Tuesday, June 28, 2022

Latest Posts

ಮೈಸೂರು| ಬಡವರ ವಿದ್ಯುತ್ ಬಿಲ್ ಪಾವತಿಸುವ ಮೂಲಕ ವಿಜೇಂದ್ರ ಯಡಿಯೂರಪ್ಪ ಅಭಿಮಾನಿ ಬಳಗದಿಂದ ವಿನೂತನ ಸೇವೆ!

ಮೈಸೂರು: ಬಡವರು,ನಿರ್ಗತಿಕ ಜನರಿಗೆ ಆಹಾರದ ಪೊಟ್ಟಣ, ದಿನಸಿ, ಔಷಧಗಳನ್ನ ಪೂರೈಸುತ್ತಿದ್ದ ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹಾಗೂ ಸಿಎಂ ಪುತ್ರರಾದ ಬಿ.ವೈ.ವಿಜೇಂದ್ರ ಯಡಿಯೂರಪ್ಪ ಅಭಿಮಾನಿ ಬಳಗದಿಂದ ಬಡವರ ವಿದ್ಯುತ್ ಬಿಲ್ ಪಾವತಿಸುವ ಮೂಲಕ ವಿನೂತನ ಸೇವೆ ಮಾಡಿ ಗಮನ ಸೆಳೆಯಲಾಯಿತು.
ಅಗ್ರಹಾರ ವೃತ್ತದಲ್ಲಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಬಿಲ್ ರೀಡರ್ ಸಮ್ಮುಖದಲ್ಲಿ ೨೫ಕ್ಕೂ ಹೆಚ್ಚು ಕಡುಬಡವರ ಮನೆಯ ನಿವಾಸಿಗಳ ವಿದ್ಯುತ್ ಬಿಲ್ ಕಟ್ಟಲಾಯಿತು. ಬಡತನದ ನಿವಾಸಿಗಳು ಕೊಟ್ಟ ಬಿಲ್‌ಗೆ ತಕ್ಕಂತೆ ಹಣವನ್ನ ಪಾವತಿಸಿ ರಶೀತಿ ಪಡೆಯಲಾಯಿತು. ೨೦೦ರಿಂದ ೩೦೦ರು.ಒಳಗೆ ಬಂದಿರುವ ಬಿಲ್‌ನ್ನ ಪಾವತಿಸಿ ಅವರ ಮನೆಯಲ್ಲಿ ವಿದ್ಯುತ್ ಕಡಿತವಾಗದಂತೆ ನೋಡಿಕೊಳ್ಳುವಂತೆ ಮಾಡಲಾಯಿತು. ಈ ಸಂದರ್ಭದಲ್ಲಿ ಬಡವರ ಮನೆಯ ವಿದ್ಯುತ್ ಬಿಲ್ ಪಾವತಿಸಿದ ಮಾಜಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ L.R ಮಾದೇವಸ್ವಾಮಿ ಮಾತನಾಡಿ ಕಳೆದ ಒಂದೂವರೆ ತಿಂಗಳಿಂದ ಬಡವರು,ನಿರಾಶ್ರಿತರು,ಕೂಲಿ ಕಾರ್ಮಿಕರಿಗೆ ಮಧ್ಯಾಹ್ನದ ಊಟದ ಪೊಟ್ಟಣ ವಿತರಿಸಲಾಗುತ್ತಿದೆ. ಇದುವರೆಗೂ ಶ್ರೀರಾಂಪುರ,ಮಹದೇವಪುರ, ರಮಾಬಾಯಿನಗರ, ಆಲನಹಳ್ಳಿ, ಚಿಕ್ಕಹಳ್ಳಿ,ನಾಚನಹಳ್ಳಿಪಾಳ್ಯ ಸೇರಿ ೨೫ಕ್ಕೂ ಹೆಚ್ಚು ಗ್ರಾಮಗಳ ಸಾವಿರಾರು ಕುಟುಂಬಕ್ಕೆ ದಿನನಿತ್ಯದ ಆಹಾರ ಕಿಟ್‌ಗಳನ್ನು ಕೊಡಲಾಗುತ್ತಿದೆ. ಕೂಲಿ ಕೆಲಸ ಇಲ್ಲದೆ ಪರಿತಪಿಸುತ್ತಿದ್ದ ಅನಾರೋಗ್ಯಪೀಡಿತ ಜನರು ಔಷಧಕ್ಕಾಗಿ ತೊಂದರೆಪಡದಂತೆ ಅವರವರ ಮನೆಗೆ ತೆರಳಿ ಔಷಧ ಚೀಟಿ ಪಡೆದು,ಅದನ್ನ ಖರೀದಿಸಿ ಅವರಿಂದ ಕಡೆಗೆ ವಿತರಣೆ ಮಾಡಲಾಗಿದೆ ಎಂದು ನುಡಿದರು. ೩೦೦ಕ್ಕೂ ಹೆಚ್ಚು ಮಂದಿಗೆ ಉಚಿತ ಔಷಧ ವಿತರಿಸಿದ್ದು, ಯಾರೇ ಬಡವರು ದೂರವಾಣಿ ಮೂಲಕ ಸಮಸ್ಯೆ ಹೇಳಿಕೊಂಡಾಗ ಅಂತವರಿಗೆ ಔಷಧ ಕೊಡಿಸಲಾಗಿದೆ.ಇದರಿಂದಾಗಿ ಅನೇಕರು ನೆಮ್ಮದಿಯಿಂದ ಮನೆಯಲ್ಲಿದ್ದಾರೆ ಎಂದರು.
ಬಿಜೆಪಿಮಹಿಳಾ ಮುಖಂಡರಾದ ಲಕ್ಷ್ಮೀದೇವಿ ಮಾತನಾಡಿ, ಬಿ.ವೈ.ವಿಜಯೇಂದ್ರ ಬಳಗದಿಂದ ನಿತ್ಯ ಬಡವರುವಾಸಿಸುವ ಬಡಾವಣೆಗಳಿಗೆ ಊಟ ಸರಬರಾಜು ಮಾಡುತ್ತೇಲೆ ಬಂದಿದ್ದೇವೆ. ಸರಕಾರ ವಿದ್ಯುತ್ ಬಿಲ್‌ನ್ನ ಪಾವತಿಸಲು ಸಮಯ ಇದ್ದರೂ ಕೂಲಿ ಕೆಲಸ ಮಾಡುವ ಬಡವರು ಮುಂದೆ ಕಟ್ಟಲು ಒತ್ತಡವಾಗಬಹುದೆಂದುಭಾವಿಸಿ ಮೊದಲ ಹಂತದಲ್ಲಿ ೨೫ ಜನರಿಗೆ ವಿದ್ಯುತ್ ಬಿಲ್ ಪಾವತಿಸಿದ್ದೇವೆ ಎಂದರು. ವಿಜಯೇಂದ್ರ ಅವರ ಸೂಚನೆಯಂತೆ ಬಡ ಫಲಾನುಭವಿಗಳನ್ನ ಆಯ್ಕೆ ಮಾಡಿ ೩೦೦ರು.ಒಳಗೆ ಮಾತ್ರ ಬಿಲ್ ಪಾವತಿಸಿದ್ದೇವೆ. ಮುಂದಿನ ತಿಂಗಳು ವಿದ್ಯುತ್ ಬಿಲ್ ಬಂದರೂ ಕೂಲಿ ಕೆಲಸ ಸಿಗುವುದರಿಂದ ಸಮಸ್ಯೆ ಉಂಟಾಗಲ್ಲ ಎಂದರು. ಮುಖಂಡರಾದ ಶ್ಯಾಮಲಾ ಬೇಕರಿ ಮಾಲೀಕರಾದ ಆನಂದ್, ನಿಖಿಲ್, ಮೆಲ್ಲಹಳ್ಳಿ ಮಹೇಶ್ . ಜಸ್ವಂತ್ .ಅನಿಲ್, ಅಶೋಕ್, ಸತೀಶ್, ವಿಕ್ರಮ ಅಯ್ಯಂಗಾರ್ ಅರಸೀಕೆರೆ ಉಮೇಶ್, ಹರೀಶ್ ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss