Tuesday, June 28, 2022

Latest Posts

ಮೈಸೂರು| ಜೂನ್ 1ರಿಂದ 100 ರೈಲುಗಳ ಸಂಚಾರ ಆರಂಭ, ಟಿಕೆಟ್ ಬುಕ್ ಮಾಡಲು ಕೌಂಟರ್‌ಗಳು ಕಾರ್ಯಾರಂಭ

ಮೈಸೂರು: ಲಾಕ್ ಡೌನ್ ಸಡಿಲಿಕೆ ಮಾಡಿರುವ ಹಿನ್ನಲೆಯಲ್ಲಿ ಜೂನ್ ೧ ರಿಂದ ನೂರು ರೈಲುಗಳ ಸಂಚಾರ ಆರಂಭವಾಗಲಿದೆ.
ಟಿಕೆಟ್‌ಗಳನ್ನು ಪಡೆದುಕೊಳ್ಳಲು ರಿಸರ್ವೇಷನ್ ಕೌಂಟರ್‌ಗಳನ್ನು ಹಂತ ಹಂತವಾಗಿ ತೆರೆಯಲು ರೈಲ್ವೆಇಲಾಖೆಯು ನಿರ್ಧರಿಸಿದೆ.
ಮೊದಲಿಗೆ, ಪ್ರಮುಖ ನಿಲ್ದಾಣಗಳಲ್ಲಿನ ಕೌಂಟರ್‌ಗಳನ್ನು ಇಂದಿನಿoದ ಅಂದರೆ ಮೇ ೨೨ ರಿಂದ ತೆರೆಯಲಾಗಿದೆ .
ಜೂನ್ ೧ರಿಂದ ಪ್ರಾರಂಭವಾಗುವ ೧೦೦ ಜೋಡಿ ರೈಲು ಸೇವೆಗಳಿಗೆ ಕಾಯ್ದಿರಿಸಿದ ಟಿಕೆಟ್ ಬುಕ್ ಮಾಡಲು ನೈರುತ್ಯ ರೈಲ್ವೆಯ ಮೈಸೂರು ವಿಭಾಗದಲ್ಲಿ ಪಿಆರ್‌ಎಸ್ ಕೌಂಟರ್‌ಗಳು ಮೈಸೂರು, ದಾವಣಗೆರೆ, ಶಿವಮೊಗ್ಗ ಟೌನ್ ಹಾಗೂ ಹಾಸನ
ನಿಲ್ದಾಣಗಳಲ್ಲಿ ಇಂದಿನಿAದ ಕಾರ್ಯನಿರ್ವಹಿಸಲಿವೆ ಎಂದು ಮೈಸೂರು ರೈಲ್ವೆ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರು ಹಾಗೂ ಜನಸಂಪರ್ಕಾಧಿಕಾರಿ ಪ್ರಿಯಾಶೆಟ್ಟಿ ತಿಳಿಸಿದ್ದಾರೆ.
ದೇಶದಲ್ಲಿ ಲಾಕ್ ಡೌನ್ ಸಂದರ್ಭದಲ್ಲಿ ರದ್ದುಪಡಿಸಲಾಗಿದ್ದ ರೈಲು ಗಾಡಿಗಳಲ್ಲಿ ಟಿಕೆಟ್ ಹೊಂದಿದ್ದ ಪ್ರಯಾಣಿಕರ ಹಣ ಮರುಪಾವತಿಯ ಸೌಲಭ್ಯವನ್ನು ಸಹ ಈ ಕೌಂಟರ್ ಗಳಲ್ಲಿ ಮೇ ೨೫ ರಿಂದ ಪಡೆಯಬಹುದು.
ಈ ಮೊದಲು ತಿಳಿಸಿದಂತೆ, ರಾಜ್ಯದೊಳಗೆ ೨ ಜೋಡಿ ಅಂತರ್ ಜಿಲ್ಲಾ ರೈಲುಗಳನ್ನು ಇಂದಿನಿAದಲೇ ಪ್ರಾರಂಭಿಸಲಾಗಿದೆ.
ಬೆಂಗಳೂರಿನಿAದ ಬೆಳಗಾವಿಗೆ (ವಾರದಲ್ಲಿ ಮೂರು ದಿನ) ಎಕ್ಸ್ ಪ್ರೆಸ್ ವಿಶೇಷ ರೈಲು, ಬೆಂಗಳೂರಿನಿAದ ಮೈಸೂರಿಗೆ (ಭಾನುವಾರ ಹೊರತು ಪಡಿಸಿ ವಾರದಲ್ಲಿ ಆರು ದಿನ) ಎಕ್ಸ್ ಪ್ರೆಸ್ ವಿಶೇಷ ರೈಲು ಸಂಚಾರ ಆರಂಭಿಸಲಾಗಿದೆ. ಸಾಮಾಜಿಕ ಅಂತರ ಮತ್ತು ಇತರೆ ನಿಗದಿತ ಕೋವಿಡ್-೧೯ ಕ್ರಮವಿದಾನಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು. ಬುಕಿಂಗ್ ಕಛೇರಿಗಳು ಸೇರಿದಂತೆ ರೈಲ್ವೆಯ ಆವರಣದಲ್ಲಿ ಸ್ವಚ್ಛತೆ/ನೈರ್ಮೂಲತೆಯನ್ನು ಕಾಪಾಡಿಕೊಳ್ಳಲು ರೈಲ್ವೆಗೆ ಸಹಕಾರ ನೀಡುವಂತೆ ಕೇಳಿಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss