ಮೈಸೂರು: ಮೈಸೂರು ತಾಲ್ಲೂಕಿನಾದ್ಯಂತ ಪೂರ್ವ ಮುಂಗಾರಿನಲ್ಲಿ ಬಿದ್ದ ಮಳೆಗೆ ರೈತರು ಉದ್ದು, ಹೆಸರು ಹಾಗೂ ಅಲಸಂದೆ ಬೆಳೆಗಳನ್ನು ಬಿತ್ತಿದ್ದು, ಈ ಬೆಳೆಗಳಲ್ಲಿ ಹೆಚ್ಚಾಗಿ ಹಳದಿ ಮಚ್ಚೆರೋಗ ಕಾಣಿಸಿಕೊಂಡಿದ್ದು, ತಾಕುಗಳು ಸಂಪೂರ್ಣ ಹಳದಿ ಬಣ್ಣಕ್ಕೆತಿರುಗಿ ಕಾಳುಗಳ ಉತ್ಪತ್ತಿ ಹಾಗೂ ಗುಣಮಟ್ಟದ ಮೇಲೆ ದುಷ್ಪರಿಣಾಮವನ್ನುಂಟು ಮಾಡುತ್ತದೆ.
ಹೆಸರು ಮತ್ತು ಉದ್ದು ಬೆಳೆಯಲ್ಲಿ ಹಳದಿ ಮಚ್ಚೆರೋಗ
ಈ ಹಸಿರು ಮಿಶ್ರಿತ ಹಳದಿ ರೋಗವು ಮೊದಮೊದಲುಒಂದುಅಥವಾಎರಡು ಗಿಡಗಳಿಗೆ ಕಾಣಿಸಿಕೊಂಡು ನಂತರ ಬಿಳಿನೊಣಗಳ ಮೂಲಕ ಅತಿ ಹೆಚ್ಚು ವೇಗವಾಗಿ ಪ್ರಸಾರವಾಗುತ್ತಿದೆ.
ಅಲಸಂದೆ ಹಳದಿ ರೋಗ
ಈ ರೋಗವು ಅಲಸಂದೆ ತಾಕುಗಳಲ್ಲಿ ಹೆಚ್ಚು ಕಂಡುಬoದಿದ್ದು ಎಫಿಡ್ ಎಂಬ ಹೇನಿನ ಮೂಲಕ ಹರಡುತ್ತಿದೆ. ವಾತಾವರಣದಲ್ಲಿ ಹೆಚ್ಚು ಉಷ್ಣಾಂಶ ಹಾಗೂ ತೇವಾಂಶಗಳಿದ್ದು, ಈ ಕೀಟವುತ್ವರಿತಗತಿಯಲ್ಲಿ ಸಂತಾನಾಭಿವೃದ್ಧಿ ಮಾಡಿ ಮರಿ ಹಾಗೂ ರೆಕ್ಕೆಬಂದoತಹ ಹೇನಿಗಳ ಮೂಲಕ ಹಾರಿಒಂದುಗಿಡದಿoದ ಮತ್ತೊಂದು ಗಿಡಕ್ಕೆರಸ ಹೀರುವ ಮೂಲಕ ರೋಗವನ್ನು ಪ್ರಸಾರ ಮಾಡುತ್ತದೆ.
ಉದ್ದು, ಹೆಸರು ಹಾಗೂ ಅಲಸಂದೆ ಬೆಳೆಗಳಿಗೆ ಹಳದಿ ಮಚ್ಚೆರೋಗ ಬಂದಿದ್ದಲ್ಲಿ ರೈತರು ಕೀಟನಾಶಕಗಳಾದ ರೋಗರ್ ೧.೭೫ ಮಿ.ಲೀ. ಒಂದು ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸುವುದು ಅಥವಾ ಇಮಿಡಾಕ್ಲೋಪ್ರಿಡ್ 0.50 ಮಿ.ಲೀ. ಒಂದು ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸುವುದು. ಸಿಂಪಡಣೆ ಆದ ನಂತರರೋಗಗ್ರಸ್ತಗದ್ದೆಅಥವಾ ಹೊಲಗಳಲ್ಲಿರುವ ಹಳದಿ ಮಿಶ್ರಿತ ಗಿಡಗಳನ್ನು ಕಿತ್ತು ನಾಶಪಡಿಸುವುದು.
ಹೆಚ್ಚಿನ ಮಾಹಿತಿಗಾಗಿ ಹೋಬಳಿ ಮಟ್ಟದರೈತ ಸಂಪರ್ಕಕೇoದ್ರವನ್ನು ಸಂಪರ್ಕಿಸುವoತೆ ಸಹಾಯಕ ಕೃಷಿ ನಿರ್ದೇಶಕ ವೀರಣ್ಣ. ಕೆ.ಪಿ ತಿಳಿಸಿದ್ದಾರೆ.