ಹೊಸದಿಗಂತ ವರದಿ, ಮೈಸೂರು:
ಮಹಾಮಾರಿ ಕೊರೋನಾ ಸೋಂಕು ಹರಡುವಿಕೆ ನಿಯಂತ್ರಣ ಮಾಡಬೇಕಾದ ಅನಿವಾರ್ಯತೆಯ ಬಗ್ಗೆ ಗೃಹ ರಕ್ಷಕ ದಳದವರು ಶನಿವಾರ ನಗರದಲ್ಲಿ ಜಾಗೃತಿ ಜಾಥಾ ನಡೆಸಿದರು.
ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಜಾಗೃತಿ ಜಾಥಾಗೆ ಚಾಲನೆ ನೀಡಲಾಯಿತು. ದಿ ನ್ಯೂ ಇಂಡಿಯಾ ಅಸ್ಸುರೇನ್ಸ್ ಕೋ.ಲಿಮಿಟೆಡ್ ನ ಅಭಿವೃದ್ಧಿ ಅಧಿಕಾರಿ ಬಿ.ಎಸ್.ಪ್ರಕಾಶ್ ಚಾಲನೆ ನೀಡಿದರು.
ಈ ವೇಳೆ ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕ ಶಿವಕುಮಾರ್, ಉಪ ಅಧೀಕ್ಷಕ ಕಮಾಂಡೆಟ್ ಎನ್.ವೆಂಕಟೇಶ್ ಇತರರು ಉಪಸ್ಥಿತರಿದ್ದರು.
ನಗರದ ಪ್ರಮುಖ ರಸ್ತೆಗಳಲ್ಲಿ ಕೊರೋನಾ ಜಾಗೃತಿ ಕುರಿತು ಬರೆದಿದ್ದ ಘೋಷಣೆಗಳ ಬಿತ್ತಿ ಪತ್ರವನ್ನು ಹಿಡಿದು ಸಾಗಿದ ಗೃಹರಕ್ಷಕದಳದವರು, ಮಾಸ್ಕ್ ಧರಿಸಿ ಇತರರಿಗೆ ವೈಸರ್ ಹರಡುವುದನ್ನು ತಡೆಗಟ್ಟಿ, ಸಾಮಾಜಿಕ ಅಂತರವೇ ಕೊರೊನಾ ವೈರಸ್ ಗೆ ಕೀಲಿಕೈ ಎಂಬ ಘೋಷಣೆಗಳನ್ನು ಕೂಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ಜಾಥಾ ಕೊನೆಗೆ ಜಿಲ್ಲಾಧಿಕಾರಿ ಕಚೇರಿ ಬಳಿ ಮುಕ್ತಾಯಗೊಂಡಿತು.