ಮೈಸೂರು: ನಗರದ ಖಾಸಗಿ ಆಸ್ಪತ್ರೆಯೊಂದರ ಸ್ಟೋರ್ ರೂಂನಲ್ಲಿ ಮಲಗಿದ್ದ ನಾಗರಹಾವೊಂದನ್ನು ಸೆರೆ ಹಿಡಿಯಲಾಯಿತು. ಮೈಸೂರಿನ ಡಾ.ರಾಜಕುಮಾರ್ ರಸ್ತೆಯಲ್ಲಿರುವ ಡಾ.ಜ್ಯೋತೀಸ್ ಐವಿಎಫ್ ಆಂಡ್ ಚಿಲ್ಡçನ್ಸ್ ಆಸ್ಪತ್ರೆಯ ಸ್ಟೋರ್ರೂಂ ಹೊಕ್ಕಿದ್ದ ನಾಗರಹಾವು ಬೆಚ್ಚನೆ ಮಲಗಿತ್ತು. ಹಾವಿನ ಶಬ್ದ ಕೇಳಿದ ಸಿಬ್ಬಂದಿ ಹುಡುಕಾಡಿದಾಗ ನಾಗರ ಹಾವು ಕಂಡು ಬಂದಿತು. ವಿಷಯ ತಿಳಿದು ತಕ್ಷಣ ಸ್ಥಳಕ್ಕೆ ಬಂದ ಸ್ನೇಕ್ ಕೆಂಪರಾಜು ನಾಗರಹಾವನ್ನು ಸೆರೆ ಹಿಡಿದು, ಅದನ್ನು ಚಾಮುಂಡಿ ಬೆಟ್ಟದ ಅರಣ್ಯ ಪ್ರದೇಶಕ್ಕೆ ತೆಗೆದುಕೊಂಡು ಹೋಗಿ ಬಿಟ್ಟರು. ಇತ್ತೀಚಿಗೆ ಮೈಸೂರಿನಲ್ಲಿ ನಾಗರಹಾವುಗಳು ಎಲ್ಲಂದರಲ್ಲಿ ಕಾಣಿಸಿಕೊಳ್ಳುತ್ತಿವೆ. ಮಳೆಯ ಕಾರಣದಿಂದಾಗಿ ಹಾವುಗಳು ಬಿಲದಿಂದ ಹೊರಬಂದು ಸ್ಕೂಟರ್, ಆಸ್ಪತ್ರೆ ಮುಂತಾದ ಕಡೆಗಳಲ್ಲಿ ಹೊಕ್ಕುತ್ತಿವೆ. ಇದರಿಂದಾಗಿ ಜನರು ಬೆಚ್ಚಿ ಬೀಳುವಂತಾಗಿದೆ.