spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, September 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಮೈಸೂರು ಜಿಲ್ಲೆಯ ಮೂರು ಜಲಾಶಯಗಳು ಭರ್ತಿ; ನದಿಗೆ ಅಪಾರ ಪ್ರಮಾಣದಲ್ಲಿ ನೀರು ಬಿಡುಗಡೆ, ಪ್ರವಾಹ

- Advertisement -Nitte

ಮೈಸೂರು: ಕೇರಳದ ವೈನಾಡು ಹಾಗೂ ಪಶ್ಚಿಮ ಘಟ್ಟ ಅರಣ್ಯ ಪ್ರದೇಶಗಳಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಮೈಸೂರು ಜಿಲ್ಲೆ ಎಚ್ ಡಿ ಕೋಟೆ ತಾಲ್ಲೂಕಿನ ಮೂರು ಜಲಾಶಯಗಳು ಬಹತೇಕ ಭರ್ತಿಯಾಗಿವೆ. ಹೀಗಾಗಿ ಮೂರು ಜಲಾಶಯಗಳಿಂದ ಮತ್ತಷ್ಟು ನೀರನ್ನು ನದಿಗೆ ಅಪಾರ ಪ್ರಮಾಣದಲ್ಲಿ ಬಿಡುತ್ತಿರುವ ಕಾರಣ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ನದಿ ಪಾತ್ರದ ಜನರು ಆತಂಕಗೊ೦ಡಿದ್ದಾರೆ. ಕಬಿನಿ ಹಾಗೂ ನುಗು ಜಲಾಶಯಗಳ ನೀರು ಈಗಾಗಲೇ ಹೊರಬಿಡಲಾಗುತ್ತಿದೆ. ತಾರಾಕ ಜಲಾಶಯ ಕೂಡ ಭರ್ತಿಯಾಗಿದೆ ನುಗು ಜಲಾಶಯದಿಂದ ೬೦೦೦ ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಕಬಿನಿ ಜಲಾಶಯದಿಂದ ಈಗಾಗಲೇ ೬೦ ಸಾವಿರ ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಇದೀಗ ತಾರಕ ಜಲಾಶಯದಿಂದಲೂ ಹೊರಬಿಡುವ ನೀರು ಕಪಿಲಾ ನದಿ ಸೇರುವುದರಿಂದ ಕಪಿಲಾ ನದಿಯ ಹರಿವಿನ ರಭಸ ಹೆಚ್ಚಾಗುತ್ತಿದ್ದು, ಪ್ರವಾಹ ಭೀತಿ ಎದುರಾಗಿದೆ.
ಕುಸಿದ ಜಲಾಶಯದ ಅಂಚು   
ಮಳೆಯ ರಭಸಕ್ಕೆ ಹೆಚ್.ಡಿ.ಕೋಟೆ ತಾಲೂಕಿನ ತಾರಕ ಜಲಾಶಯದ ಬಲದಂಡೆಯ ನಾಲೆಯ ಅಂಚುಗಳು ಕುಸಿತಗೊಂಡಿವೆ.
ಕಳಪೆ ಕಾಮಗಾರಿಯಿಂದ ಜಲಾಶಯದ ಬಲದಂಡೆ ಅಂಚು ಕುಸಿಯುತ್ತಿದ್ದು, ಸ್ಥಳೀಯರಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಕೋಟ್ಯಾಂತರ ರೂ ವೆಚ್ಚದಲ್ಲಿ ನಿರ್ಮಾಣವಾದರೂ ಕಳಪೆ ಕಾಮಗಾರಿಯಿಂದ ಕುಸಿದು ಅಪಾಯದ ಸ್ಥಿತಿಯಲ್ಲಿದೆ.
ಕಬಿನಿ ಜಲಾಶಯ ತುಂಬಿದ್ದು, ಹೆಚ್ಚಿನ ಪ್ರಮಾಣದಲ್ಲಿ ನೀರು ಹೊರಬರುತ್ತಿರುವುದರಿಂದ ದಕ್ಷಿಣ ಕಾಶಿ ಎಂದು ಹೆಸರಾಗಿರುವ ನಂಜನಗೂಡಿನಲ್ಲಿರುವ ಪರಶುರಾಮ ದೇಗುಲ ಮುಳುಗಡೆಯಾಗಿದೆ. ಇತಿಹಾಸ ಪ್ರಸಿದ್ಧ ದೇಗುಲ ಅರ್ಧದಷ್ಟು ಮುಳುಗಡೆಯಾಗಿದೆ. ನಂಜನಗೂಡಿನ ದೇಗುಲಕ್ಕೆ ಭೇಟಿ ಕೊಟ್ಟ ಬಳಿಕ ಪರಶುರಾಮ ದೇಗುಲಕ್ಕೆ ಭಕ್ತರು ಭೇಟಿ ನೀಡುತ್ತಿದ್ದರು. ಇದೀಗ ಪರಶುರಾಮ ದೇಗುಲಕ್ಕೆ ಭಕ್ತರ ಪ್ರವೇಶ ನಿಷೇಧಿಸಲಾಗಿದೆ. ಸ್ಥಳದಲ್ಲಿ ಭದ್ರತಾ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ನೀರಿನಲ್ಲಿ ಮುಳುಗಿರುವ ದೇವಾಲಯ ನೋಡಲು ನದಿ ಬಳಿ ಜನರು ಬರುತ್ತಿದ್ದಾರೆ.
ಸುತ್ತೂರು ಶ್ರೀಕ್ಷೇತ್ರದ ಸೇತುವೆ ಮುಳುಗಡೆ 
ಕಬಿನಿ ಜಲಾಶಯದಿಂದ ೬೦ ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರು ಬಿಡುತ್ತಿರುವ ಕಾರಣ ನಂಜನಗೂಡು ತಾಲೂಕಿನ ಶ್ರೀಕ್ಷೇತ್ರ ಸುತ್ತೂರಿನ ಸೇತುವೆ ನೀರಿನಲ್ಲಿ ಮುಳುಗಡೆಯಾಗಿದೆ. ಸೇತುವೆ ಮೇಲೆ ನೀರು ರಭಸದಿಂದ ಹರಿಯುತ್ತಿರುವ ಕಾರಣ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ಅಲ್ಲದೆ ಜನರು ಸೇತುವೆ ಬಳಿ ಸುಳಿಯದಂತೆ ಬ್ಯಾರಿಕೇಡ್‌ಗಳನ್ನು ಎರಡು ಬದಿಯಲ್ಲಿ ಹಾಕಿ, ಪೊಲೀಸ್ ಕಾವಲು ಹಾಕಲಾಗಿದೆ. ಸೇತುವೆ ಮುಳುಗಡೆಯಾಗಿರುವ ಕಾರಣ ಸುತ್ತೂರು ಶ್ರೀಕ್ಷೇತ್ರದ ಸಂಪರ್ಕ ಕಡಿತಗೊಂಡಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss