Monday, July 4, 2022

Latest Posts

ಮೈಸೂರು| ‘ನೂತನ ರಾಷ್ಟ್ರೀಯ ಶಿಕ್ಷಣ ನೀತಿ-ಅನುಷ್ಠಾನ ಸವಾಲುಗಳು – ಅವಕಾಶಗಳು’ ವಿಚಾರ ಸಂಕಿರಣ ಉದ್ಘಾಟನೆ

ಮೈಸೂರು: ವಿವಿಧ ಶಿಕ್ಷಣ ಸಂಸ್ಥೆಗಳು ಹೊಣೆಗಾರಿಕೆಯಿಂದ ಕೆಲಸ ಮಾಡಲು ನಾವೇ ಹಾಕಿಕೊಂಡಿರುವ ತಡೆಗೋಡೆಗಳನ್ನು ಒಡೆಯುವ ಅಗತ್ಯತೆ ಇದ್ದು, ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ಇಂತಹ ಸಹಯೋಗಗಳಿಗೆ ಹೆಚ್ಚಿನ ಅವಕಾಶಗಳನ್ನು ನೀಡುತ್ತದೆ ಎಂದು ಉಪಮುಖ್ಯಮಂತ್ರಿ ಡಾ. ಸಿ. ಎನ್. ಅಶ್ವಥ್ ನಾರಾಯಣ್ ಹೇಳಿದರು.
ಮೈಸೂರಿನ ಜೆಎಸ್‌ಎಸ್ ಮಹಾವಿದ್ಯಾಪೀಠ, ಜೆಎಸ್‌ಎಸ್ ಉನ್ನತ ಶಿಕ್ಕಣ ಮತ್ತು ಸಂಶೋಧನಾ ಅಕ್ಯಾಡೆಮಿ ಮತ್ತು ಜೆಎಸ್‌ಎಸ್ ವಿಜ್ಞಾನ ಮತ್ತು ತಾಂತ್ರಿಕ ವಿಶ್ವವಿದ್ಯಾನಿಲಯಗಳ ಸಹಯೋಗದಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿ – ಅನುಷ್ಠಾನ ಸವಾಲುಗಳು ಮತ್ತು ಅವಕಾಶಗಳು ಎಂಬ ಒಂದು ದಿನದ ವಿಚಾರ ಸಂಕಿರಣವನ್ನು ಅಂತರ್ಜಾಲದ ಮೂಲಕ ಉದ್ಫಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಶಿಕ್ಷಣ ಸಚಿವ ಎಸ್ ಸುರೇಶ್‌ಕುಮಾರ್ ಮಾತನಾಡಿ, ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಷ್ಟಾನಕ್ಕೆ ತರಲು ಕರ್ನಾಟಕ ಸರ್ಕಾರ ಮುಂಚೂಣಯಲ್ಲಿದ್ದು, ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಸುತ್ತೂರು ಮಠದ ಪೀಠಾಧಿಪತಿಗಳಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು, ೩೪ ವರ್ಷಗಳ ನಂತರ ದೇಶಕ್ಕೆ ಹೊಸ ಶಿಕ್ಷಣ ನೀತಿ ಬಂದಿದೆ. ಸಂಸ್ಧೆಗಳಿಗೆ ಸ್ವಾಯತ್ತತೆ ನೀಡುವ ಬಗ್ಗೆ ಒತ್ತು ನೀಡಲಾಗಿದೆ. ಇದರಿಂದ ಸಂಸ್ಥೆಗಳ ಮೇಲೆ ಗುರತರವಾದ ಜವಾಬ್ದಾರಿ ಇರಲಿದೆ. ಸಮರ್ಪಕವಾಗಿ ನಡೆಸಲು ಸಿದ್ಧತೆ ಮಾಡಿಕೊಳ್ಳುವ ಅಗತ್ಯವಿದೆ ಎಂದು ತಿಳಿಸಿದರು. ಜೆಎಸ್‌ಎಸ್ ವಿದ್ಯಾಪೀಠದ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಡಾ. ಸಿ. ಜಿ. ಬೆಟಸೂರಮಠ ಅವರು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಷ್ಟಾನಗೊಳಿಸುವ ಕುರಿತು ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಆಶಯ ಭಾಷಣ ಮಾಡಿದ ರಾಷ್ಟ್ರೀಯ ಶಿಕ್ಷಣ ನೀತಿ ಕರಡು ಸಮಿತಿಯ ಸದಸ್ಯರು ಹಾಗೂ ವಿಶ್ವವಿದ್ಯಾನಿಲಯ ಧನಸಹಾಯ ಅಯೋಗದ ಸದಸ್ಯರು ಆದ ಪ್ರೊ. ಎಂ. ಕೆ. ಶ್ರೀಧರ್, ಇದು ದೇಶದ ಮೂರನೆಯ ಶಿಕ್ಷಣ ನೀತಿಯಾಗಿದೆ. ದೇಶದ ಸಂಪೂರ್ಣ ಶಿಕ್ಷಣ ವ್ಯವಸ್ಥೆಯಲ್ಲಿ ಪ್ರಮುಖ ಸುಧಾರಣೆಗಳನ್ನು ತರಲಿದೆ. ಪ್ರಾಥಮಿಕ, ಪದವಿ, ಮತ್ತು ಎಂಜಿನಿಯರಿAಗ್ ನಂತರ ವೃತ್ತಿಪರ ಶಿಕ್ಷಣದ ವಿವಿಧ ಶಾಖೆಗಳು ಒಂದು ವಲಯದ ಅಡಿಯಲ್ಲಿ ಹೊರಹೊಮ್ಮಲು ಈ ನೀತಿ ಸಹಾಯಕವಾಗಲಿದೆ. ಬಹು ಹಂತದ ಉನ್ನತ ಶಿಕ್ಷಣ ವ್ಯವಸ್ಥೆ ಮತ್ತು ಸರಳೀಕೃತ ವಿಶ್ವವಿದ್ಯಾನಿಲಯ ವ್ಯವಸ್ಥೆ ಸಹ ಸೂಚಿಸುತ್ತದೆ. ಹದಿನೈದು ಲಕ್ಷ ಶಿಕ್ಷಕರ ಅಭಿಪ್ರಾಯಗಳು ಮತ್ತು ಶಿಕ್ಷಣ ತಜ್ಞರ ಸಲಹೆಗಳನ್ನು ಪಡೆದು ೫ ವರ್ಷಗಳ ಸುದೀರ್ಘ ಚರ್ಚೆಯ ನಂತರ ಇದನ್ನು ಜಾರಿಗೆ ತರಲಾಗಿದೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿಯ ಕಾರ್ಯನಿರ್ವಾಹಕ ನಿರ್ದೇಶಕ ಪ್ರೊ. ಗೋಪಾಲಕೃಷ್ಣ ಜೋಷಿರವರು ಬಹು ಶಿಸ್ತೀಯ ಸಂಶೋಧನೆಯ ಅಗತ್ಯದ ಬಗ್ಗೆ ಹೇಳಿದರು. ಸಂಶೋಧನೆಗೆ ಅನುಕೂಲವಾಗುವಂತ ಸಂಶೋಧನಾ ನಿಕಾಯಗಳ ಪರಿಕಲ್ಪನೆ ಬಗ್ಗೆ ತಿಳಿಸಿದರು.
ಮಧ್ಯಾಹ್ನದ ಅಧಿವೇಶನದಲ್ಲಿ ತಾಂತ್ರಿಕ ಶಿಕ್ಷಣ ಸಲಹೆಗಾರ ಪ್ರೊ.ಎಂ.ಹೆಚ್. ಧನಂಜಯ ವಿಷಯದ ಬಗ್ಗೆ ಪ್ರಸ್ತಾವನೆ ಮಂಡಿಸಿದರು. ನಿರ್ದೇಶಕರುಗಳಾದ ಶ್ರೀ ಬಿ. ಎ. ರಾಜಶೇಖರ, ಪ್ರೊ. ಮೊರಬದ ಮಲ್ಲಿಕಾರ್ಜುನ, ಶ್ರೀ ಆರ್. ಮಹೇಶ್, ಡಾ. ಸಿ. ರಂಗನಾಥಯ್ಯ, ಕುಲಪತಿಗಳಾದ ಡಾ. ಸುರೀಂದರ್ ಸಿಂಗ್, ಸಮಕುಲಾಧಿಪತಿಗಳಾದ ಡಾ. ಬಿ. ಸುರೇಶ್‌ರವರು ಸಂಸ್ಥೆಯ ವಿವಿಧ ವಿಭಾಗಗಳಿಂದ ಕ್ರಿಯÁತ್ಮಕವಾಗಿ ಜಾರಿಗೊಳಿಸುವ ಬಗೆಗೆ ವಿಚಾರಗಳನ್ನು ಮಂಡಿಸಿದರು. ಸಂಕಿರಣದಲ್ಲಿ ಭಾಗವಹಿಸಿದವರಿಂದ ಪ್ರಶ್ನೋತ್ತರ ಕಾರ್ಯಕ್ರಮ ನೆರವೇರಿತು. ಇದನ್ನು ಜಾರಿಗೆ ತರಲು ಸಮಿತಿಯೊಂದನ್ನು ರಚಿಸಿ, ಅದರ ವಿವರಗಳ  ಪರಿಶೀಲಿಸಿ, ನಿರಂತರ ಮಾರ್ಗದರ್ಶನ ಮಾಡಲು ವ್ಯವಸ್ಥೆ ಮಾಡುವುದೆಂದು ತೀರ್ಮಾನಿಸಲಾಯಿತು.
ಡಾ. ಬಿ. ಮಂಜುನಾಥ್, ಡಾ. ಎಸ್. ಎ. ಧನರಾಜ್, ಪ್ರೊ. ಕೆ. ಎಸ್. ಸುರೇಶ್, ಡಾ. ಸುಧೀಂದ್ರ ಭಟ್ ರವರುಗಳು ನಾಲ್ಕು ಗೋಷ್ಠಿಗಳನ್ನು ನಿರ್ವಹಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss