ನಲೆಯಲ್ಲಿ ಹೇರಲಾಗಿದ್ದ ಲಾಕ್ ಡೌನ್‌ನ ನಿರ್ಬಂಧಗಳನ್ನು ಜಿಲ್ಲಾಡಳಿತ ಸಡಿಲಗೊಳಿಸಿದೆ.
ನಂಜನಗೂಡಿನ ಜುಬಿಲಿಯಂಟ್ ಔಷಧ ಕಾರ್ಖಾನೆಯ ಕಾರ್ಮಿಕರಿಗೆ ಮಹಾಮಾರಿ ಕೊರೋನಾ ವೈರಸ್ ಸೋಂಕು ಚೈನ್‌ಲಿಂಕ್‌ನAತೆ ಹರಡಿಕೊಂಡು ಹೋಗುತ್ತಿತ್ತು. ಈ ಸೋಂಕಿತರು ನಂಜನಗೂಡು ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ವಾಸಿಸುತ್ತಿದ್ದ ಕಾರಣ, ಅವರ ಸಂಪರ್ಕಕ್ಕೆ ಬಂದಿದ್ದ ಪ್ರಾಥಮಿಕ ಹಾಗೂ ಸೆಕೆಂಡರಿ ಸಂಪರ್ಕಿತರಿಗೂ ಕೊರೋನಾ ವೈರಸ್ ಸೋಂಕು ತಗುಲಿಕೊಂಡು ಹೋಗಿತ್ತು. ಇದರಿಂದಾಗಿ ನಂಜನಗೂಡು ಪಟ್ಟಣದಲ್ಲಿ ೨೫ ಜನರಿಗೆ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ೩೪ ಜನರಿಗೆ ಕೊರೋನಾ ಸೋಂಕು ತಗುಲಿರುವುದು ಪರೀಕ್ಷೆಯಿಂದ ದೃಢಪಟ್ಟಿದ್ದ ಕಾರಣ, ೪೦ ಕಂಟೇನ್‌‌ಮೆಂಟ್ ‌ವಲಯವೆ೦ದು ಘೋಷಿಸಿ, ಇಡೀ ನಂಜನಗೂಡಿಗೆ ದಿಗ್ಬಂಧನವನ್ನು ಹಾಕಿ, ಜನರ ಸಂಚಾರಕ್ಕೂ ಕಠಿಣ ನಿರ್ಬಂಧವನ್ನು ಹೇರಲಾಗಿತ್ತು. ಇದರಲ್ಲಿ ೧೦ಕ್ಕೂ ಹೆಚ್ಚು ಪ್ರದೇಶಗಳನ್ನು ಕಂಟೇನ್‌ಮೆAಟ್ ಝೋನ್‌ನಿಂದ ತೆರವುಗೊಳಿಸಲಾಗಿದ್ದು, ಹಂತ, ಹಂತವಾಗಿ ಮತ್ತಷ್ಟು ಪ್ರದೇಶಗಳನ್ನು ನಿರ್ಬಂಧದಿAದ ಮುಕ್ತಿಗೊಳಿಸಲಾಗುತ್ತಿದೆ.
ನಿರ್ಬಂಧ ಸಡಿಲಿಕೆ : ನಂಜನಗೂಡು ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಹಲವು ಮುನ್ನೇಚ್ಚರಿಕೆ ಕ್ರಮಗಳನ್ನು ಕೈಗೊಂಡು, ಹೇರಲಾಗಿದ್ದ ನಿರ್ಬಂಧಗಳನ್ನು ಸಡಿಲಗೊಳಿಸಿ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಆದೇಶ ಹೊರಡಿಸಿದ್ದಾರೆ. ಅನುಮತಿಸಿದ ಚಟುವಟಿಕೆಗಳಿಗೆ ಮಾತ್ರ ವ್ಯಕ್ತಿಗಳು ಮತ್ತು ವಾಹನಗಳು ಓಡಾಟ ನಡೆಸಬಹುದು. ದ್ವಿಚಕ್ರವಾಹನದಲ್ಲಿ ಒಬ್ಬ, ನಾಲ್ಕು ಚಕ್ರದಲ್ಲಿ ಚಾಲಕ ಸಹಿತ ಇಬ್ಬರು ಸಂಚರಿಸಬಹುದು. ಕೆಐಎಡಿಬಿ ಕೈಗಾರಿಕಾ ಪ್ರದೇಶದಲ್ಲಿರುವ ಎಲ್ಲಾ ಕೈಗಾರಿಕಾ ಉದ್ಯಮಗಳು ಕಾರ್ಯನಿರ್ವಹಿಸಲು ಅನುಮತಿಸಲಾಗಿದೆ. ನಂಜನಗೂಡು ಗ್ರಾಮಾಂತರ ಪ್ರದೇಶದಲ್ಲಿರುವ ಎಲ್ಲಾ ಕೈಗಾರಿಕಾ ಉದ್ಯಮಗಳು ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ. ನಂಜನಗೂಡು ಪಟ್ಟಣ ವ್ಯಾಪ್ತಿಯಲ್ಲಿ ಲಭ್ಯವಿರುವ ಕಾರ್ಮಿಕರನ್ನು ಬಳಸಿಕೊಂಡು, ಕಟ್ಟಡ, ಕಾಮಗಾರಿಗಳನ್ನು ನಡೆಸಬಹುದಾಗಿದೆ. ಶಾಪಿಂಗ್ ಕಾಂಪ್ಲೇಕ್ಸ್ ಗಳಲ್ಲಿರುವ ಅಗತ್ಯ ಸಾಮಾಗ್ರಿಗಳು, ಔಷಧ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ.
ನಂಜನಗೂಡು ಪಟ್ಟಣದಲ್ಲಿ ಬೆಳಗ್ಗೆ ೭ ಗಂಟೆಯಿಂದ  ಸಂಜೆ ೫ಗಂಟೆಯೊಳಗೆ ಅಗತ್ಯ ವಸ್ತುಗಳು ಅಂಗಡಿ ಮಳಿಗೆಗಳು, ಹಾರ್ಡ್ವೇರ್, ಸಿಮೆಂಟ್, ಕಬ್ಬಿಣದ ಅಂಗಡಿ ಇತ್ಯಾದಿ ಕಟ್ಟಡ ಕಾಮಗಾರಿಗಳಿಗೆ ಸಂಬAಧಿಸಿದ ಅಂಗಡಿಗಳನ್ನು ತೆರೆಯಲು ಅನುಮತಿಯನ್ನು ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಬಟ್ಟೆ, ಚಿನ್ನಾಭರಣ, ಪಾದರಕ್ಷೆ ಅಂಗಡಿ ಇತ್ಯಾದಿ ಮಳಿಗೆಗಳನ್ನು ತೆರೆಯುವಂತಿಲ್ಲ, ಕಂಟೈನ್‌ಮೆಂಟ್  ಝೋನ್‌ನಲ್ಲಿರುವ ಖಾಸಗಿ ಕಚೇರಿಗಳನ್ನು ಹೊರತುಪಡಿಸಿ, ಉಳಿದಂತೆ ಖಾಸಗಿ ಕಚೇರಿಗಳು ಶೇ ೩೩ ರಷ್ಟು ಸಿಬ್ಬಂದಿಗಳೊಂದಿಗೆ ಕಾರ್ಯ ನಿರ್ವಹಿಸಬಹುದು. ನಿಯಂತ್ರಿತ ವಲಯದಲ್ಲಿ ವಾಸಿಸುತ್ತಿರುವ ಸಾರ್ವಜನಿಕರನ್ನು ಹೊರತುಪಡಿಸಿ, ಇತರೆ ಸರ್ಕಾರಿ ಹಾಗೂ ಖಾಸಗಿ ಕಚೇರಿ, ಕಾರ್ಖಾನೆಗಳಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಸಿಬ್ಬಂದಿಗಳು ಸಂಬAಧಿಸಿದ ಕಚೇರಿಗಳಿಂದ ಗುರುತಿನ ಚೀಟಿಗಳನ್ನು ಪಡೆದುಕೊಂಡು ಕರ್ತವ್ಯಕ್ಕೆ ತೆರಳಬಹುದು ಎಂದು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss