Tuesday, August 9, 2022

Latest Posts

ಮೈಸೂರು | ಜ್ಯುಬಿಲಿಯೆಂಟ್ ಕಾರ್ಖಾನೆ ಪುನಾರಂಭ: ಕೊರೋನಾ ವೈರಸ್ ಸೋಂಕು ನಿವಾರಣೆಯ ಔಷಧಿ ಉತ್ಪಾಧನೆ ಪ್ರಾರಂಭಿಸಿದ ಕಾರ್ಖಾನೆ

ಮೈಸೂರು : ಕೊರೋನಾ ಸೋಂಕಿನ ನಂಜಿನಗೂಡಾಗಿದ್ದ ಮೈಸೂರು ಜಿಲ್ಲೆಯ ನಂಜನಗೂಡಿನ ಜ್ಯುಬಿಲಿಯಂಟ್ ಔಷಧಿ ಕಾರ್ಖಾನೆ ಸೋಮವಾರದಿಂದ ಮತ್ತೆ ಕಾರ್ಯಾರಂಭ ಶುರು ಮಾಡಿದೆ. ಕಳೆದ ೬೦ ದಿನಗಳ ಹಿಂದೆ ಈ ಔಷಧಿ ಕಾರ್ಖಾನೆಯಲ್ಲಿ ನೌಕರನೊಬ್ಬನಿಗೆ ಕಾಣಿಸಿಕೊಂಡ ಕೊರೋನಾ ಸೋಂಕು, ೭೪ಕ್ಕೂ ಹೆಚ್ಚು ಮಂದಿ ಕಾರ್ಮಿಕರಿಗೆ ಹರಡಿತ್ತು. ಅಲ್ಲದೆ ಇವರ ಪ್ರಾಥಮಿಕ, ಸೆಕೆಂಡರಿ ಸಂಪರ್ಕಕ್ಕೆ ಬಂದವರಿಗೂ ತಗುಲಿದ ಕಾರಣ ಕಾರ್ಖಾನೆಯನ್ನು ಬಂದ್ ಮಾಡಲಾಗಿತ್ತು. ಇಡೀ ಕಾರ್ಖಾನೆಯ ಕಾರ್ಮಿಕರನ್ನು ಕ್ವಾರಂಟೈನ್‌ನಲ್ಲಿಡಲಾಗಿತ್ತು. ವೈರಸ್ ಸೋಂಕಿತ ಕಾರ್ಮಿಕರೆಲ್ಲಾ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಆದರೆ ಸೋಂಕಿನ ಮೂಲ ಮಾತ್ರ ಪೊಲೀಸರು ನಡೆಸಿದ ತನಿಖೆಯಿಂದಲೂ ಪತ್ತೆಯಾಗಲಿಲ್ಲ. ಅಲ್ಲದೆ ತನಿಖೆಗೆ ನೇಮಕಗೊಂಡಿದ್ದ ಹಿರಿಯ ಐಎಎಸ್ ಅಧಿಕಾರಿ ಹರ್ಷಗುಪ್ತ ಸರ್ಕಾರಕ್ಕೆ ತಮ್ಮ ವರದಿಯನ್ನು ನೀಡಿದ್ದಾರೆ. ಅದು ಕೂಡ ಬಹಿರಂಗವಾಗಿಲ್ಲ, ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವರು, ನಂಜನಗೂಡಿನ ಶಾಸಕರು, ಈ ಕಾರ್ಖಾನೆಯನ್ನು ಪ್ರಾರಂಭಿಸಲು ಬಿಡಲ್ಲ ಎಂದು ಗುಟುರು ಹಾಕುತ್ತಿದ್ದರು. ಆದರೆ ಕೇಂದ್ರ ಸರ್ಕಾರ ಕಾರ್ಖಾನೆಗಳನ್ನು ತೆರೆಯಲು ಅನುಮತಿ ನೀಡಿರುವುದರಿಂದ ಹಾಗೂ ಕೊರೋನಾ ಸೋಂಕಿನ ನಿಯಂತ್ರಣಕ್ಕೆ ಬೇಕಾದ ಔಷಧಿಯನ್ನು ಜುಬಿಲಿಯಂಟ್ ಔಷಧ ಕಾರ್ಖಾನೆ ಉತ್ಪಾಧಿಸುತ್ತಿರುವ ಹಿನ್ನಲೆಯಲ್ಲಿ ಸರ್ಕಾರ ಈ ಕಾರ್ಖಾನೆಯ ಆರಂಭಕ್ಕೆ ಷರತ್ತು ಬದ್ಧ ಅನುಮತಿಯನ್ನು ನೀಡಿದೆ. ಹಾಗಾಗಿ ರಾಜ್ಯ ಸರ್ಕಾರದ ಸೂಚನೆ ಮೇರೆಗೆ ಈಗ ಮತ್ತೆ ಕಾರ್ಯಾರಂಭ ಮಾಡಿದೆ. ೧೦ ಗ್ರಾಮಗಳ ದತ್ತು, ೫೦ ಸಾವಿರ ಕಿಟ್, ಭವಿಷ್ಯದಲ್ಲಿ ದೋಷ ಎಸಗಲ್ಲ ಎಂಬ ಷರತ್ತುಗಳಿಗೆ ಕಂಪನಿ ಒಪ್ಪಿಗೆ ಸೂಚಿಸಿದೆ.
ಕರ್ತವ್ಯಕ್ಕೆ ಹಾಜರಾದ ಕಾರ್ಮಿಕರು:
ಬರೋಬ್ಬರಿ ೬೦ ದಿನಗಳ ನಂತರ ಕಾರ್ಖಾನೆ ಪುನರ್ ಆರಂಭವಾದ ಕಾರಣ ಕಾರ್ಖಾನೆಯ ಶೇಕಡ ೨೫ರಷ್ಡು ನೌಕರರು ಕರ್ತವ್ಯಕ್ಕೆ ಹಾಜರಾದರು. ಗೇಟ್ ಮುಂಭಾಗದಲ್ಲೇ ಎಲ್ಲಾ ನೌಕರರ ಆರೋಗ್ಯ ತಪಾಸಣೆ ನಡೆಸಲಾಯಿತು. ಥರ್ಮಲ್ ಸ್ಕಾ÷್ಯನಿಂಗ್, ಸ್ಯಾನಿಟೈಸರ್ ಸಿಂಪಡಣೆ ಮಾಡಿ. ಪಿಪಿಇ ಕಿಟ್ ಬಳಸಿ ನೌಕರರ ತಪಾಣೆ ಮಾಡಲಾಯಿತು. ಕಾರ್ಖಾನೆ ಒಳ ಪ್ರವೇಶಕ್ಕೆ ಎಲ್ಲರ ಕೋವಿಡ್ ಟೆಸ್ಟ್ ವರದಿ ಕಡ್ಡಾಯ ಮಾಡಲಾಗಿತ್ತು.
ಹತ್ತಿರ ಸೇರುತ್ತಿರಲಿಲ್ಲ, ಕಂಡರೆ ಓಡುತ್ತಿದ್ದರು
ಕರ್ತವ್ಯಕ್ಕೆ ಹಾಜರಾದ ಕಾರ್ಖಾನೆಯ ಕಾರ್ಮಿಕನೊಬ್ಬ ಕ್ವಾರಂಟೈನ್ ಮುಗಿಸಿ ಬಂದ ಬಳಿಕ ತನಗಾದ ನೋವನ್ನು ಹೇಳಿದ ವಿವಾಹ ವಾರ್ಷಿಕೋತ್ಸವದ ಸವಿ ಘಳಿಗೆಯನ್ನು ದುಖಃವಾಗಿಸಿದ್ದನ್ನು ವಿವರಿಸಿದ. ನಂಜನಗೂಡು ತಾಲ್ಲೂಕಿನ ತೊರೆಮಾವು ಗ್ರಾಮದ ನೌಕರ. ಮೇ ೨೩ ನಡೆದ ವಿವಾಹ ವಾರ್ಷಿಕೋತ್ಸವ ಸಮಾರಂಭಕ್ಕೆ ಅಡುಗೆ ಮಾಡಿಸಿ, ಊಟಕ್ಕೆ ಕರೆದರೂ ಯಾರೂ ಬರಲಿಲ್ಲ. ನನ್ನನ್ನ ನೋಡಿದ ತಕ್ಷಣ ಓಡುತ್ತಿದ್ದರು ಜನ. ನಮ್ಮನ್ನ ಏನೋ ಒಂದು ರೀತಿ ನೋಡುತ್ತಿದ್ದರು. ೬೦ ದಿನ ನರಕ ಯಾತನೆ ಅನುಭವಿಸಿದಂತಾಯಿತು. ೩೦ ದಿನ ನಮ್ಮನ್ನ ಮನೆಯಿಂದ ಹೊರಗೇ ಬಿಡಲಿಲ್ಲ. ಕಷ್ಟದಲ್ಲಿ ನೆರವಿಗೆ ಬರಬೇಕಾದ ಜನ ಈಗೇಕೆ ಮಾಡಿದರು ಎಂಬುದೇ ದುಖಃವಾಗಿದೆ ಎಂದು ನೋವಿನಿಂದ ನುಡಿದ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss