ಮೈಸೂರು: ಅರಮನೆ ನಗರಿ ಮೈಸೂರು ಜಿಲ್ಲೆಯಲ್ಲಿ ಹೊಸದಾಗಿ 481 ಜನರಿಗೆ ಕೊರೋನಾ ವೈರಾಣು ಸೋಂಕು ತಗುಲಿರುವುದು ಕೋವಿಡ್ ಪರೀಕ್ಷೆಯಿಂದ ದೃಢಪಟ್ಟಿದೆ. ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತರ ಸಂಖ್ಯೆ 31,573 ಕ್ಕೆ ಏರಿಕೆಯಾಗಿದೆ. 4807 ಮಂದಿ ಸಕ್ರೀಯ ಸೋಂಕಿತರಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿನಿಂದ ಗುಣವಾದ ಯಾರನ್ನು ಇಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಿಲ್ಲ, ಹಾಗಾಗಿ ಸೋಂಕಿನಿ0ದ ಗುಣವಾದರ ಸಂಖ್ಯೆ 26,051. ಸೋಂಕಿಗೆ ಇಂದು ಯಾರೂ ಬಲಿಯಾಗಿಲ್ಲ,ಸಾವಿಗೀಡಾದವರ ಸಂಖ್ಯೆ 715.