Wednesday, June 29, 2022

Latest Posts

ಮೈಸೂರು| ತೆಂಗು, ಮಾವು ಸೀಬೆ ಬೆಳೆಯಿರಿ ಕಾಸು ಪಡೆಯಿರಿ!

ಮೈಸೂರು: ಈ ಬಾರಿ ಉತ್ತಮ ಮಳೆಯಾಗಿದ್ದು, ತೆಂಗು, ಮಾವು, ಸೀಬೆ, ಬಾಳೆ ಬೆಳೆಯುವ ರೈತರು ನರೇಗಾದ ಮೂಲಕ ಹಣ ಪಡೆಯುವಂತೆ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಡಿ.ರುದ್ರೇಶ್ ತಿಳಿಸಿದರು.

ಈ ಸಂಬಂಧ ಸುದ್ದಿಗೋಷ್ಠಿ ನಡೆಸಿದ ಅವರು, ಕಳೆದ ಬಾರಿ 1ಲಕ್ಷ 20 ಸಾವಿರ ಮಾನವ ದಿನ ನೀಡಲಾಗಿದ್ದು, 3 ಲಕ್ಷ ಮಾನವ ದಿನಗಳನ್ನು ನೀಡುವ ಗುರಿ ಹೊಂದಲಾಗಿದೆ. ನರೇಗಾ ಅಡಿಯಲ್ಲಿ 1 ಎಕರೆಗೆ 50 ಸಸಿಗಳನ್ನು ನೇಡುವುದಕ್ಕೆ 25 ಸಾವಿರ ರೂ.ಗಳ ವರೆಗೂ ಹಣ ಪಡೆಯಬಹುದಾಗಿದೆ. ಗ್ರಾ.ಪಂ.ಯಲ್ಲಿ ಜಾಬ್ ಕಾರ್ಡ್ ಪಡೆಬೇಕಿದೆ. ಜಾಬ್ ಕಾರ್ಡ್, ಆರ್ ಟಿಸಿ, ಆಧಾರ್, ಬಿಪಿಎಲ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಅನ್ನು ನೀಡಬೇಕು. ಸಸಿಗಳನ್ನು ರಿಯಾಯಿತಿ ದರದಲ್ಲಿ ನೀಡಲಾಗುವುದು ಎಂದು ತಿಳಿಸಿದರು.

250 ಟನ್ ಚಿತ್ತೂರು, ಮಹಾರಾಷ್ಟ್ರ ಕಡೆಗೆ ನಿತ್ಯ ಹೋಗುತ್ತಿದ್ದು, ಲಾಕ್ ಟೌನ್ ಸಂದರ್ಭದಲ್ಲಿ ದಲ್ಲಿ ಹೂ ಬಿಟ್ಟು ನಷ್ಟ ಆಗಿರುವ ಹೂ ಬೆಳೆಗಾರರಿಗೆ ಪರಿಹಾರ ನೀಡಲಾಗುವುದು. 100 ರಿಂದ 150 ಹೆಕ್ಟೇರ್ ಮಂದಿಗೆ ಈ ಸಹಾಯಧನ ಸಿಗಲಿದೆ ಎಂದು ಹೇಳಿದರು. ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕರಾದ ಮಮತಾ, ಶಾಂತಿಲಾಲ್ ಗಾಂಧಿ ಸುದ್ದಿಗೋಷ್ಠಿಯಲ್ಲಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss