Wednesday, August 10, 2022

Latest Posts

ಮೈಸೂರು: ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದ ಆದಾಯಕ್ಕೂ ತಟ್ಟಿದ ಕೊರೋನಾ ಎಫೆಕ್ಟ್

ಮೈಸೂರು: ಮಹಾಮಾರಿ ಕೊರೋನಾ ವೈರಾಣು ಸೋಂಕು ತಡೆಯಲು ಕೈಗೊಂಡಿರುವ ಕ್ರಮಗಳು ದೇವಾಲಯಗಳ ಆದಾಯಕ್ಕೂ ದೊಡ್ಡ ಹೊಡೆತವನ್ನೇ ನೀಡಿವೆ. ದಕ್ಷಿಣ ಕಾಶಿ ಎಂದು ಹೆಸರಾಗಿರುವ ಮೈಸೂರು ಜಿಲ್ಲೆಯ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯಕ್ಕೂ  ಬಾರಿ ಪ್ರಮಾಣದಲ್ಲಿ ಆದಾಯ ಖೋತಾ ಆಗಿದೆ.

ಲಾಕ್ ಡೌನ್, ಭಕ್ತರ ಪ್ರವೇಶ ನಿಷೇಧದಿಂದಾಗಿ ಈವರೆಗೂ ಸುಮಾರು ೫ ಕೋಟಿ ರೂ ಆದಾಯ ಶ್ರೀಕಂಠೇಶ್ವರಿನಿಗೆ ಕಡಿಮೆಯಾಗಿದೆ.
ಕಳೆದ ಬಾರಿಯ ಸಂಗ್ರಹಕ್ಕೆ ಹೋಲಿಸಿದರೆ ಈ ಬಾರಿ ೪೧,೫೭,೨೦೪ ರೂ ಕಡಿಮೆ ಸಂಗ್ರಹವಾಗಿದೆ. ಆಗಸ್ಟ್ ೧೧ ರ ಗೋಲಕ ಪರ್ಕಾವಣೆಯಲ್ಲಿ ಸಂಗ್ರಹವಾದ ಭಕ್ತರ ಕಾಣಿಕೆ ೬೯,೨೪೯,೦೦ ರೂ ಆಗಿದೆ. ಕಳೆದ ಜನವರಿ ತಿಂಗಳಲ್ಲಿ ೧,೧೦,೮೨,೯೦೦ ರೂ. ಹಣ ಸಂಗ್ರಹವಾಗಿತ್ತು.

ನ0ಜನಗೂಡಿನ ಜುಬಿಲಿಯಂಟ್ ಔಷಧ ಕಂಪನಿಯ ಕಾರ್ಮಿಕರಿಗೆ ಕೊರೋನಾ ಸೋಂಕು ವ್ಯಾಪಿಸಿದ ಹಿನ್ನಲೆಯಲ್ಲಿ ಇಡೀ ನಂಜನಗೂಡು ಪಟ್ಟಣವನ್ನು ಸೀಲ್‌ಡೌನ್ ಮಾಡಿ, ಜನರ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು. ಆ ನಂತರ ಸೋಂಕು ಹರಡುವಿಕೆ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದರೂ, ವರ‍್ಯಾಂತದ ದಿನಗಳಲ್ಲಿ ಹಾಗೂ ಅಮಾವಾಸೆ, ಹುಣ್ಣಿಮೆ ದಿನಗಳಲ್ಲಿ ಸಾವಿರಾರು ಜನ ಭಕ್ತರು ದೇವಸ್ಥಾನಕ್ಕೆ ಬರುವುದನ್ನು ತಡೆಯುವ ನಿಟ್ಟಿನಲ್ಲಿ ದೇವಾಲಯಕ್ಕೆ ಪ್ರವೇಶವನ್ನು ನಿಷೇಧಿಸಲಾಗಿತ್ತು.

ಹಿನ್ನಲೆ ನಂಜನಗೂಡು ದೇವಾಲಯಕ್ಕೆ ಭಕ್ತರಿಗೆ ಪ್ರವೇಶಕ್ಕೆ ನಿಷೇಧ ವಿಧಿಸಲಾಗಿತ್ತು. ಅಲ್ಲದೆ ನಂಜನಗೂಡು ಪಂಚ ಮಹಾರಥೋತ್ಸವ ಈ ಬಾರಿ ವಿಜೃಂಭಣೆಯಿ0ದ ನಡೆಯಲಿಲ್ಲ, ಲಕ್ಷಾಂತರ ಭಕ್ತರಿಗೆ ಪ್ರವೇಶವನ್ನು ನಿಷೇಧಿಸಿ, ದೇವಸ್ಥಾನದೊಳಗೆ ಪುಟ್ಟ ರಥದಲ್ಲಿ ಸಾಂಕೇತಿಕವಾಗಿ ರಥೋತ್ಸವವನ್ನು ನಡೆಸಲಾಗಿತ್ತು. ಈ ಎಲ್ಲಾ ಕಾರಣಗಳಿಂದಾಗಿ ದೇವಾಲಯದ ಆದಾಯ ಸಂಗ್ರಹ ಭಾರೀ ಪ್ರಮಾಣದಲ್ಲಿ ಕಡಿಮೆಯಾಗಿದೆ. ಇನ್ನು ದೇವಾಲಯದ ಹುಂಡಿಗೆ ನಿಷೇಧಿತ ನೋಟುಗಳನ್ನು ಭಕ್ತರು ಕಾಣಿಕೆಯಾಗಿ ಹಾಕುವುದನ್ನು ಮುಂದುವರಿಸಿದ್ದಾರೆ.

ಇದರಿಂದಾಗಿ ಈ ಬಾರಿಯ ಎಣಿಕೆಯಲ್ಲಿಯೂ ೧೧,೫೦೦ ರೂ ನಿಷೇಧಿತ ನೋಟುಗಳು ಪತ್ತೆಯಾಗಿವೆ.
ಕಳೆದ ಬಾರಿಯ ಎಣಿಕೆಯಲ್ಲಿ ೮೦,೫೦೦ರೂ. ಮೌಲ್ಯದ ನಿಷೇಧಿತ ನೋಟುಗಳು ಪತ್ತೆಯಾಗಿತ್ತು. ಲಾಕ್ ಡೌನ್ ನಲ್ಲೂ ನಂಜು0ಡೇಶ್ವರ ದೇವಾಲಯದಲ್ಲಿ ವಿದೇಶಿ ಕರೆನ್ಸಿ ಸಂಗ್ರಹವಾಗಿದೆ. ಒಟ್ಟು ೭ ವಿದೇಶಿ ಕರೆನ್ಸಿಗಳು ಹುಂಡಿಯಲ್ಲಿ ಪತ್ತೆಯಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss