Tuesday, August 16, 2022

Latest Posts

ಮೈಸೂರು| ಜ.16 ರಂದು 234 ಕೇಂದ್ರಗಳಲ್ಲಿ ಕೊರೋನಾ ಲಸಿಕೆ

ಹೊಸದಿಗಂತ ವರದಿ,ಮೈಸೂರು:

ಮೈಸೂರು ಜಿಲ್ಲೆಯಲ್ಲಿ ಮಹಾಮಾರಿ ಕೊರೋನಾಗೆ ಲಸಿಕೆಯನ್ನು ಒಟ್ಟು 234 ಕೇಂದ್ರಗಳಲ್ಲಿ ಜ.16 ರಂದು ನೀಡಲಾಗುತ್ತದೆ.

ಇದರಲ್ಲಿ 162 ಸರ್ಕಾರಿ ಲಸಿಕಾ ಕೇಂದ್ರಗಳು, ಖಾಸಗಿ 72 (26 ಸಂಸ್ಥೆಗಳು) ಲಸಿಕಾ ಕೇಂದ್ರಗಳಲ್ಲಿ ಲಸಿಕೆ ನೀಡಲಾಗುತ್ತದೆ.
ಮೈಸೂರು ಜಿಲ್ಲೆಯಲ್ಲಿ ಒಟ್ಟು 70,000 ಸಿರಿಂಜ್ ಶೇಖರಣೆ ಮಾಡಲಾಗುತ್ತಿದ್ದು, ಮೊದಲ ಹಂತದಲ್ಲಿ 33,009 ಮಂದಿ ಲಸಿಕೆ ಪಡೆಯುವವರು. ಈ ಪೈಕಿ ಸರ್ಕಾರಿ ಆರೋಗ್ಯ ಕಾರ್ಯಕರ್ತರು 14,976 ಮಂದಿಯಾಗಿದ್ದರೆ.

ಖಾಸಗಿ ಆರೋಗ್ಯ ಕಾರ್ಯಕರ್ತರು 18,033 ಮಂದಿಯಾಗಿದ್ದಾರೆ. ಮೊದಲ ಹಂತದಲ್ಲಿ ಕೇವಲ ಆರೋಗ್ಯ ಕಾರ್ಯಕರ್ತರಿಗೆ ಮಾತ್ರ ಲಸಿಕೆ ನೀಡಲಾಗುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss