Friday, September 25, 2020
Friday, September 25, 2020

Latest Posts

ಎಸ್‌ಪಿಬಿ ಆರೋಗ್ಯ ಸ್ಥಿತಿ ಗಂಭೀರ: ಗಾಯನ ಲೋಕದ ಗಂಧರ್ವನ ಚೇತರಿಕೆಗಾಗಿ ಅಭಿಮಾನಿಗಳಿಂದ ದೇವರಿಗೆ ಮೊರೆ

ಚೆನ್ನೈ: ಗಾಯನ ಲೋಕದ ಮಹಾನ್ ಪ್ರತಿಭೆ ಎಸ್‌ಪಿ ಬಾಲಸುಬ್ರಹ್ಮಣ್ಯಂ ಆರೋಗ್ಯ ಸ್ಥಿತಿ ಗಂಭೀರವಾಗಿಯೇ ಮುಂದುವರಿದಿದ್ದು, ಅವರ ಚೇತರಿಕೆಗಾಗಿ ದೇಶದ ಎಲ್ಲೆಡೆ ಕೋಟ್ಯಾಂತರ ಅಭಿಮಾನಿಗಳು ದೇವರ ಮೊರೆ ಹೋಗಿದ್ದಾರೆ. ನುರಿತ ವೈದ್ಯರುಗಳ ತಂಡ ಎಸ್‌ಪಿಬಿ ಆರೋಗ್ಯದ...

ಸಿಬಿಎಸ್‌ಇ 12ನೇ ತರಗತಿ ಪೂರಕ ಪರೀಕ್ಷೆ ಫಲಿತಾಂಶ ಅಕ್ಟೋಬರ್ 10ರ ಒಳಗೆ ಪ್ರಕಟ

ನವದೆಹಲಿ: ಸಿಬಿಎಸ್‌ಇ ೧೨ನೇ ತರಗತಿ ಪೂರಕ ಪರೀಕ್ಷೆ ಫಲಿತಾಂಶವನ್ನು ಅಕ್ಟೋಬರ್ ೧೦ರ ಒಳಗೆ ಪ್ರಕಟಿಸಲಾಗುವುದು ಎಂದು ಸಿಬಿಎಸ್‌ಇ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದೆ. ಸಿಬಿಎಸ್‌ಇ ಫಲಿತಾಂಶ ಅಧಿಕೃತ ಸಿಬಿಎಸ್‌ಇ ವೆಬ್‌ಸೈಟ್‌ಗಳಲ್ಲಿ ಲಭ್ಯವಾಗಲಿದೆ. ಪೂರಕ ಪರೀಕ್ಷೆ ಹಾಗೂ...

ಡ್ರಗ್‌‌ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ: ಸಂಜನಾ, ರಾಗಿಣಿ ‘ಇಡಿ’ ವಿಚಾರಣೆಗೆ ಕೋರ್ಟ್ ಅಸ್ತು

ಬೆಂಗಳೂರು: ಸ್ಯಾಂಡಲ್‌‌ವುಡ್‌ ಡ್ರಗ್‌‌‌ ಪ್ರಕರಣ ದಿನದಿಂದ ದಿನಕ್ಕೆ ಹೊಸ ಆಯಾಮ ಪಡೆದುಕೊಳ್ಳುತ್ತಿದ್ದು, ನಟಿ ಸಂಜನಾ ಗಲ್ರಾನಿ ಹಾಗೂ ರಾಗಿಣಿ ದ್ವಿವೇದಿ ಸೇರಿದಂತೆ ಐವರು ಆರೋಪಿಗಳನ್ನು ವಿಚಾರಣೆ ನಡೆಸಲು ಜಾರಿ ನಿರ್ದೇಶನಾಲಯಕ್ಕೆ ಎನ್‌‌ಡಿಪಿಎಸ್‌‌‌ ವಿಶೇಷ...

ಮೈಸೂರು| ತಗ್ಗಿದ ಮಳೆ, ಕಡಿಮೆಯಾದ ಕಬಿನಿ ಜಲಾಶಯದ ಒಳ, ಹೊರ ಹರಿವು

sharing is caring...!

ಮೈಸೂರು: ಕೇರಳದ ವೈನಾಡು ಹಾಗೂ ಪಶ್ಚಿಮಘಟ್ಟ ಅರಣ್ಯ ಪ್ರದೇಶದಲ್ಲಿ ಮಳೆಯ ಅಬ್ಬರ ತಗ್ಗಿದೆ. ಇದರಿಂದಾಗಿ ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯಕ್ಕೆ ಹರಿದು ಬರುತ್ತಿದ್ದ ನೀರಿನ ಪ್ರಮಾಣವೂ ತಗ್ಗಿದೆ. ಹೀಗಾಗಿ ಜಲಾಶಯದಿಂದ ನದಿಗೆ ಬಿಡುತ್ತಿದ್ದ ನೀರಿನ ಪ್ರಮಾಣವನ್ನು ಇದೀಗ ಭಾರೀ ಪ್ರಮಾಣದಲ್ಲಿ ಕಡಿಮೆ ಮಾಡಲಾಗಿದೆ.
ಕಳೆದ ಮೂರು ದಿನಗಳಿಂದ ಜಲಾಶಯಕ್ಕೆ ಬರುತ್ತಿದ್ದ ನೀರಿನ ಭಾರೀ ಪ್ರಮಾಣದಿಂದಾಗಿ ನದಿಗೆ ೫೦ ಸಾವಿರ ಕ್ಯೂಸೆಕ್ ನೀರು ಬಿಡುತ್ತಿದ್ದನ್ನು ಆ ನಂತರ ೬೦ ಸಾವಿರಕ್ಕೆ ಹೆಚ್ಚಿಸಲಾಗಿತ್ತು. ಶನಿವಾರ ಇದು ೭೦ ಸಾವಿರ ಕ್ಯೂಸೆಕ್ಕೇರಿತ್ತು. ಇದರಿಂದಾಗಿ ಕಪಿಲಾ ನದಿ ಉಕ್ಕಿ ಹರುತ್ತಿದ್ದ ಕಾರಣ ನಂಜನಗೂಡಿನಲ್ಲಿರುವ ಮೈಸೂರು-ಊಟಿ ರಾಷ್ಟ್ರೀಯ ಹೆದ್ದಾರಿಗೆ ನೀರು ನುಗ್ಗಿ ಹರಿಯಲಾರಂಭಿಸಿತ್ತು. ಜಲಾಶಯದಿಂದ ಬಿಡುತ್ತಿದ್ದ ನೀರಿನ ಪ್ರಮಾಣವನ್ನು ಯಾವುದೇ ಕ್ಷಣದಲ್ಲೂ ಮತ್ತಷ್ಟು ಹೆಚ್ಚಿಸುವ ಸಾಧ್ಯತೆಯಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ಹೆದ್ದಾರಿಯನ್ನು ಬಂದ್ ಮಾಡಿ, ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು. ಅಲ್ಲದೆ ಬದಲಿ ಮಾರ್ಗವನ್ನು ಸೂಚಿಸಲಾಗಿದೆ. ಭಾನುವಾರ ಕೂಡ ನಿರ್ಬಂಧವನ್ನು ಮುಂದುವರಿಸಲಾಗಿದೆ.
ಸದ್ಯ ಕಬಿನಿ ಜಲಾಶಯಕ್ಕೆ ೪೧,೩೧೧ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ನದಿಗೆ ಬಿಡುತ್ತಿದ್ದ ನೀರಿನ ಪ್ರಮಾಣವನ್ನು ೧೬ ಸಾವಿರ ಕ್ಯೂಸೆಕ್‌ಗೆ ಇಳಿಸಲಾಗಿದೆ. ನಾಲೆಗಳಿಗೆ ಬಿಡಲಾಗುತ್ತಿದ್ದ ನೀರಿನ ಪ್ರಮಾಣವನ್ನೂ ತಗ್ಗಿಸಲಾಗಿದ್ದು, ಕೇವಲ ೬೦೦ ಕ್ಯೂಸೆಕ್ ನೀರನ್ನು ಮಾತ್ರ ಹರಿಸಲಾಗುತ್ತಿದೆ. ಈ ಮುಂಚೆ ೧ ಸಾವಿರ ಕ್ಯೂಸೆಕ್ ನೀರನ್ನು ಬಿಡಲಾಗುತ್ತಿತ್ತು. ಇನ್ನು ನುಗು, ತಾರಕ ಜಲಾಶಯಗಳಿಗೆ ಹರಿದು ಬರುತ್ತಿದ್ದ ನೀರಿನ ಪ್ರಮಾಣ ಕೂಡ ಇಳಿಕೆಯಾಗಿರುವುದರಿಂದ ನದಿಗೆ ಬಿಡಲಾಗುತ್ತಿದ್ದ ನೀರಿನ ಪ್ರಮಾಣವನ್ನು ಇಳಿಸಲಾಗಿದೆ.
ಕೊಂಚ ತಗ್ಗಿದ ಪ್ರವಾಹ : ಇನ್ನು ಕಬಿನಿ ಜಲಾಶಯದಿಂದ ನದಿಗೆ ಬಿಡಲಾಗುತ್ತಿದ್ದ ನೀರಿನ ಪ್ರಮಾಣವನ್ನು ಇಳಿಸಿರುವುದರಿಂದ ಕಪಿಲಾ ನದಿಯ ಅಬ್ಬರವೂ ಇಳಿದಿದೆ. ಇದರಿಂದಾಗಿ ಪ್ರವಾಹ ಪರಿಸ್ಥಿತಿ ಕೊಂಚ ತಗ್ಗಿದೆ. ಜಲದಿಗ್ಬಂಧನದಿAದ ಅಪಾಯದ ಪರಿಸ್ಥಿತಿಯನ್ನು ಎದುರಿಸುತ್ತಿದ್ದ ದಕ್ಷಿಣ ಕಾಶಿ ನಂಜನಗೂಡಿನ ಜನರು ಪ್ರವಾಹ ಪರಿಸ್ಥಿತಿ ತಗ್ಗಿರುವುದರಿಂದ ಕೊಂಚ ನೆಮ್ಮದಿಯ ನಿಟ್ಟಿಸಿರು ಬಿಟ್ಟಿದ್ದಾರೆ.
ನೂರಕ್ಕೂ ಹೆಚ್ಚು ಮನೆಗಳು ಜಲಾವೃತ :
ನಂಜನಗೂಡಿನ ತೋಪಿನ ಬೀದಿ, ಹಳ್ಳದಕೇರಿ, ಹೊಸ ಕುರುಬರ ಬೀದಿಗಳು ಜಲಾವೃತಗೊಂಡಿವೆ. ನೂರಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿದ್ದು, ೧೪೦ಕ್ಕೂ ಹೆಚ್ಚು ಜನರನ್ನು ಕಾಳಜಿ ಕೇಂದ್ರಕ್ಕೆ ಈಗಾಗಲೇ ಸ್ಥಳಾಂತರ ಮಾಡಲಾಗಿದೆ. ಪ್ರವಾಹ ಪರಿಸ್ಥಿತಿ ತಗ್ಗಿದ್ದರೂ, ಜಲಾವೃತ ಮಾತ್ರ ಇಳಿದಿಲ್ಲ, ಹೀಗಾಗಿ ಮನೆಗಳ ನಿವಾಸಿಗಳಿಗೆ ಸಂಕಷ್ಟ ಎದುರಾಗಿದೆ. ಕಾಳಜಿ ಕೇಂದ್ರದಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಕಬಿನಿ ಜಲಾಶಯದಿಂದ ಬಿಡುತ್ತಿದ್ದ ನೀರನ್ನು ಇಳಿಸಿದ್ದರೂ, ಕಪಿಲೆಯ ಆರ್ಭಟ ಕಡಿಮೆಯಾಗಿದ್ದರೂ, ಮಳೆ ಆರ್ಭಟ ಮುಂದುವರಿದಿರುವ ಕಾರಣ, ಮತ್ತೆ ಕಬಿನಿ ಜಲಾಶಯಕ್ಕೆ ಯಾವುದೇ ಕ್ಷಣದಲ್ಲಾದರೂ ಭಾರೀ ಪ್ರಮಾಣದಲ್ಲಿ ನೀರು ಹರಿದು ಬಂದು, ಅದನ್ನು ನದಿಗೆ ಹಾಗೆಯೇ ಬಿಡುವ ಸಾಧ್ಯತೆಯಿರುವ ಕಾರಣ, ಮಳೆ ನಿಲ್ಲುವ ತನಕ ನಿವಾಸಿಗಳಿಗೆ ಈಗ ಕಾಳಜಿ ಕೇಂದ್ರವೇ ಆಶ್ರಯ ತಾಣವಾಗಿದೆ.
ಮತ್ತಷ್ಟು ಮನೆಗಳು ಕುಸಿದು ಬೀಳುವ ಆತಂಕ:
ಕಳೆದ ಮೂರು ದಿನಗಳಿಂದಲೂ ನೂರಕ್ಕೂ ಹೆಚ್ಚು ಮನೆಗಳು ಜಲಾವೃತದಲ್ಲಿಯೇ ಇವೆ. ಈಗಾಗಲೇ ಸುರಿಯುತ್ತಿರುವ ಮಳೆಯಿಂದಾಗಿ ಶಿಥಲಗೊಂಡಿರುವ ಮನೆಗಳು, ಜಲಾವೃತದಿಂದ ಮತ್ತಷ್ಟು ವಸ್ತಿ ಹಿಡಿದು, ಗೋಡೆಗಳು ಕುಸಿದು ಬೀಳುವ ಸಾಧ್ಯತೆಗಳಿವೆ. ಜಲಾವೃತ ಸಂಪೂರ್ಣವಾಗಿ ತೆರವಾದರೂ, ಇಡೀ ಮನೆಯೇ ವಸ್ತಿ ಹಿಡಿದಿರುವ ಕಾರಣ, ಯಾವುದೇ ವೇಳೆಯಲ್ಲಾದರೂ ಗೋಡೆಗಳು ಕುಸಿದು ಬೀಳಬಹುದು, ಹೀಗಾಗಿ ಮನೆಗಳಿಗೆ ಮರಳುವುದಕ್ಕೆ ನಿವಾಸಿಗಳು ಹೆದರುವಂತಾಗಿದೆ.

Latest Posts

ಎಸ್‌ಪಿಬಿ ಆರೋಗ್ಯ ಸ್ಥಿತಿ ಗಂಭೀರ: ಗಾಯನ ಲೋಕದ ಗಂಧರ್ವನ ಚೇತರಿಕೆಗಾಗಿ ಅಭಿಮಾನಿಗಳಿಂದ ದೇವರಿಗೆ ಮೊರೆ

ಚೆನ್ನೈ: ಗಾಯನ ಲೋಕದ ಮಹಾನ್ ಪ್ರತಿಭೆ ಎಸ್‌ಪಿ ಬಾಲಸುಬ್ರಹ್ಮಣ್ಯಂ ಆರೋಗ್ಯ ಸ್ಥಿತಿ ಗಂಭೀರವಾಗಿಯೇ ಮುಂದುವರಿದಿದ್ದು, ಅವರ ಚೇತರಿಕೆಗಾಗಿ ದೇಶದ ಎಲ್ಲೆಡೆ ಕೋಟ್ಯಾಂತರ ಅಭಿಮಾನಿಗಳು ದೇವರ ಮೊರೆ ಹೋಗಿದ್ದಾರೆ. ನುರಿತ ವೈದ್ಯರುಗಳ ತಂಡ ಎಸ್‌ಪಿಬಿ ಆರೋಗ್ಯದ...

ಸಿಬಿಎಸ್‌ಇ 12ನೇ ತರಗತಿ ಪೂರಕ ಪರೀಕ್ಷೆ ಫಲಿತಾಂಶ ಅಕ್ಟೋಬರ್ 10ರ ಒಳಗೆ ಪ್ರಕಟ

ನವದೆಹಲಿ: ಸಿಬಿಎಸ್‌ಇ ೧೨ನೇ ತರಗತಿ ಪೂರಕ ಪರೀಕ್ಷೆ ಫಲಿತಾಂಶವನ್ನು ಅಕ್ಟೋಬರ್ ೧೦ರ ಒಳಗೆ ಪ್ರಕಟಿಸಲಾಗುವುದು ಎಂದು ಸಿಬಿಎಸ್‌ಇ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದೆ. ಸಿಬಿಎಸ್‌ಇ ಫಲಿತಾಂಶ ಅಧಿಕೃತ ಸಿಬಿಎಸ್‌ಇ ವೆಬ್‌ಸೈಟ್‌ಗಳಲ್ಲಿ ಲಭ್ಯವಾಗಲಿದೆ. ಪೂರಕ ಪರೀಕ್ಷೆ ಹಾಗೂ...

ಡ್ರಗ್‌‌ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ: ಸಂಜನಾ, ರಾಗಿಣಿ ‘ಇಡಿ’ ವಿಚಾರಣೆಗೆ ಕೋರ್ಟ್ ಅಸ್ತು

ಬೆಂಗಳೂರು: ಸ್ಯಾಂಡಲ್‌‌ವುಡ್‌ ಡ್ರಗ್‌‌‌ ಪ್ರಕರಣ ದಿನದಿಂದ ದಿನಕ್ಕೆ ಹೊಸ ಆಯಾಮ ಪಡೆದುಕೊಳ್ಳುತ್ತಿದ್ದು, ನಟಿ ಸಂಜನಾ ಗಲ್ರಾನಿ ಹಾಗೂ ರಾಗಿಣಿ ದ್ವಿವೇದಿ ಸೇರಿದಂತೆ ಐವರು ಆರೋಪಿಗಳನ್ನು ವಿಚಾರಣೆ ನಡೆಸಲು ಜಾರಿ ನಿರ್ದೇಶನಾಲಯಕ್ಕೆ ಎನ್‌‌ಡಿಪಿಎಸ್‌‌‌ ವಿಶೇಷ...

ಮಂಗಳೂರಿನ ಪಾಂಡೇಶ್ವರದ ನಾರ್ಕೊಟಿಕ್‌‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ನಿರೂಪಕಿ ಅನುಶ್ರೀ ವಿಚಾರಣೆ

ಮಂಗಳೂರು: ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರೂಪಕಿ, ನಟಿ ಅನುಶ್ರೀ ವಿಚಾರಣೆ ಮಂಗಳೂರಿನ ಪಾಂಡೇಶ್ವರದ ನಾರ್ಕೊಟಿಕ್‌‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ನಡೆಯಲಿದೆ. ಮಂಗಳೂರು ಸಿಸಿಬಿ ಪೊಲೀಸರು ನೋಟಿಸ್‌ ಜಾರಿ ಮಾಡಿರುವ ಹಿನ್ನೆಲೆ ಅನುಶ್ರೀ ಪೊಲೀಸ್ ವಿಚಾರಣೆ...

Don't Miss

ಎಸ್‌ಪಿಬಿ ಆರೋಗ್ಯ ಸ್ಥಿತಿ ಗಂಭೀರ: ಗಾಯನ ಲೋಕದ ಗಂಧರ್ವನ ಚೇತರಿಕೆಗಾಗಿ ಅಭಿಮಾನಿಗಳಿಂದ ದೇವರಿಗೆ ಮೊರೆ

ಚೆನ್ನೈ: ಗಾಯನ ಲೋಕದ ಮಹಾನ್ ಪ್ರತಿಭೆ ಎಸ್‌ಪಿ ಬಾಲಸುಬ್ರಹ್ಮಣ್ಯಂ ಆರೋಗ್ಯ ಸ್ಥಿತಿ ಗಂಭೀರವಾಗಿಯೇ ಮುಂದುವರಿದಿದ್ದು, ಅವರ ಚೇತರಿಕೆಗಾಗಿ ದೇಶದ ಎಲ್ಲೆಡೆ ಕೋಟ್ಯಾಂತರ ಅಭಿಮಾನಿಗಳು ದೇವರ ಮೊರೆ ಹೋಗಿದ್ದಾರೆ. ನುರಿತ ವೈದ್ಯರುಗಳ ತಂಡ ಎಸ್‌ಪಿಬಿ ಆರೋಗ್ಯದ...

ಸಿಬಿಎಸ್‌ಇ 12ನೇ ತರಗತಿ ಪೂರಕ ಪರೀಕ್ಷೆ ಫಲಿತಾಂಶ ಅಕ್ಟೋಬರ್ 10ರ ಒಳಗೆ ಪ್ರಕಟ

ನವದೆಹಲಿ: ಸಿಬಿಎಸ್‌ಇ ೧೨ನೇ ತರಗತಿ ಪೂರಕ ಪರೀಕ್ಷೆ ಫಲಿತಾಂಶವನ್ನು ಅಕ್ಟೋಬರ್ ೧೦ರ ಒಳಗೆ ಪ್ರಕಟಿಸಲಾಗುವುದು ಎಂದು ಸಿಬಿಎಸ್‌ಇ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದೆ. ಸಿಬಿಎಸ್‌ಇ ಫಲಿತಾಂಶ ಅಧಿಕೃತ ಸಿಬಿಎಸ್‌ಇ ವೆಬ್‌ಸೈಟ್‌ಗಳಲ್ಲಿ ಲಭ್ಯವಾಗಲಿದೆ. ಪೂರಕ ಪರೀಕ್ಷೆ ಹಾಗೂ...

ಡ್ರಗ್‌‌ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ: ಸಂಜನಾ, ರಾಗಿಣಿ ‘ಇಡಿ’ ವಿಚಾರಣೆಗೆ ಕೋರ್ಟ್ ಅಸ್ತು

ಬೆಂಗಳೂರು: ಸ್ಯಾಂಡಲ್‌‌ವುಡ್‌ ಡ್ರಗ್‌‌‌ ಪ್ರಕರಣ ದಿನದಿಂದ ದಿನಕ್ಕೆ ಹೊಸ ಆಯಾಮ ಪಡೆದುಕೊಳ್ಳುತ್ತಿದ್ದು, ನಟಿ ಸಂಜನಾ ಗಲ್ರಾನಿ ಹಾಗೂ ರಾಗಿಣಿ ದ್ವಿವೇದಿ ಸೇರಿದಂತೆ ಐವರು ಆರೋಪಿಗಳನ್ನು ವಿಚಾರಣೆ ನಡೆಸಲು ಜಾರಿ ನಿರ್ದೇಶನಾಲಯಕ್ಕೆ ಎನ್‌‌ಡಿಪಿಎಸ್‌‌‌ ವಿಶೇಷ...
error: Content is protected !!