Monday, August 15, 2022

Latest Posts

ಮೈಸೂರು ಜಿಲ್ಲಾಧಿಕಾರಿಗೆ ತಾತ್ಕಾಲಿಕ ರಿಲೀಫ್: ನ.23ಕ್ಕೆ ವಿಚಾರಣೆ ಮೂಂದೂಡಿಕೆ

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ.
ಜಿಲ್ಲಾಧಿಕಾರಿಯಾಗಿ ನೇಮಕಗೊಂಡ ಒಂದೇ ತಿಂಗಳಲ್ಲಿ ವರ್ಗಾವಣೆಗೊಳಿಸಿದ ರಾಜ್ಯ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಡಿಸಿ ಬಿ. ಶರತ್ ಸಿಎಟಿಯಲ್ಲಿ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ಕೈಗೆತ್ತಿಕೊಂಡಂತ ಸಿಎಟಿ, ವಿಚಾರಣೆ ನಡೆಸಿದ ಬಳಿಕ ಮತ್ತೆ ನ.೨೩ಕ್ಕೆ ವಿಚಾರಣೆ ಮುಂದುವರಿಸುವುದಾಗಿ ಹೇಳಿದೆ.
ತಮ್ಮ ವರ್ಗಾವಣೆ ಪ್ರಶ್ನಿಸಿ ಸಿಎಟಿ ಮೊರೆ ಹೋಗಿರುವ ನಿರ್ಗಮಿತ ಡಿಸಿ ಬಿ.ಶರತ್, ಕಳೆದ ಒಂದು ತಿಂಗಳ ಹಿಂದೆ ಈ ಬಗ್ಗೆ ಪ್ರಶ್ನಿಸಿದ್ದರು. ಸಿಎಟಿ ಈಗಾಗಲೇ ಐದು ಬಾರಿ ವಿಚಾರಣೆ ಮುಂದೂಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss