Tuesday, July 5, 2022

Latest Posts

ಮೈಸೂರು ಗ್ರಾ.ಪಂ.ಚುನಾವಣೆ ಸಮರ: ಮತ ಎಣಿಕೆ ಪ್ರಾರಂಭ

ಹೊಸದಿಗಂತ ವರದಿ,ಮೈಸೂರು:

ಜಿಲ್ಲೆಯ 250 ಗ್ರಾಮಪಂಚಾಯಿತಿಗಳಿಗೆ ಎರಡು ಹಂತದಲ್ಲಿ ನಡೆದಿರುವ ಚುನಾವಣೆಯ ಮತಗಳ ಎಣಿಕೆ ಇಂದು ನಡೆಯುತ್ತಿದೆ.

ಜಿಲ್ಲೆಯ ತಾಲೂಕು ಕೇಂದ್ರಗಳು ಹಾಗೂ ಮೈಸೂರು ನಗರದ ಒಂದು ಕೇಂದ್ರ ಸೇರಿದಂತೆ ಒಟ್ಟು 8 ಕೇಂದ್ರಗಳಲ್ಲಿ ಬೆಳಗ್ಗೆ 8 ಗಂಟೆಯಿAದ ಮತ ಎಣಿಕೆಯನ್ನು ಬೆಳಗ್ಗೆ 8 ರಿಂದ ಆರಂಭಿಸಲಾಯಿತು.

ಭದ್ರತಾ ಕೊಠಡಿಯಲ್ಲಿ ದ್ದ ಮತಪೆಟ್ಟಿಗೆಗಳನ್ನು ಎಣಿಕೆ ಟೇಬಲ್ ಗಳಿಗೆ ತಂದು ಮತಗಳ ಎಣಿಕೆಯನ್ನು ಪ್ರಾರಂಭಿಸಲಾಯಿತು. ಒಟ್ಟು 8 ಕೇಂದ್ರಗಳಲ್ಲಿ 191 ಮತ ಎಣಿಕೆ ಕೊಠಡಿಗಳಲ್ಲಿ 1,764 ಮತ ಎಣಿಕೆ ಅಧಿಕಾರಿಗಳು, 534 ಮತ ಎಣಿಕೆ ಟೇಬಲ್‌ಗಳನ್ನು ಬಳಸಿಕೊಂಡು ಮತಗಳ ಎಣಿಕೆ ಮಾಡುತ್ತಿದ್ದಾರೆ.

ಎಲ್ಲೆಲ್ಲಿ ಮತ ಎಣಿಕೆ ಕೇಂದ್ರಗಳು: ಮೈಸೂರು ನಗರದ ಪಡುವರಹಳ್ಳಿಯ ಮಹಾರಾಣಿ ವಾಣಿಜ್ಯ ಮತ್ತು ನಿರ್ವಹಣ ಕಾಲೇಜು, ನಂಜನಗೂಡಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು, ತಿ.ನರಸೀಪುರದ ವಿದ್ಯೋದಯ ಶಿಕ್ಷಣ ಸಂಸ್ಥೆ, ಹುಣಸೂರಿನ ಸಂತ ಜೋಸಫ್ ವಿದ್ಯಾ ಸಂಸ್ಥೆ, ಕೆ.ಆರ್ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಪಿರಿಯಾಪಟ್ಟಣದ ಪುಷ್ಪ ಕಾನ್ವೆಂಟ್, ಎಚ್.ಡಿ.ಕೋಟೆಯ ಸೇಂಟ್ ಮೇರಿಸ್ ಶಾಲೆ ಮತ್ತು ಸರಗೂರು ತಾಲೂಕಿನ ಗ್ರಾಮ ಪಂಚಾಯತಿ ಕ್ಷೇತ್ರಗಳ ಮತ ಎಣಿಕೆ ಎಚ್.ಡಿ.ಕೋಟೆ ತಾಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯುತ್ತಿದೆ. ಫಲಿತಾಂಶ ವನ್ನು ತಿಳಿಯಲು ಅಭ್ಯರ್ಥಿಗಳು, ಅವರ ಬೆಂಬಲಿಗರು ಕಾತುರದಿಂದ ಕಾಯುತ್ತಿದ್ದಾರೆ. ಮತ ಕೇಂದ್ರದ ಸುತ್ತ ಬಿಗಿ ಪೊಲೀಸ್ ಬಂದೋ ಬಸ್ತ್ ಮಾಡಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss