Friday, August 19, 2022

Latest Posts

ಮೈಸೂರು| ಕೊರೋನಾ ಸೇವೆಗೆ `ಸ್ವಯಂ ಪ್ರೇರಿತ ಕಾರ್ಯಪಡೆಗೆ ಚಾಲನೆ ನೀಡಿದ ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ 

ಮೈಸೂರು: ಅರಮನೆ ನಗರಿ ಮೈಸೂರಿನಲ್ಲಿ ಅಬ್ಬರಿಸುತ್ತಿರುವ ಕೊರೋನಾ ಮಹಾಮಾರಿ ತಡೆಗಟ್ಟಲು ಜಿಲ್ಲಾಡಳಿತ ಹರಸಾಹಸಪಡುತ್ತಿದ್ದು, ಈ ಮಧ್ಯೆ ಕೊರೊನಾ ಸೇವೆಗಾಗಿ ಸ್ಥಳೀಯ ನಿವಾಸಿಗಳು ಸ್ವಯಂಪ್ರೇರಿತರಾಗಿ ನಿಂತಿದ್ದಾರೆ.
ಮೈಸೂರಿನ ಶಾರದಾದೇವಿನಗರದ ಸ್ಥಳೀಯ ನಿವಾಸಿಗಳೇ ಸೇರಿಕೊಂಡು, ಕೊರೋನಾ ಕಾರ್ಯ ಪಡೆ ರಚನೆ ಮಾಡಿದ್ದಾರೆ. ನಗರಪಾಲಿಕೆಯ ವಾರ್ಡ್ ನಂ ೪೫ ರ ನಿವಾಸಿಗಳು ಈ ಸ್ವಯಂಪ್ರೇರಿತ ಕಾರ್ಯ ಪಡೆ ರಚನೆ ಮಾಡಿದ್ದು, ಈ ಮೂಲಕ ಕೊರೋನಾ ಸೋಂಕಿಗೆ ಒಳಗಾದ ಕುಟುಂಬಗಳಿಗೆ ಅಗತ್ಯ ಸೇವೆ ನೀಡಲುಈ ಸ್ವಯಂಸೇವಕರು ಮುಂದಾಗಿದ್ದಾರೆ.
ಈ ಕಾರ್ಯಪಡೆಗೆ ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಚಾಲನೆ ನೀಡಿ, ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ಕಾರ್ಯಕ್ರಮದಲ್ಲಿ ನಗರಪಾಲಿಕೆ ಸದಸ್ಯೆ ನಿರ್ಮಲಾ ಹರೀಶ್, ಮುಖಂಡ ಹರೀಶ್ ಸೇರಿದಂತೆ ಕಾರ್ಯಪಡೆ ಸದಸ್ಯರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!