ಮೈಸೂರು: ಟೆಂಪೋ ಟ್ರಾವೆಲ್ಲರ್ ಮಾಲೀಕನೊಬ್ಬನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಸಾಲಿಗ್ರಾಮದ ಚುಂಚನಕಟ್ಟೆ ರಸ್ತೆಯಲ್ಲಿ ನಡೆದಿದೆ.
ಸಾಲಿಗ್ರಾಮದ ನಿವಾಸಿ ಆನಂದ್ (೩೫) ಹತ್ಯೆಗೀಡಾದವ. ಈತ ಟೆಂಪೋಟ್ರಾವಲ್ನ ಮಾಲೀಕನಾಗಿದ್ದು, ಸೋಮವಾರ ರಾತ್ರಿ ಚುಂಚನಕಟ್ಟೆ ರಸ್ತೆಯಲ್ಲಿ ಭೀಕರವಾಗಿ ದುಷ್ಕರ್ಮಿಗಳು ಹತ್ಯೆ ಮಾಡಿದ್ದು, ಇದನ್ನು ಮರೆಮಾಚಲು ಬೈಕ್ ಅಪಘಾತವಾಗಿರುವಂತೆ ಬಿಂಬಿಸಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸಾಲಿಗ್ರಾಮ ಠಾಣೆಯ ಪೊಲೀಸರು ಸ್ಥಳಕ್ಕೆ ಶ್ವಾನದಳದೊಂದಿಗೆ ಭೇಟಿ ನೀಡಿ, ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.