ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, May 6, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಮೈಸೂರು| ಜ.16ರಿಂದ “ನಮ್ಮ ನಡಿಗೆ–ತ್ಯಾಜ್ಯಮುಕ್ತ ಕಡೆಗೆ” ವಿಶೇಷ ಜಾಗೃತಿ ಕಾರ್ಯಕ್ರಮ

ಹೊಸದಿಗಂತ ವರದಿ,ಮೈಸೂರು:

ಜಿಲ್ಲಾ ಪಂಚಾಯಿತಿ ವತಿಯಿಂದಗ್ರಾಮೀಣಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮತ್ತು ವಿವಿಧ ಸಂಘ-ಸoಸ್ಥೆಗಳ ಸಹಭಾಗಿತ್ವದಲ್ಲಿ ಶುಚಿತ್ವದ ಕುರಿತು ಸಾರ್ವಜನಿಕಜಾಗೃತಿ ಮೂಡಿಸುವ “ನಮ್ಮಗ್ರಾಮ ನಮ್ಮಜವಬ್ದಾರಿ” ಎಂಬ ಉದ್ದೇಶದಿಂದ “ನಮ್ಮ ನಡಿಗೆ–ತ್ಯಾಜ್ಯಮುಕ್ತ ಕಡೆಗೆ” ಎಂಬ ವಿಶೇಷ ಜಾಗೃತಿ ಆoದೋಲನವನ್ನು ಜನವರಿ 16 ರಿಂದ ಫೆಬ್ರವರಿ 15ರವರೆಗೆ ಹಮ್ಮಿಕೊಳ್ಳಲಾಗಿದೆ.

ಶುಚಿತ್ವದ ಬಗ್ಗೆ ಜಾಗೃತಿ ಮೂಡಿಸಲುಎಲ್ಲಾ ಗ್ರಾಮಗಳ ಬೀದಿ, ಚರಂಡಿ, ಶಾಲೆ, ಅಂಗನವಾಡಿ ಆವರಣಗಳಲ್ಲಿ ಸ್ವಚ್ಛತಾ ಶ್ರಮದಾನ, ಮನೆ
ಹಂತದಲ್ಲೇ ಹಸಿ-ಒಣ ಕಸ ವಿಂಗಡಣೆ, ತಿಪ್ಪೆಗುಂಡಿ ನಿರ್ವಹಣೆ, ಹಸಿ ತ್ಯಾಜ್ಯವನ್ನುಗೊಬ್ಬರವನ್ನಾಗಿಸುವ ವಿಧಾನಗಳ ಬಗ್ಗೆ ಮಾಹಿತಿ ನೀಡುವುದು, ಕ್ರಿಯಾತ್ಮಕ ಪೋಸ್ಟರ್‌ಅಥವಾ ವೀಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದು, ಮನೆಮನೆ ಭೇಟಿ ಹಾಗೂ ಸ್ಥಳೀಯ ಮಾಧ್ಯಮಗಳ ಮೂಲಕ ಪ್ರಚಾರ ಮಾಡುವುದೂ ಸೇರಿದಂತೆ ಇನ್ನಿತರ ಜಾಗೃತಿ ಮೂಡಿಸುವ ಕಾರ್ಯಕ್ರಮಗಳಾದ ಸ್ವಚ್ಛತೆಕುರಿತುಡಂಗೂರ ಸಾರುವುದು, ಜಾಥಾ ಶ್ರಮದಾನ, ಬಯಲು ಬಹಿರ್ದೆಶೆ ಕೈಗೊಳ್ಳುವಂತಹ ಕುಟುಂಬಗಳನ್ನು ಗುರುತಿಸಿ ಶೌಚಾಲಯ ಬಳಸುವಂತೆ ಪ್ರೇರೇಪಿಸಲಾಗುವುದು.

ಈ ವಿಶೇಷ ಆಂದೋಲನದ ಕಡೇ ವಾರದಲ್ಲಿ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನಿಡಿ, ಉತ್ಪತ್ತಿಯಾಗುವ ತ್ಯಾಜ್ಯವನ್ನು ಮೂಲದಲ್ಲಿಯೇ ಹಸಿ ಮತ್ತು ಒಣ ತ್ಯಾಜ್ಯವನ್ನಾಗಿ ವಿಂಗಡಿಸುವುದರಅಥವಾ ನಿಗಾವಹಿಸಿ ನಿಯಾಮಾನುಸಾರ ಕ್ರಮ ಕೈಗೊಳ್ಳುತ್ತಿರುವರೇ ಎಂಬುದರ ಬಗ್ಗೆ ಗ್ರಾಮದಜನರ ನಡತೆಯಲ್ಲಿ ಉಂಟಾಗುವ ಬದಲಾವಣೆಯ ಬಗ್ಗೆ ಅಂಕಿ-ಅoಶಗಳನ್ನು ಕ್ರೂಢೀಕರಿಸಿ ಜಿಲ್ಲಾ ಪಂಚಾಯಿತಿಗೆ ವರದಿ ಸಲ್ಲಿಸಲಾಗುವುದಲ್ಲದೆ ವರದಿಯನ್ನಾಧರಿಸಿ ಉತ್ತಮ ಅಭ್ಯಾಸವನ್ನು ರೂಢಿಸಿಕೊಳ್ಳಲು ತಿಳಿಸಲಾಗುವುದು ಎಂದು ಜಿಲ್ಲಾ ಪಂಚಾಯಿತಿಯ ಮುಖ್ಯಕಾರ್ಯನಿರ್ವಾಹಕಾಧಿಕಾರಿ ತಿಳಿಸಿದ್ದಾರೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss