Thursday, July 7, 2022

Latest Posts

ಮೈಸೂರು | ಕೊರೋನಾ ಸೋಂಕಿನಿಂದ ಗುಣವಾದ ವ್ಯಕ್ತಿಯ ಬಿಡುಗಡೆ

ಮೈಸೂರು : ಮಹಾಮಾರಿ ಕೊರೋನಾ ವೈರಸ್ ಸೋಂಕಿನಿಂದ ಸಂಪೂರ್ಣವಾಗಿ ಗುಣವಾದ ವ್ಯಕ್ತಿಯನ್ನು ಬುಧವಾರ ಮೈಸೂರಿನ ಕೋವಿಡ್ ಆಸ್ಪತ್ರೆಯಿಂದ ವೈದ್ಯರು, ನರ್ಸ್ ಹಾಗೂ ಸಿಬ್ಬಂದಿ ಬಿಡುಗಡೆ ಮಾಡಿ ಬೀಳ್ಕೋಟ್ಟರು. ಮಹಾರಾಷ್ಟ್ರ ದ ಮುಂಬೈನಿಂದ ಮೈಸೂರಿಗೆ ಆಗಮಿಸಿದ್ದ ವ್ಯಕ್ತಿಯ ಗಂಟಲಿನ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆ ಗೆ ಒಳಪಡಿಸಿದಾಗ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಈ ವ್ಯಕ್ತಿಗೆ ಸೋಂಕಿತ ಕೇಸ್ 1510 ಹೆಸರಿಸಿ, ಮೈಸೂರಿನ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ತೀಡಲಾಗುತ್ತಿತ್ತು. ಇದೀಗ ಈತ ಗುಣವಾಗಿ ಬಿಡುಗಡೆ ಗೊಂಡಿದ್ದಾನೆ. ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿನಿಂದ ಗುಣವಾದರ ಸಂಖ್ಯೆ 91ಕ್ಕೆ ಏರಿಕೆಯಾಗಿದೆ. ಇನ್ನೊಬ್ಬ ಸೋಂಕಿತ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆತನೂ ಗುಣವಾದರೆ ಮೈಸೂರು ಕೊರೋನಾ ಸೋಂಕಿನಿಂದ ಮುಕ್ತವಾಗುತ್ತದೆ. ಏಕೆಂದರೆ ಕಳೆದ ಆರು ದಿನದಿಂದ ಯಾವುದೇ ಹೊಸ ಕೇಸ್ ಪತ್ತೆಯಾಗಿಲ್ಲ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss