ಮೈಸೂರು: ಪ್ರತಿ ವರ್ಷದಂತೆ ಈ ಬಾರಿಯ ಸರಳ ದಸರಾದಲ್ಲಿ ನಗರದಾದ್ಯಂತ ವಿದ್ಯುತ್ ದೀಪಾಲಂಕಾರ ಇರಲಿದೆ. ಚೆಸ್ಕಾಂ ಇದರ ಜವಾಬ್ದಾರಿ ಹೊರುತ್ತದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.
ಮೈಸೂರಿನ ಅರಮನೆ ಆವರಣದಲ್ಲಿ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಸುವ ಸಂಬAಧ ಕಮಿಟಿ ಮಾಡಲಿದ್ದೇವೆ. ಅರಮನೆಯಂಗಳದಲ್ಲಿ 9 ದಿನಗಳ ಕಾರ್ಯಕ್ರಮ ಇರಲಿದೆ. 9 ದಿನಗಳ ಕಾಲ ರಾಷ್ಟಿಯ, ಅಂತರಾಷ್ಟಿಯ ಖ್ಯಾತಿಯ ಕಲಾವಿದರಿಂದ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಒಂದು ದಿನಕ್ಕೆ ಒಂದು ಕಾರ್ಯಕ್ರಮ ಇರಲಿದೆ ಎಂದು ಹೇಳಿದರು.
ದಸರಾದ ಜಂಬೂ ಸವಾರಿ ಮೆರವಣಿಗೆಯು ಅರಮನೆಯಂಗಳದಲ್ಲಿ ಮಾತ್ರ ನಡೆಯಲಿದೆ. ನಂದಿಧ್ವಜ , ಚಾಮುಂಡೇಶ್ವರಿ ಪೂಜೆಗೆ ಲಿಮಿಟೆಡ್ ಗಣ್ಯರು ಭಾಗಿಯಾಗಲಿದ್ದಾರೆ. ಅಂದು ಸಿಎಂ ಆಗಮಿಸಲಿದ್ದಾರೆ. ಸುಮಾರು ಎರಡು ಸಾವಿರ ಜನ ದಸರಾ ವೀಕ್ಷಿಸಲು ಮನವಿ ಮಾಡುತ್ತೇವೆ. ಕೇಂದ್ರ ಯಾವ ರೀತಿ ಅನುಮತಿ ಕೊಡುತ್ತಾರೋ ಆ ರೀತಿ ವೀಕ್ಷಣೆಗೆ ವ್ಯವಸ್ಥೆ ಮಾಡುತ್ತೇವೆ. ನೇರ ಪ್ರಸಾರದ ಮೂಲಕ ಜಂಬೂ ಸವಾರಿ , ಸಾಂಸ್ಕತಿಕ ಕಾರ್ಯಕ್ರಮ ವೀಕ್ಷಿಸಲು ವ್ಯವಸ್ಥೆ ಮಾಡಲಾಗುತ್ತದೆ ಎಂದರು.
ಒOಭತ್ತು ದಿನಗಳ ಕಾಲ ಚಾಮುಂಡೇಶ್ವರಿ ದೇಗುಲದಲ್ಲೂ ವಿಶೇಷ ಪೂಜಾ ಕೈಂಕರ್ಯ:
ಒಂಭತ್ತು ದಿನಗಳ ಕಾಲ ಚಾಮುಂಡೇಶ್ವರಿ ದೇಗುಲದಲ್ಲೂ ವಿಶೇಷ ಪೂಜಾ ಕೈಂಕರ್ಯ ನಡೆಯಲಿದೆ. ದಸರಾ ಉದ್ಘಾಟಕರು ಯಾರು ಎಂಬುದನ್ನ ಸಿಎಂ ಫೈನಲ್ ಮಾಡ್ತಾರೆ. ದಸರಾ ಉದ್ಘಾಟನೆಗೆ ಡಾ.ರವಿ, ಡಾ.ಮಂಜುನಾಥ್ ಹೆಸರು ಕೇಳಿ ಬಂದಿದೆ. ಅದನ್ನ ಸಿಎಂ ಫೈನಲ್ ಮಾಡಲಿದ್ದಾರೆ. ಐದು ಜನ ಕೊರೋನ ವಾರಿಯರ್ಸ್ನಲ್ಲಿ ಒಬ್ಬರು ಮಾತ್ರ ದಸರಾ ಉದ್ಘಾಟನೆ ಮಾಡಲಿದ್ದಾರೆ ಎಂದರು.
ನನ್ನ ಅವಧಿಯಲ್ಲಿ ದಸರಾ ಲೆಕ್ಕ ಲೋಪವಾಗಲು ಬಿಡಲ್ಲ. ನಾನು ದಸರಾ ಖರ್ಚು ವೆಚ್ಚದ ಬಗ್ಗೆ ಮಾಹಿತಿ ಕೊಟ್ಟೆ ಕೊಡ್ತೀನಿ ಎಂದು ತಿಳಿಸಿದರು.