ಹೊಸದಿಗಂತ ವರದಿ ಮೈಸೂರು:
ಮರಕ್ಕೆ ಪೊಲೀಸ್ ಜೀಪ್ ಡಿಕ್ಕಿ ಹೊಡೆದು ಇಬ್ಬರು ಪೊಲೀಸರು ಸಾವಿಗೀಡಾದ ಧಾರುಣ ಘಟನೆ ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಸಿದ್ದನಕೊಪ್ಪಲು ಗೇಟ್ ಬಳಿ ಗುರುವಾರ ಮುಂಜಾನೆ 1.30ರ ವೇಳೆ ಯಲ್ಲಿ ನಡೆದಿದೆ
ಕೆ.ಆರ್.ನಗರ ಪೋಲಿಸ್ ಠಾಣೆಯ ಎ.ಎಸ್.ಐ ಮೂರ್ತಿ ಮತ್ತು ಸಿಬ್ಬಂದಿ ಶಾಂತಕುಮಾರ್ ಮೃತ ಪಟ್ಟವರು.ಈ ಇಬ್ಬರು ಪೊಲೀಸ್ ಠಾಣೆಯ ಜೀಪ್ ನಲ್ಲಿ ಬೇರ್ಯ, ಸಾಲಿಗ್ರಾಮ, ಚುಂಚನಕಟ್ಟೆ ಪೊಲೀಸ್ ಠಾಣೆಗಳ ಬೀಟ್ ಪರಿಶೀಲನೆ ನಡೆಸಿ ಕೆ.ಆರ್. ನಗರಕ್ಕೆ ತೆರಳುವಾಗ ಈ ಘಟನೆ ನಡೆದಿದೆ.
ನಿದ್ದೆಯ ಮಂಪರು ಇಲ್ಲವೇ ಬ್ರೇಕ್ ವೈಪಲ್ಯ ದಿಂದ ಈ ಘಟನೆ ನಡೆದಿರುವ ಸಾಧ್ಯತೆ ಇದೆ