ಮೈಸೂರು: ಕೊರೋನಾ ಸೋಂಕಿನಿAದ ಬಳಲುತ್ತಿದ್ದ ವ್ಯಕ್ತಿಯೊಬ್ಬರ ಮನೆಯ ಹೊಕ್ಕಿದ್ದ ನಾಗರಹಾವನ್ನು ಉರಗತಜ್ಞ ಸ್ನೇಕ್ ಶ್ಯಾಂ ಸೆರೆ ಹಿಡಿದಿದ್ದಾರೆ.
ಜೆ.ಪಿ.ನಗರದ ಡಿ ಬ್ಲಾಕ್ನಲ್ಲಿರುವ ಮನೆಯ ನಿವಾಸಿಯೊಬ್ಬರಿಗೆ ಸೋಂಕು ತಗುಲಿದ್ದ ಕಾರಣ ಆ ಮನೆಯನ್ನು ಸೀಲ್ ಡೌನ್ ಮಾಡಲಾಗಿತ್ತು. ಮಳೆಗಾಲವಾಗಿದ್ದರಿಂದ ಹಾವೊಂದು ಸೇರಿಕೊಂಡಿತ್ತು. ಮನೆಯ ಮಾಲೀಕರು ಉರಗ ತಜ್ಞ ಸ್ನೇಕ್ ಶ್ಯಾಂರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಕೋವಿಡ್ ಸೋಂಕು ಅಂಟುವ ಭಯ, ಆತಂಕವನ್ನು ಲೆಕ್ಕಿಸದೆ ಪಿಪಿಇ ಕಿಟ್ನ್ನೂ ಸಹ ಧರಿಸದೆ ಮನೆಗೆ ಬಂದ ಸ್ನೇಕ್ ಶ್ಯಾಮ್, ಮನೆಯಲ್ಲಿ ಅವಿತಿದ್ದ ನಾಗರಹಾವನ್ನು ಹಿಡಿದರು. ಬಳಿಕ ಮಾತನಾಡಿದ ಅವರು, ಮಳೆಗಾಲವಾಗಿರುವುದರಿಂದ ಮನೆಗಳಿಗೆ ಹಾವು ಸೇರುವುದು ಸಾಮಾನ್ಯವಾಗಿದೆ.
ಕೊರೋನಾ ಸೋಂಕಿನಿAದಾಗಿ ಸೀಲ್ ಡೌನ್ ಆಗಿರುವ ನಿವಾಸಿಗಳ ಸುತ್ತಮುತ್ತಲೇ ಕಳೆದ ಕೆಲ ದಿನಗಳಲ್ಲಿ ಹಲವು ಹಾವು ರಕ್ಷಣೆ ಮಾಡಿದ್ದೇನೆ. ನನಗೂ ಕೊರೋನಾ ಸೋಂಕಿನ ಭಯವಿದೆ. ಆದರೆ ಹಾವುಗಳ ರಕ್ಷಣೆ ಮಾಡಿ, ಜನರಿಗೆ ಅದರಿಂದಾಗುವ ಸಾವು-ನೋವುಗಳನ್ನು ತಪ್ಪಿಸಬೇಕಾಗಿದೆ. ಹಾಗಾಗಿ ಜಿಲ್ಲಾಡಳಿತ ನನಗೆ ಪಿಪಿಇ ಕಿಟ್ಟ ನೀಡಿದರೆ ಉತ್ತಮ ಎಂದರು.